SUDDIKSHANA KANNADA NEWS/DAVANAGERE/DATE:13_10_2025
ಬೆಂಗಳೂರು: ರಾಷ್ಚ್ರೀಯ ಸ್ವಯಂ ಸೇವಕ ಸಂಘದ ಕಾರ್ಯಚಟುವಟಿಕೆಗಳಿಗೆ ರಾಜ್ಯ ಸರ್ಕಾರ ಅಧೀನದಲ್ಲಿ ಬರುವ ಸರ್ಕಾರಿ ಸ್ಥಳ, ದೇವಸ್ಥಾನಗಳಲ್ಲಿ ಅವಕಾಶ ನೀಡಬಾರದು. ಇದನ್ನು ನಿಷೇಧಿಸಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಸಿದ್ದರಾಮಯ್ಯರಿಗೆ ಪತ್ರ ಬರೆದಿರುವ ವಿಚಾರಕ್ಕೆ ಬಿಜೆಪಿ ನಾಯಕರು ಕೆರಳಿ ಕೆಂಡವಾಗಿದ್ದಾರೆ. ಮಾತ್ರವಲ್ಲ, ಆರ್ ಎಸ್ ಎಸ್ ತಾಕತ್ತು ಏನು ಎಂಬುದನ್ನು ತೋರಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ.
READ ALSO THIS STORY: ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆ ನಿಷೇಧಕ್ಕೆ ಸರ್ಕಾರ ಕ್ರಮ: ಹಿಂದೂಗಳ ಕೆಂಗಣ್ಣಿಗೆ ಮತ್ತೆ ಗುರಿಯಾದ ಸಿಎಂ ಸಿದ್ದರಾಮಯ್ಯ!
ಯಾವ್ಯಾವ ನಾಯಕರು ಏನೇನು ಹೇಳಿದ್ರು?
ಸಂವಿಧಾನಾತ್ಮಕವಾಗಿ, ಕಾನೂನು ಬದ್ಧವಾಗಿಯೇ ಆರ್‌ಎಸ್‌ಎಸ್ ಶಾಖೆ ನಡೆಸುತ್ತಿದೆ. ಸಾರ್ವಜನಿಕ ಸ್ಥಳ ಯಾರಪ್ಪನ ಆಸ್ತಿಯೂ ಅಲ್ಲ. ಪ್ರಿಯಾಂಕ್ ಖರ್ಗೆ ಅವರು, ದೇಶಪ್ರೇಮ ಕಲಿಸುವ ಆರ್‌ಎಸ್‌ಎಸ್ ವಿರೋಧಿಸುವ ಬದಲು, ಈ ನೆಲದಲ್ಲಿದ್ದುಕೊಂಡು ಇಲ್ಲಿನ ಅನ್ನ ನೀರು ಕುಡಿದು ಇಲ್ಲಿಗೆ ದ್ರೋಹ ಬಗೆಯುವವರನ್ನು ವಿರೋಧಿಸಲಿ.
– ಸಿ.ಟಿ. ರವಿ, ಪರಿಷತ್ ಸದಸ್ಯ
ವೋಟ್ ಬ್ಯಾಂಕ್ ಆಸೆಗಾಗಿ ಕಾಂಗ್ರೆಸ್ ಪಕ್ಷ ದೇಶವನ್ನು ಒಡೆಯುತ್ತಿದೆ. ಆರ್‌ಎಸ್‌ಎಸ್ ದೇಶ ಒಡೆಯುವ ಕೆಲಸ ಎಂದಿಗೂ ಮಾಡುವುದಿಲ್ಲ. ನಾವು ಭಾರತ ಮಾತೆಗೆ ಜಯಕಾರ ಹಾಕಿದರೆ, ಕಾಂಗ್ರೆಸ್ಸಿಗರು ನಕಲಿ ಗಾಂಧಿ ಕುಟುಂಬಕ್ಕೆ ಜೈ ಅನ್ನುತ್ತಾರೆ.
– ಛಲವಾದಿ ನಾರಾಯಣಸ್ವಾಮಿ, ಪರಿಷತ್ ವಿಪಕ್ಷ ನಾಯಕ
ಆರ್‌ಎಸ್‌ಎಸ್ ಬಗ್ಗೆ ಮಾತನಾಡಲು ಯೋಗ್ಯತೆ ಬೇಕು. ಆರ್‌ಎಸ್‌ಎಸ್ ದೇಶಪ್ರೇಮ ಕಲಿಸುವ ಸಂಘಟನೆ, ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಧೈರ್ಯವಿದ್ದರೆ ಬ್ಯಾನ್ ಮಾಡಲಿ. ಇಂದಿರಾ, ನೆಹರೂ ಅವರಿಗೆ ಹೆದರದ ನಾವು ಈಗಿನವರಿಗೆ ಹೆದರುವ ಮಾತೇ ಇಲ್ಲ.
– ಆರ್. ಅಶೋಕ್, ಪ್ರತಿಪಕ್ಷ ನಾಯಕ
ಆರೆಸ್ಸೆಸ್ ವಿಚಾರಧಾರೆಯನ್ನು ದೇಶದ ಜನ ಸ್ವೀಕಾರ ಮಾಡಿದ್ದಾರೆ. ಭಾರತದ ಭೂಭಾಗದ 60-70% ಪ್ರದೇಶವನ್ನು ಆರೆಸ್ಸೆಸ್ ವಿಚಾರಧಾರೆ ಹೊಂದಿರುವವರು ಆಡಳಿತ ನಡೆಸುತ್ತಿದ್ದಾರೆ. ನಿಮ್ಮ ಜುಜುಬಿ ನಿರ್ಬಂಧ ಬಹಳಷ್ಟು ನೋಡಿದ್ದೇವೆ. ತಾಕತ್ತಿದ್ದರೆ RSS. ನಿಷೇಧ ಮಾಡಿ.
– ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವರ
ಆರ್‌ಎಸ್‌ಎಸ್ ತಾಕತ್ತು ನಾವು ತೋರಿಸುತ್ತೇವೆ!
– ಬಿ. ವೈ. ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