Home ದಾವಣಗೆರೆ ಯುವಕರ ಉತ್ಸಾಹ, ಹಿರಿಯರ ಆಶೀರ್ವಾದವೇ ನನ್ನ ಗೆಲುವಿನ ಶಕ್ತಿಯಾಗಿದೆ: ಸಮರ್ಥ್ ಶಾಮನೂರು
ದಾವಣಗೆರೆಬೆಂಗಳೂರು

ಯುವಕರ ಉತ್ಸಾಹ, ಹಿರಿಯರ ಆಶೀರ್ವಾದವೇ ನನ್ನ ಗೆಲುವಿನ ಶಕ್ತಿಯಾಗಿದೆ: ಸಮರ್ಥ್ ಶಾಮನೂರು

Share
ಯುವಕ
Share

ದಾವಣಗೆರೆ: ಹರಿಹರ ತಾಲ್ಲೂಕಿನ ಶ್ರೀ ರಾಜನಹಳ್ಳಿ ವಾಲ್ಮೀಕಿ ಗುರುಪೀಠಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಬಳಿಕ ದಾವಣಗೆರೆಯ ಪಿ.ಬಿ ರಸ್ತೆಯಲ್ಲಿರುವ ಜೈನ ಮಂದಿರಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಈ ವೇಳೆ ಯುವಕರು ಹಾಗೂ ಸಮಾಜ ಬಾಂಧವರೊಂದಿಗೆ ಸಮಾಲೋಚನೆ ನಡೆಸಿದ ಅವರು, ಯುವಕರ ಉತ್ಸಾಹ ಮತ್ತು ಹಿರಿಯರ ಆಶೀರ್ವಾದವೇ ತಮ್ಮ ಗೆಲುವಿಗೆ ಶಕ್ತಿಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಂತರ ದಾವಣಗೆರೆಯ ರಿಂಗ್ ರಸ್ತೆ ಭಾಗದ ಶಾಂತಿಯನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಪ್ರಚಾರ ನಡೆಸಿದ ಅವರು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ತಮ್ಮನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡರುಗಳು, ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *