ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ಅವರು ಆನೆಕೊಂಡದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ಮನೆಮನೆಗೆ ತೆರಳಿ ಪ್ರಚಾರ ಪ್ರಾರಂಭಿಸಿದರು.
ಆನೆಕೊಂಡ ಹಾಗೂ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಕಾಲ್ನಡಿಗೆಯ ಮೂಲಕ ಮನೆಮನೆಗೆ ತೆರಳಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು ಮಾಡಿದರು. ಈ ಸಂದರ್ಭದಲ್ಲಿ ಹಿರಿಯ ನಾಗರೀಕರ ಆಶೀರ್ವಾದ ಪಡೆದ ಕ್ಷಣ ತಮ್ಮ ಮನಸ್ಸಿಗೆ ಸಂತಸ ತಂದಿದೆ ಎಂದು ಹೇಳಿದರು. “ಜನಶಕ್ತಿಯೇ ನನ್ನ ಶಕ್ತಿ” ಎಂದು ತಿಳಿಸಿದ ಅವರು, ಜನರ ಬೆಂಬಲವೇ ತಮ್ಮ ಬಲ ಎಂದು ಅಭಿಪ್ರಾಯಪಟ್ಟರು.
ಮಟ್ಟಿಕಲ್ಲು ಭಾಗದಲ್ಲಿಯೂ ವ್ಯಾಪಕ ಪ್ರಚಾರ ನಡೆಸಿದ ಸಮರ್ಥ್ ಶಾಮನೂರು, ಮನೆಮನೆಗೆ ಭೇಟಿ ನೀಡಿ ಕ್ರಮ ಸಂಖ್ಯೆ-3ರ ಹಸ್ತ ಗುರುತಿಗೆ ಮತ ನೀಡುವಂತೆ ಮನವಿ ಮಾಡಿದರು. ಸ್ಥಳೀಯ ಮುಖಂಡರೊಂದಿಗೆ ಸಂವಾದ ನಡೆಸಿ, ಜನರ ಅಭಿಪ್ರಾಯಗಳನ್ನು ಆಲಿಸಿ ತಮ್ಮ ಮುಂದಿನ ಅಭಿವೃದ್ಧಿ ಯೋಜನೆಗಳ ಬಗ್ಗೆ ವಿವರಿಸಿದರು.
ಪ್ರಚಾರದ ವೇಳೆ ಯುವಕರೊಂದಿಗೆ ಕಾಲ್ನಡಿಗೆ ಮೂಲಕ ಹೆಜ್ಜೆ ಹಾಕಿದ ಕ್ಷಣ ವಿಶೇಷವಾಗಿದ್ದು, ಅವರ ಉತ್ಸಾಹ ಮತ್ತು ಬೆಂಬಲ ಅವರಿಗೆ ಇನ್ನಷ್ಟು ಸೇವಾಭಾವನೆ ಮೂಡಿಸಿದೆ ಎಂದರು. ಜನರಿಂದ ದೊರೆತ ಪ್ರೀತಿ ಹಾಗೂ ತಮ್ಮ ತಾತ ಶಾಮನೂರು ಶಿವಶಂಕರಪ್ಪನವರ ಮೇಲಿನ ವಿಶ್ವಾಸವು ಜನಸೇವೆಯ ಹಾದಿಯಲ್ಲಿ ಮುಂದುವರಿಯಲು ಪ್ರೇರಣೆ ನೀಡಲಾಗಿದೆ ಎಂದರು.
ಎಸ್.ಎಸ್. ಜನಕಲ್ಯಾಣ ಟ್ರಸ್ಟ್ ಹಾಗೂ ಎಸ್.ಎಸ್. ಕೇರ್ ಟ್ರಸ್ಟ್ ಮೂಲಕ ಅವರು ನಡೆಯುತ್ತಿರುವ ಸೇವಾ ಕಾರ್ಯಗಳನ್ನು ಉಲ್ಲೇಖಿಸಿದ ಸಮರ್ಥ್ ಅವರು ಅದೇ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುವ ಭರವಸೆ ನೀಡಿದರು. “ಯುವಕನಾಗಿ ಜನಸೇವೆಗೆ ಬಂದಿದ್ದೇನೆ. ನನ್ನ ಉದ್ದೇಶ ಅಭಿವೃದ್ಧಿ ಮತ್ತು ಜನಸೇವೆ ಮಾತ್ರ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಎಲ್ಲರನ್ನು ಒಗ್ಗೂಡಿಸಿಕೊಂಡು ಮಾಡುವುದು ಅಭಿವೃದ್ಧಿಯಾಗಿದೆ. ಜನಸಂಪರ್ಕವೇ ತಮ್ಮ ಪ್ರಮುಖ ಬಲ. ಆರೋಗ್ಯಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವುದು ತಮ್ಮ ಕನಸಾಗಿದೆ. ಜನರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮುಖ್ಯತೆ ನೀಡುವುದು ನಿಜವಾದ ಅಧಿಕಾರವಾಗಿದೆ. “ಅಭಿವೃದ್ಧಿ ಮಾತಲ್ಲ, ಕಾರ್ಯದಲ್ಲೇ ಸಾಕ್ಷಿ” ಎಂದು ತಿಳಿಸಿದ ಸಮರ್ಥ್ ಶಾಮನೂರು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಜನತೆಗೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.
- Anekonda News
- Congress Campaign
- Davanagere Election 2026
- Davanagere South Constituency.
- Hand Symbol
- Janashaktiye Nanna Shakti
- Mattikallu Campaign.
- Samarth Shamanur
- Shamanur Shivashankarappa
- SS Care Trust
- ಆನೆಕೊಂಡ ಸುದ್ದಿ
- ಎಸ್.ಎಸ್. ಕೇರ್ ಟ್ರಸ್ಟ್
- ಕಾಂಗ್ರೆಸ್ ಪ್ರಚಾರ
- ಜನಶಕ್ತಿಯೇ ನನ್ನ ಶಕ್ತಿ
- ದಾವಣಗೆರೆ ಚುನಾವಣೆ 2026
- ದಾವಣಗೆರೆ ದಕ್ಷಿಣ ಕ್ಷೇತ್ರ ಅನುದಾನ
- ಮಟ್ಟಿಕಲ್ಲು ಪ್ರಚಾರ.
- ಶಾಮನೂರು ಶಿವಶಂಕರಪ್ಪ
- ಸಮರ್ಥ್ ಶಾಮನೂರು
- ಹಸ್ತದ ಗುರುತು





Leave a comment