Site icon Kannada News-suddikshana

ಕೈ ಹಚ್ಚಿದರೆ ಮೇಲೇಳಲು ಆಗಬಾರದು ಹಾಗೆ ಕೈ ಹಚ್ಚುತ್ತೀನಿ: ಬಿ. ಪಿ. ಹರೀಶ್ ವಿರುದ್ಧ ಎಸ್. ಎಸ್. ಮಲ್ಲಿಕಾರ್ಜುನ್ ಕೆಂಡಾಮಂಡಲ!

ಎಸ್. ಎಸ್. ಮಲ್ಲಿಕಾರ್ಜುನ್

SUDDIKSHANA KANNADA NEWS/DAVANAGERE/DATE:01_11_2025

ದಾವಣಗೆರೆ: ನನ್ನ ಕ್ಷೇತ್ರದಲ್ಲಿ ಬಂದು ಏನೋನೋ ಮಾತನಾಡಿದರೆ ಸುಮ್ಮನೆ ಕೂರಬೇಕಾ? ರೈತರ ಭೂಮಿ ಲಪಟಾಯಿಸುತ್ತೇವೆಂಬ ಆರೋಪ ಮಾಡಿದ್ದಾನೆ. ವರದಿ ಬರಲಿ. ಆಮೇಲೆ ಕೈ ಹಚ್ಚುತ್ತೇನೆ. ನಾನು ಕೈ ಹಚ್ಚಿದರೆ ಮೇಲೇಳಲು ಆಗಬಾರದು. ಈ ರೀತಿಯಲ್ಲಿ ಕೈ ಹಚ್ಚುತ್ತೇನೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಬಿ. ಪಿ. ಹರೀಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

READ ALSO THIS STORY: ದಾವಣಗೆರೆಗೆ ಐಟಿ, ಬಿಟಿ ಕಂಪೆನಿಗಳಿಗೆ ಆಹ್ವಾನ, ಸ್ಥಳೀಯರಿಗೆ ಉದ್ಯೋಗ ಸೃಷ್ಟಿಗೆ ಪ್ರಯತ್ನ: ಎಸ್. ಎಸ್. ಮಲ್ಲಿಕಾರ್ಜುನ್

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಯಾರ ಒಂದೂ ಗುಂಟೆ ಜಾಗವೂ ಬೇಡ. ಭೂ ಅಕ್ರಮ ಕುರಿತಂತೆ ವರದಿ ಬರಲಿ. ಅದು ಬರುವ ತನಕ ಏನನ್ನೂ ಮಾತನಾಡುವುದಿಲ್ಲ. ವರದಿ ಕೈ ಸೇರಿದ ಬಳಿಕ ಎಲ್ಲವನ್ನೂ ಮಾತನಾಡುತ್ತೇನೆ ಎಂದು ತಿಳಿಸಿದರು.

ಸಾಮಾನ್ಯ ಜ್ಞಾನ ಐತೋ ಇಲ್ವೋ. ಹರಿಹರದಲ್ಲಿ ಶಾಸಕ ಹೇಗೆ ಆದ್ನೋ ಏನೋ ಗೊತ್ತಿಲ್ಲ. ಹರಿಹರ ಜನರು ಪಾಪ ಈತನನ್ನು ಗೆಲ್ಲಿಸಿದ್ದಾರೆ. ಕಾನೂನು ಪ್ರಕಾರ ಬರಲಿ. ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಪಿ. ಹರೀಶ್ ಅವರದ್ದು ಕಾನೂನು ಪ್ರಕಾರ ಯಾವುವು ಇವೆಯೋ? ಅನಧಿಕೃತವಾಗಿ ಯಾವುವು ಇವೆಯೋ ಅವೆಲ್ಲವನ್ನೂ ತೆಗೆಯುತ್ತೇನೆ. ನಮಗೆ ರೈತರ ಒಂದು ಗುಂಟೆನೂ ಬೇಡ. ಇಬ್ಬರೇ ಉಳಿದಿರುವುದು. ಬಿಜೆಪಿ ಬಿ ಟೀಂನಲ್ಲಿರುವುದು ಇವರಿಬ್ಬರೇ. ಬೊಗಳಲು ಹಚ್ಚಿ ಒಬ್ಬ ಎಲ್ಲೋ ಹೋಗಿದ್ದಾನೆ ಎಂದು ಮಾಜಿ ಸಂಸದ ಜಿ. ಎಂ. ಸಿದ್ದೇಶ್ವರರ ಹೆಸರು ಪ್ರಸ್ತಾಪಿಸದೇ ಟೀಕಾಪ್ರಹಾರ ನಡೆಸಿದರು.

ಅಭಿವೃದ್ಧಿ ವಿಚಾರಗಳ ಬಗ್ಗೆ ಮಾತನಾಡಲಿ. ಹರಿಹರದಲ್ಲಿ ಎಷ್ಟು ರಸ್ತೆಗಳು ಹಾಳಾಗಿವೆ. ಇವುಗಳ ದುರಸ್ತಿಯತ್ತ ಗಮನ ಹರಿಸಲಿ. ಯಾವುದೋ ಕ್ಷೇತ್ರಕ್ಕೆ ಬಂದು ಏನೋನೋ ಆರೋಪ ಮಾಡಿದರೆ ಸುಮ್ಮನೆ ಇರಬೇಕಾ ಎಂದು ಎಸ್. ಎಸ್. ಮಲ್ಲಿಕಾರ್ಜುನ್ ಪ್ರಶ್ನಿಸಿದರು.

ಈ ವೇಳೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಡಿಸಿ ಗಂಗಾಧರ ಸ್ವಾಮಿ, ಎಸ್ಪಿ ಉಮಾ ಪ್ರಶಾಂತ್ ಮತ್ತಿತರರು ಹಾಜರಿದ್ದರು.

 

Exit mobile version