Site icon Kannada News-suddikshana

ಎಸ್.ಹೆಚ್ ಪಾಟೀಲ್ ರ ಸೇವೆಗೆ ಸಂದ ರಾಜ್ಯ ಶಿಕ್ಷಕ (Teacher) ಪ್ರಶಸ್ತಿ: ಸೆ. 9ಕ್ಕೆ ಬೆಂಗಳೂರಿನಲ್ಲಿ ಪ್ರದಾನ, ಅಭಿನಂದನೆಗಳ ಮಹಾಪೂರ

S. H. PATIL, BEST TEACHER

S. H. PATIL, BEST TEACHER

SUDDIKSHANA KANNADA NEWS/ DAVANAGERE/ DATE:04-09-2023

ದಾವಣಗೆರೆ: ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕ(Teacher)ರ ಸಂಘ ರಾಜ್ಯಘಟಕದ ವತಿಯಿಂದ‌ ನೀಡಲ್ಪಡುವ ರಾಜ್ಯ ಪ್ರಶಸ್ತಿಯನ್ನು ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಕನಕದಾಸ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು‌ ಮತ್ತು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕ(Teacher)ರ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಹೆಚ್ ಪಾಟೀಲ್ ಅವರಿಗೆ ನೀಡಲಾಗಿದೆ.

ಪ್ರಶಸ್ತಿಯನ್ನು ಸೆ. 9ರಂದು ಬೆಂಗಳೂರಿನ ಶಿಕ್ಷಕ(Teacher)ರ ಸದನ‌ದಲ್ಲಿ ನಡೆಯುವ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ‌ ಮತ್ತು ಅನುದಾನಿತ ಪಾಥಮಿಕ‌ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಮಾವೇಶದಲ್ಲಿ ಪ್ರದಾನ ಮಾಡಲಾಗುವುವುದು ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ರವಿಕುಮಾರ್ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: 

H. C. Mahadevappa: ಸನಾತನ ಧರ್ಮ ಶುದ್ಧೀಕರಣ ಆಗ್ಬೇಕು: ಉದಯ ನಿಧಿ ಸ್ಟಾಲಿನ್ ಹೇಳಿಕೆ ಸಮರ್ಥಿಸಿದ ಸಚಿವ ಹೆಚ್. ಸಿ. ಮಹಾದೇವಪ್ಪ…!

ಪ್ರಶಸ್ತಿ ಪಡೆದ ಪಾಟೀಲರನ್ನು ರಾಜ್ಯ‌ಪ್ರತಿನಿಧಿಗಳಾದ ಮಲ್ಲಿಕಾರ್ಜುನ ಬಾವಿಕಟ್ಟಿ , ನಾಗರಾಜ ನಲವಾಗಲ, ಜಿಲ್ಲಾಧ್ಯಕ್ಷ ಎಂ.ಸಿ‌ ಮುದಿಗೌಡ್ರು ಜಿಲ್ಲಾ‌ ಕಾರ್ಯದರ್ಶಿ ಮಾರುತಿ‌ ಲಮಾಣಿ, ತಾಲ್ಲೂಕು‌ ಕಾರ್ಯದರ್ಶಿ ಬಸವರಾಜ ನಾಯಕ್‌, ಉಪಾಧ್ಯಕ್ಷ ಪೋಲಿಸ್ ಗೌಡ, ಆರ್ ವಿ‌ ಮಠದ್ ಸಂಘಟನಾ ಕಾರ್ಯದರ್ಶಿ ಎಂ. ಹೆಚ್. ಪಾಟೀಲ್, ಬಸವರಾಜ ಶಾಮನೂರು, ಹಾಲೇಶ, ಅಭಿನಂದಿಸಿದ್ದಾರೆ. ಇನ್ನು ಶಾಲೆಯ ಅಧ್ಯಾಪಕ ವರ್ಗ, ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Exit mobile version