ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣ ರಂಗೇರಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಭರಾಟೆ ಜೋರಾಗಿದೆ. ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರು ವಿಧಿವಶರಾದ ಕಾರಣಕ್ಕೆ ಎದುರಾಗಿರುವ ಉಪಚುನಾವಣೆ ಇದು. ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಮತ್ತು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ದಂಪತಿ ಪುತ್ರ ಸಮರ್ಥ್ ಶಾಮನೂರು ಕಾಂಗ್ರೆಸ್ ಸ್ಪರ್ಧಾಳು. ಚಿಕ್ಕವಯಸ್ಸಿನಲ್ಲೇ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿರುವ ಯುವ ನಾಯಕ.
ಯಾವುದೇ ಹಮ್ಮು ಬಿಮ್ಮು ಇಲ್ಲದೇ ಪ್ರಚಾರದಲ್ಲಿ ನಿರತರಾಗಿರುವ ಸಮರ್ಥ್ ಶಾಮನೂರು ಅವರ ಸರಳತೆ ಎಲ್ಲರನ್ನೂ ಸೆಳೆಯುತ್ತಿದೆ. ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಸಮರ್ಥ್ ಶಾಮನೂರು ಅವರ ತಾಳ್ಮೆ, ಹಿರಿಯರಿಗೆ ನೀಡುವ ಗೌರವ, ಸರಳತೆಯಿಂದ ಕೂಡಿದ ವ್ಯಕ್ತಿತ್ವ ವಿಶೇಷ ಆಕರ್ಷಣೆಯಾಗಿದೆ. ಮಾತಿನಲ್ಲಿ ಸಮರ್ಥ ಅರ್ಥ, ಹಿರಿಯರಿಗೆ ನೀಡುತ್ತಿರುವ ಗೌರವ, ಯುವಕರೊಟ್ಟಿಗೆ ಬೆರೆಯುತ್ತಿರುವುದು, ಪ್ರಚಾರದ ವೈಖರಿ, ಜನರನ್ನು ಸೆಳೆಯುವ ಬಗೆ ಪ್ರತಿಯೊಬ್ಬರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಎಲ್ಲಾ ವರ್ಗದ ಜನರು ಸಮರ್ಥ್ ಶಾಮನೂರು ಅವರ ಸರಳತೆಗೆ ಫಿದಾ ಆಗಿದ್ದಾರೆ. ದೊಡ್ಮನೆ ಹುಡುಗ ಎಂಬ ಯಾವುದೇ ಹಮ್ಮು ಬಿಮ್ಮು ಇಲ್ಲದೇ, ಸರಳತೆಯಿಂದ ಎಲ್ಲರಂತೆ ನಡೆದುಕೊಳ್ಳುವ ಮೂಲಕ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ
ವ್ಯಾಪ್ತಿಯಲ್ಲಿ ಮತದಾರರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಕೂಟಿಯಲ್ಲೇ ಪ್ರಚಾರ:
ಇನ್ನು ಕಾರಿನಲ್ಲಿ ಬಂದು ಪ್ರಚಾರ ಮಾಡುವುದಕ್ಕಿಂತ ಏರಿಯಾಗಳಿಗೆ ಹೋಗುತ್ತಿರುವ ಸಮರ್ಥ್ ಶಾಮನೂರು ಸ್ಕೂಟಿಯಲ್ಲಿ ಹೋಗುತ್ತಿದ್ದಾರೆ. ಸ್ಕೂಟಿಯಲ್ಲಿ ಹಿಂಬದಿ ಕುಳಿತು ಜನರಿಗೆ ಹತ್ತಿರವಾಗುತ್ತಿದ್ದಾರೆ. ಹಿರಿಯರ ಬಗ್ಗೆ ಗೌರವ ಹೊಂದಿರುವ ಸಮರ್ಥ್ ಶಾಮನೂರು ಅವರ ಕಾಲಿಗೆ ಬಿದ್ದು ಆಶೀರ್ವದಿಸುವಂತೆ ಕೋರಿ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಇಷ್ಟು ಚಿಕ್ಕವಯಸ್ಸಿನಲ್ಲೇ ಹಿರಿಯರಿಗೆ ನೀಡುತ್ತಿರುವ ಗೌರವ, ಯುವಕರಿಗೆ ಕೊಡುತ್ತಿರುವ ಪ್ರೋತ್ಸಾಹ ಸಮರ್ಥ್ ಶಾಮನೂರು ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ ಎಂಬುದು ಮತದಾರರ ಮಾತು.
