Site icon Kannada News-suddikshana

ಮಸೀದಿ ಪಕ್ಕದಲ್ಲೇ ಗಣಪತಿ ಇಟ್ಟು ಕೇಕೆ ಹೊಡೆಯಬೇಕಾ, ತಣ್ಣಗಿರದಿದ್ರೆ ಒಳಗೆ ಹಾಕಿಸ್ತೇನೆ: ಎಸ್. ಎಸ್. ಮಲ್ಲಿಕಾರ್ಜುನ್ ಗರಂ!

ಮಸೀದಿ

SUDDIKSHANA KANNADA NEWS/ DAVANAGERE/DATE:01_09_2025

ದಾವಣಗೆರೆ: ಮಟಿಕಲ್ ನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಅನ್ಯ ಧರ್ಮೀಯರ ಭಾವನೆಗೆ ಧಕ್ಕೆ ತರುವಂತ ಫ್ಲೆಕ್ಸ್ ಏಕೆ ಹಾಕಬೇಕು. ಅಣ್ಣ ತಮ್ಮಂದಿರಂತೆ ಬದುಕುತ್ತಿದ್ದಾರೆ. ಸಾಮರಸ್ಯ ಹಾಳು ಮಾಡಲು ಮುಂದಾದರೆ ಸಹಿಸುವ ಪ್ರಶ್ನೆಯೇ ಇಲ್ಲ. ಮಸೀದಿ ಪಕ್ಕದಲ್ಲಿಯೇ ಗಣಪತಿ ಇಟ್ಟು ಕೇಕೆ ಹೊಡೆಯಬೇಕಾ? ತಣ್ಣಗಿರದಿದ್ದರೆ ಒಳಗೆ ಹಾಕಿಸ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಎಚ್ಚರಿಕೆ ನೀಡಿದ್ದಾರೆ.

READ ALSO THIS STORY: ದಾವಣಗೆರೆಯ ಮಟ್ಟಿಕಲ್ ಬಳಿ ಫ್ಲೆಕ್ಸ್ ವಿವಾದ: ಪ್ರಚೋದನಕಾರಿ, ಅವಹೇಳನ ಪೋಸ್ಟ್ ಸಂಬಂಧ ಕೇಸ್ ದಾಖಲು!

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೂ ಸಂಘಟನೆ ಮುಖಂಡ ಸತೀಶ್ ಪೂಜಾರಿಗೆ ಬೇರೆ ಕೆಲಸ ಇಲ್ವಾ. ಫ್ಲೆಕ್ಸ್ ಅಲ್ಲೇ ಹಾಕಬೇಕಾ? ನಮ್ಮ ಮನೆ ಮುಂದೆ ಹಾಕಲಿ. ಮುಸ್ಲಿಂ ಮನೆ ಮುಂದೆ ಹಾಕಬೇಕಾ? ಎಂದು
ಖಾರವಾಗಿ ಪ್ರಶ್ನಿಸಿದರು.

ಸತೀಶ್ ಪೂಜಾರಿಗೆ ಬೇರೆ ಕೆಲಸ ಇಲ್ಲ. ಒಬ್ಬರು ಮುಸ್ಲಿಂರು ಇದ್ದರೆ ದೊಡ್ಡ ರಂಪ ರಾಮಾಯಣ ಮಾಡ್ತಾ ಇದ್ದರು. ಆದರೆ ಅಲ್ಲಿ ಒಬ್ಬರೂ ಮುಸ್ಲಿಂರು ಇರಲಿಲ್ಲ. ಮುಸ್ಲಿಂರು ಬರಲಿ ಎಂದು ಕಾಯುತ್ತಿದ್ದಾರೆ. ಇದು ಬೇಕಾ? ನಮ್ಮ ಮನೆ ಮುಂದಿನ ಪಾರ್ಕ್, ಇಲ್ಲವೇ ಪಕ್ಕದ ಜಾಗದಲ್ಲಿ ಹಾಕಲಿ ಎಂದು ಹೇಳಿದರು.

ಮಟಿಕಲ್ ಎಲ್ಲಿ ಎಂದು ನೋಡಿದ್ದೀಯಾ. ಎರಡೂ ಕೋಮಿನವರೂ ಇದ್ದಾರೆ. ಇವನು ಯಾವ ಏರಿಯಾದವನು. ಮುಸ್ಲಿಂ ಹಬ್ಬದ ದಿನವೇ ಗಣಪತಿ ಬಿಡಬೇಕಾ? ಮಸೀದಿ ಪಕ್ಕದಲ್ಲಿಯೇ ಇಟ್ಟು ಕೇಕೆ ಹೊಡೆಯಬೇಕಾ? ಮನವಿ ಮಾಡಿಕೊಳ್ಳುವುದಲ್ಲ. ಒಳಗೆ ಹಾಕಿಸ್ತೇವೆ. ತಣ್ಣಗೆ, ನೆಮ್ಮದಿಯಾಗಿರಬೇಕು ಅಷ್ಟೇ ಎಂದು ಎಸ್. ಎಸ್. ಮಲ್ಲಿಕಾರ್ಜುನ್ ಗರಂ ಆದರು.

ಕಾಲು ಕೆರೆದು ಜಗಳ ಮಾಡಿದರೆ ಸುಮ್ಮನಿರಲ್ಲ. ಮುಸ್ಲಿಂ ಆಗಲೀ ಹಿಂದೂಗಳಾಗಲೀ ಶಾಂತಿ ಕಾಪಾಡಬೇಕು. ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಒಬ್ಬರಿಗೊಬ್ಬರು ಸಹೋದರ ಭಾವನೆಯಿಂದ ಬದುಕಬೇಕು. ಮಟಿಕಲ್ ನಲ್ಲಿ ಎಲ್ಲರೂ ಅಣ್ಣ ತಮ್ಮಂದಿರಂತಿದ್ದಾರೆ. ಅದನ್ನು ಹಾಳು ಮಾಡಲು ಹೋಗಬಾರದು. 1994ರಲ್ಲಿ ಆಗಿದ್ದು ಮತ್ತೆ ನೋಡುವುದು ಬೇಡ. ಇದು ಮರುಕಳಿಸಲೂ ಬಾರದು. ಪ್ರತಿಯೊಬ್ಬರೂ ಅನೋನ್ಯವಾಗಿದ್ದಾರೆ. ಇದರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಬೇಡ ಎಂದು ಸಚಿವರು ಎಚ್ಚರಿಕೆ ನೀಡಿದರು.

Exit mobile version