Site icon Kannada News-suddikshana

Police: ದಾವಣಗೆರೆ ಎಸ್ಪಿ ವರ್ಗಾವಣೆ ಬಗ್ಗೆ ಎಸ್ಎಸ್ ಮಲ್ಲಿಕಾರ್ಜುನ್ ಏನಂದ್ರು…?

SP DVG ARUN

SP DVG ARUN

SUDDIKSHANA KANNADA NEWS/ DAVANAGERE/ DATE:01-08-2023

ದಾವಣಗೆರೆ: ದಾವಣಗೆರೆ ಜಿಲ್ಲಾ ಪೊಲೀಸ್  (Police) ವರಿಷ್ಠಾಧಿಕಾರಿ ಡಾ. ಕೆ. ಅರುಣ್ ಅವರ ವರ್ಗಾವಣೆ ವಿಚಾರ ಸಂಬಂಧಿಸಿದಂತೆ ಎದ್ದಿರುವ ಗೊಂದಲ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಎಸ್ಪಿ ವರ್ಗಾವಣೆಗೆ ಯಾರೂ ಮನವಿ ಕೊಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮವದರ ಜೊತೆ ಮಾತನಾಡಿದ ಅವರು, ವರ್ಗಾವಣೆ ವಿಚಾರ ಕುರಿತಂತೆ ಹೊನ್ನಾಳಿ ತಾಲೂಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನೇ ಮಾತನಾಡಿದ್ದು. ಬೇರೆಯವರು ಯಾರೂ ವರ್ಗಾವಣೆ ಮಾಡಿ ಎಂದು ಮಾತನಾಡಿಲ್ಲ. ಯಾರೋ ಕಾರ್ಯಕರ್ತರು ನಾನು ಹೋಗಬೇಕಾದರೆ ಎಸ್ಪಿ ಅವರನ್ನು ವರ್ಗಾವಣೆ ಮಾಡಿ ಎಂದ್ರು. ಅದಕ್ಕೆ ನಾನು ವೇದಿಕೆಯಲ್ಲಿ ಉತ್ತರ ಕೊಟ್ಟೆ ಅಷ್ಟೇ. ಶಾಸಕ ಶಾಂತನಗೌಡರು ಮಾತನಾಡಿರುವುದಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿಸಿದರು.

ಒಳ್ಳೆಯ ಕೆಲಸ ಮಾಡುವವರಿಗೆ ಒಳ್ಳೆಯ ಅಧಿಕಾರಿಗಳು ಬೇಕು. ನಮ್ಮ ದೇಶಕ್ಕೂ ಒಳ್ಳೆಯ ಅಧಿಕಾರಿಗಳಂತೆ ರಾಜಕಾರಣಿಗಳೂ ಬೇಕು. ಈ ದೃಷ್ಟಿಕೋನದಲ್ಲಿ ನಮ್ಮ ಸರ್ಕಾರ ನಡೆಯುತ್ತದೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: 

Davanagere: ಸಂಸದ ಸಿದ್ದೇಶ್ವರರ ಸಿಡಿಗುಂಡು ವಾಗ್ಬಾಣಕ್ಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ “ಮಲ್ಲಗುದ್ದಿನೇಟು…”!

ಈಗ ಎಲ್ಲೆಡೆ ಮರಳು ಸಿಗುತ್ತಿದೆ. ಎಲ್ಲೆಲ್ಲಿ ಟೆಂಡರ್ ಆಗಿದೆಯೋ ಅಲ್ಲಿ ಮರಳು ಸುಲಭವಾಗಿ ಸಿಗುತ್ತಿದೆ. ಜೊತೆಗೆ ಎಂಸ್ಯಾಂಡ್ ಸಹ ಬರುತ್ತಿದೆ. ಆಂಧ್ರಪ್ರದೇಶ, ಆಂಧ್ರ, ತಮಿಳುನಾಡಿನಲ್ಲಿ ಮರಳು ಪರಿಷ್ಕರಣೆ ಸಂಬಂಧ ಏನಿದೆ ಎಂಬ ಬಗ್ಗೆ ವರದಿ ತರಿಸಿಕೊಂಡು ಚರ್ಚಿಸಿ ನಿರ್ಧಾರಕ್ಕೆ ಬರುತ್ತೇವೆ. ಮರಳಿಗೆ ಯಾವುದೇ ತೊಂದರೆ ಇಲ್ಲ. ನಾವೇ ತೊಂದರೆ ಮಾಡಿಕೊಳ್ಳುತ್ತಿದ್ದೇವೆ ಅಷ್ಟೇ ಎಂದರು.

ಪ್ರಭಾ ಮಲ್ಲಿಕಾರ್ಜುನ್ ಸ್ಪರ್ಧೆ ಬಗ್ಗೆ ನಿರ್ಧರಿಸಿಲ್ಲ:

ಕಾಂಗ್ರೆಸ್ ಪಕ್ಷದಲ್ಲಿ ಯಾವಾಗಲೂ ಆಕಾಂಕ್ಷಿಗಳು ಜಾಸ್ತಿ. ಆಕಾಶ ನೋಡಲು ನೂಕುನುಗ್ಗಲಾ. ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಎಲ್ಲರೂ ಸೇರಿ ಒಳ್ಳೆಯ ಅಭ್ಯರ್ಥಿ ನಿಲ್ಲಿಸಿ ಗೆಲ್ಲಿಸಬೇಕು ಎಂಬುದಷ್ಟೇ ನಮ್ಮ ಉದ್ದೇಶ. ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕೋ ಬೇಡವೋ ಎಂಬ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಈ ಕುರಿತಂತೆ ಯಾವ ನಿರ್ಧಾರವನ್ನೂ ತೆಗೆದುಕೊಂಡಿಲ್ಲ. ಆ ರೀತಿ ಸದ್ಯಕ್ಕೆ ಯಾವ ಪ್ರಸ್ತಾಪವೂ ಇಲ್ಲ. ಮುಂದಿನ ದಿನಗಳಲ್ಲಿ ನೋಡೋಣ. ಕಾಂಗ್ರೆಸ್ ಹೈಕಮಾಂಡ್ ಯಾರು ಅಭ್ಯರ್ಥಿಯಾಗಬೇಕು ಎಂಬುದನ್ನು ನಿರ್ಧರಿಸಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Davanagere Police, Davanagere Police News, Davanagere Police Suddi, Davanagere Police News Updates, Davanagere News, Davanagere Suddi

Exit mobile version