SUDDIKSHANA KANNADA NEWS/ DAVANAGERE/DATE:30_08_2025
ದಾವಣಗೆರೆ: ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪಿಸಲಾದ ಹಿಂದೂ ಮಹಾಗಣಪತಿಯ ಸಮಿತಿಯ ಅಧ್ಯಕ್ಷರ ಅಪೇಕ್ಷ ಮೇರೆಗೆ ಮಂಟಪ ಉದ್ಘಾಟನೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಭೇಟಿ ನೀಡಿದರು.
READ ALSO THIS STORY: BIG BREAKING: ದಾವಣಗೆರೆಯ ಮಟ್ಟಿಕಲ್ ಫ್ಲೆಕ್ಸ್ ವಿವಾದ: ಪಿಎಸ್ಐ ಸಚಿನ್ ಸೇರಿ ಮೂವರ ಸಸ್ಪೆಂಡ್!
ಈ ವೇಳೆ ಸಮಿತಿಯವರು ಪ್ರತಿಷ್ಠಾಪಿಸಿದ ಗಣಪತಿ ಮೂರ್ತಿಯ ದರ್ಶನ ಪಡೆದು ವಿಘ್ನ ನಿವಾರಕನ ದರ್ಶನವನ್ನು ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಎಂ. ಪಿ. ರೇಣುಕಾಚಾರ್ಯ ಪಡೆದು ಭಕ್ತಿ ಸಮರ್ಪಿಸಿದರು.
ಹಿಂದೂ ಮಹಾಗಣಪತಿಯ ಸಮಿತಿಯವರು ಪ್ರತಿ ವರ್ಷವೂ ಗಣೇಶ ಮೂರ್ತಿಯನ್ನು ವಿಭಿನ್ನ ರೀತಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಲಕ್ಷಾಂತರ ಮಂದಿ ಇಲ್ಲಿಗೆ ಆಗಮಿಸಿ
ದರ್ಶನ ಪಡೆಯುತ್ತಾರೆ. ಈ ವರ್ಷದ ವಿಶೇಷ ಅಲಂಕಾರದ ಬಗ್ಗೆ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಎಂ. ಪಿ. ರೇಣುಕಾಚಾರ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಆತ್ಮೀಯವಾಗಿ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಸಮಿತಿಯ ವತಿಯಿಂದ ನಿತ್ಯವೂ ಆಯೋಜಿಸಲಾಗುವ ಗಣೇಶ ಮಹಿಮೆ ಕುರಿತ ಸಾಕ್ಷ್ಯ ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಹಿಂದೂ ಮಹಾಗಣಪತಿ ಅಧ್ಯಕ್ಷ ಜೊಳ್ಳಿ ಗುರು ಸದಸ್ಯರಾದ ಶ್ರೀನಿವಾಸ್ ದಾಸಕರಿಯಪ್ಪ, ಕೆ. ಎಸ್.ರಮೇಶ್. ಎಂ. ವಿ. ಜಯಪ್ರಕಾಶ್ ಮಾಗಿ, ವಿನಾಯಕ ಮಿಲ್ ವಿ. ಸಿದ್ದೇಶ್, ಕಮಲ ಗಿರೀಶ್, ಆದಿತ್ಯ, ಅಲ್ಯುಮಿನಿಯಂ ಮಂಜುನಾಥ್, ದೇವರಮನಿ ಮುರುಗೇಶ್, ಬಸವರಾಜ್ ಇಂಡಿ, ಜರಿಕಟ್ಟೆ.ಚಂದ್ರು, ಐಗೂರ್ ಪ್ರಕಾಶ್, ದಿನೇಶ್, ಕುಮಾರಸ್ವಾಮಿ ತೊಗಲೇರಿ, ಗುರು, ರಾಜು, ಪ್ರವೀಣ್ ಜಾಧವ್ ಮತ್ತಿತರರು ಹಾಜರಿದ್ದರು.