ವಿದ್ಯಾವಂತ ಯುವ ನಾಯಕ:
ಇನ್ನು ಸಮರ್ಥ್ ಶಾಮನೂರು ವಿದ್ಯಾವಂತ ಯುವ ನಾಯಕ. ಯುವ ಉದ್ಯಮಿ. 2015ರಿಂದ 2017ರವರೆಗೆ ಕೊಡೈಕೆನಾಲ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಶಾಲಾ ಶಿಕ್ಷಣ ಪಡೆದಿದ್ದಾರೆ. ಯುನೈಟೆಡ್ ಕಿಂಗ್ ಡಮ್ ನಲ್ಲಿ ಬಿಸಿನೆಸ್ ಮತ್ತು ಮ್ಯಾನೇಜ್ಮೆಂಟ್ನಲ್ಲಿ ಬಿ.ಎ ಪದವಿ ಪಡೆದಿದ್ದಾರೆ. ವಿದೇಶದಲ್ಲಿ ವ್ಯಾಸಂಗ ಮಾಡಿದ್ದರೂ ಭಾರತೀಯ ಸಂಸ್ಕೃತಿ, ಪರಂಪರೆ ಮರೆತಿಲ್ಲ.
ತಾತನಂತೆ ದೈವಭಕ್ತ ಸಮರ್ಥ್:
ಶಾಮನೂರು ಶಿವಶಂಕರಪ್ಪರು ದೈವಭಕ್ತರು. ಅವರಂತೆಯೇ ಸಮರ್ಥ್ ಶಾಮನೂರು ದೈವಭಕ್ತರು. ಪೂಜೆ, ಪುನಸ್ಕಾರದಲ್ಲಿ ನಿರತರಾಗುತ್ತಾರೆ. ತಾತನಷ್ಟೇ ಸೌಮ್ಯ ಸ್ವಭಾವಿ. ಗರ್ವ ಎಂಬುದೇ ಇಲ್ಲ. ಸಿಂಪಲ್ ಆಗಿ ಸಾಮಾನ್ಯರಂತೆ ಓಡಾಟ, ಜನರೊಟ್ಟಿಗಿನ ಬಾಂಧವ್ಯ ಎಲ್ಲರ ಮನ ಗೆದ್ದಿರುವುದಷ್ಟೇ ಅಲ್ಲ, ಭಾಷಾ ಪ್ರೌಢಿಮ್ಯತೆಯೂ ಇದೆ.
ಮನೆ ಮಗ:
ಯಾವುದೇ ಮನೆಗೆ ಹೋಗಲಿ. ಅವರನ್ನು ಮಾತನಾಡಿಸಿದಾಕ್ಷಣ ನಮ್ಮ ಮನೆ ಮಗ ಎಂಬ ಅನುಭವ ಜನರಿಗೆ ಆಗುತ್ತಿದೆ. ಪ್ರಚಾರಕ್ಕೆಂದು ಹೋದ ವೇಳೆಯಲ್ಲಿ ತೊಂದರೆಯಲ್ಲಿದ್ದ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮನೆ ಮಗನಂತೆ ನೆಲದ ಮೇಲೆ ಕುಳಿತು ತಾಳ್ಮೆಯಿಂದ ತದೇಕಚಿತ್ತದಿಂದ ಸಮಸ್ಯೆ ಆಲಿಸಿದರು. ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರಷ್ಟೇ ಅಲ್ಲ, ನಿಮ್ಮ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುತ್ತೇನೆ ಎಂಬ ಭರವಸೆಯನ್ನೂ ಸಮರ್ಥ್ ನೀಡಿದರು.
ನಿಮ್ಮೊಂದಿಗೆ ನಾನಿದ್ದೇನೆ:
ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ. ಕಷ್ಟ ಪರಿಹರಿಸಲು ಶ್ರಮಿಸುತ್ತೇನೆ. ಕೇವಲ ಭರವಸೆ ಕೊಟ್ಟು ಹೋಗುವವನಲ್ಲ. ನೀವು ನಿಮ್ಮ ಮನೆ ಮಗನಿಗೆ ತೋರುತ್ತಿರುವಷ್ಟೇ ಪ್ರೀತಿ ನನಗೂ ತೋರುತ್ತಿದ್ದೀರಾ. ಇದಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ ಎನ್ನುತ್ತಾರೆ ಸಮರ್ಥ್ ಶಾಮನೂರು.
ತಾತನೇ ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆ:
ತಾತ ಶಾಮನೂರು ಶಿವಶಂಕರಪ್ಪರು ದಾವಣಗೆರೆ, ಜಿಲ್ಲೆಗೆ ನೀಡಿರುವ ಕೊಡುಗೆ ಅಪಾರ. ಅಭಿವೃದ್ಧಿ ಮಾತ್ರವಲ್ಲ, ವಿದ್ಯಾಸಂಸ್ಥೆಗಳು, ವ್ಯಾಪಾರೋದ್ಯಮದ ಮೂಲಕ ಇಡೀ ವಿಶ್ವವೇ ದಾವಣಗೆರೆ ಜಿಲ್ಲೆಯತ್ತ ತಿರುಗಿ ನೋಡುವಂತೆ ಮಾಡಿದವರು. ದಾವಣಗೆರೆಯಲ್ಲಿ ಅಷ್ಟೇ ಅಲ್ಲ ಇಡೀ ರಾಜ್ಯಾದ್ಯಂತ ಅಪ್ಪಾಜಿ ಅಂತಾನೇ ಕರೆಯುತ್ತಾರೆ. ಅಷ್ಟೊಂದು ದೊಡ್ಡ ಹೆಸರು ತಾತರದ್ದು. ಅವರ ಜೀವನ, ಆದರ್ಶ, ಅಭಿವೃದ್ಧಿ ಪರ ಇದ್ದ ಕಾಳಜಿ, ಬಡವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ರೀತಿ ನಮಗೆಲ್ಲಾ ಮಾದರಿ. ಅವರಿಂದ ಕಲಿತಿರುವುದು ಸಾಕಷ್ಟಿದೆ. ಕಲಿಯುವುದೂ ಮತ್ತಷ್ಟಿದೆ. ಅವರು ಹಾಕಿ ಕೊಟ್ಟ ಮಾರ್ಗದಲ್ಲಿಯೇ ಮುನ್ನಡೆಯುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ನನಗೆ ಬೇಕು ಎನ್ನುತ್ತಾರೆ ಸಮರ್ಥ್ ಶಾಮನೂರು.
ಮನೆ ಮಗನ ಗೆಲ್ಲಿಸಿ:
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದೇನೆ. ಅಪ್ಪ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ತಾಯಿ ಪ್ರಭಾ ಮಲ್ಲಿಕಾರ್ಜುನ್ ಅವರ ಅಭಿವೃದ್ಧಿ ಪರ ಚಿಂತನೆಗಳು, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ನನಗೆ ಗೊತ್ತು. ಮತ್ತಷ್ಟು ಯೋಜನೆಗಳನ್ನು ತರಬೇಕು, ದಾವಣಗೆರೆ ಜಿಲ್ಲೆಯು ಇಡೀ ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯನ್ನಾಗಿಸಬೇಕು. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಬೇಕಾದ ಜವಾಬ್ದಾರಿ ಇದೆ. ತಾತ ಶಾಮನೂರು ಶಿವಶಂಕರಪ್ಪ ಅವರಿಗಿದ್ದ ಕನಸು ಉಳಿದಿದ್ದು, ಅದನ್ನು ನನಸು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎನ್ನುವ ಸಮರ್ಥ್ ಶಾಮನೂರು ಅವರು, ಈ ಬಾರಿಯ ಚುನಾವಣೆಯಲ್ಲಿ ಮನೆ ಮಗನಿಗೆ ಮತ ನೀಡಿ ಗೆಲ್ಲಿಸುತ್ತಾರೆಂಬ ವಿಶ್ವಾಸ ಇದೆ ಎನ್ನುತ್ತಾರೆ.
ಸುದ್ದಿಕ್ಷಣ ಲೈವ್ ಯೂಟ್ಯೂಬ್ ಚಾನೆಲ್ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ:
https://www.youtube.com/@suddikshanalive
- Davanagere Election News
- Davanagere South Bypoll
- Davanagere South Constituency.
- Karnataka Bypolls 2026
- Local News Davanagere.
- Samarth Shamanur
- Samarth Shamanur Congress Candidate
- Samarth Shamanur Education
- Samarth Shamanur Simplicity
- Shamanur Shivashankarappa Grandson
- SS Mallikarjun Son
- ಎಸ್. ಎಸ್. ಮಲ್ಲಿಕಾರ್ಜುನ್
- ಕರ್ನಾಟಕ ಉಪಚುನಾವಣೆ 2026
- ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್
- ಡಾ. ಪ್ರಭಾ ಮಲ್ಲಿಕಾರ್ಜುನ್
- ದಾವಣಗೆರೆ ದಕ್ಷಿಣ ಉಪಚುನಾವಣೆ
- ದಾವಣಗೆರೆ ನ್ಯೂಸ್
- ದಾವಣಗೆರೆ ರಾಜಕೀಯ
- ಶಾಮನೂರು ಶಿವಶಂಕರಪ್ಪ
- ಸಮರ್ಥ್ ಶಾಮನೂರು
- ಸರಳತೆಯ ಸಾಹುಕಾರ
- ಸ್ಕೂಟಿ ಪ್ರಚಾರ













Leave a comment