Site icon Kannada News-suddikshana

ಬೇರೆ ರಾಜ್ಯಗಳಲ್ಲಿ ಮೀಟರ್ ಗೆ 900 ರೂ, ಕರ್ನಾಟಕದಲ್ಲಿ 8150 ರೂ. ಫಿಕ್ಸ್! ಏನಿದು ಹಗರಣ?

SUDDIKSHANA KANNADA NEWS/ DAVANAGERE/ DATE:26-03-2025

ಬೆಂಗಳೂರು: ಸ್ಮಾರ್ಟ್ ಮೀಟರ್‌ ಹೆಸರಲ್ಲಿ ರಾಜ್ಯದ ಜನರನ್ನು ಲೂಟಿ ಹೊಡೆಯುತ್ತಿದೆ ಕಾಂಗ್ರೆಸ್ ಸರ್ಕಾರ. ಬೇರೆ ರಾಜ್ಯಗಳಲ್ಲಿ ಕೇವಲ ರೂಪಾಯಿ 900ಕ್ಕೆ ದೊರೆಯುವ ಸ್ಮಾರ್ಟ್ ಮೀಟರ್‌ಗಳಿಗೆ ರಾಜ್ಯದಲ್ಲಿ ರೂ. 8510 ಫಿಕ್ಸ್ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಬೆಸ್ಕಾಂ ಮತ್ತು ಇತರ ಎಸ್ಕಾಂಗಳ ಸ್ಮಾರ್ಟ್ ಮೀಟರ್‌ ಟೆಂಡರ್‌ನಲ್ಲಿ ಸುಮಾರು ರೂ. 15,568 ಕೋಟಿ ಬೃಹತ್ ಮೊತ್ತದ ಅವ್ಯವಹಾರ ನಡೆದಿದೆ. ಸೆಂಟ್ರಲ್ ಎಲೆಕ್ಟ್ರಿಸಿಟಿ ಅಥಾರಿಟಿ ನಿಯಮಾವಳಿ ಪ್ರಕಾರವೂ ಸ್ಮಾರ್ಟ್ ಮೀಟರ್ ಕಡ್ಡಾಯವಲ್ಲ.
ಕೆಇಆರ್‌ಸಿ ನಿಯಮಾವಳಿಗಳಲ್ಲಿ ಸ್ಮಾರ್ಟ್ ಮೀಟರ್ ಕಡ್ಡಾಯ ಎಂದು ಎಲ್ಲೂ ಹೇಳಿಲ್ಲ. ಆದರೂ ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಜನತೆಯ ಮೇಲೆ ಸ್ಮಾರ್ಟ್ ಮೀಟರ್ ಹೊರೆ ಏರಿಸಿದೆ ಎಂದು ಬಿಜೆಪಿ ಆರೋಪಿಸಿದೆ.

ಕೆಟಿಪಿಪಿ ಕಾಯ್ದೆ ಪ್ರಕಾರ ಬಿಡ್ ಪಡೆಯುವ ಕಂಪನಿ ವ್ಯವಹಾರ ರೂ.1,920 ಕೋಟಿ ಇರಬೇಕು. ಆದರೆ, ಟೆಂಡರ್‌ನಲ್ಲಿ ಕೇವಲ ರೂ.107 ಕೋಟಿ ನಮೂದಿಸಲಾಗಿದೆ. ಕಪ್ಪುಪಟ್ಟಿಯಲ್ಲಿರುವ ಬಿಸಿಐಟಿಎಸ್ ಕಂಪನಿಯನ್ನು ಈ ಟೆಂಡ‌ರ್ ನಲ್ಲಿ ನಿಯಮಬಾಹಿರವಾಗಿ ಪರಿಗಣಿಸಿದ್ದಾರೆ. ಈ ಅಕ್ರಮದಲ್ಲಿ ಸರ್ಕಾರಕ್ಕೆ ಎಷ್ಟು ಪರ್ಸೇಂಟೇಜ್ ಕಮಿಷನ್ ಎಂಬ ಸತ್ಯವನ್ನು ಕೆ.ಜೆ.ಜಾರ್ಜ್ ಅವರು ತಿಳಿಸಬೇಕು‌. ರಾಜ್ಯ ಸರ್ಕಾರ ಈ ಕೂಡಲೇ ಸ್ಮಾರ್ಟ್ ಮೀಟರ್ ಟೆಂಡ‌ರ್ ಪ್ರಕ್ರಿಯೆ ರದ್ದು ಮಾಡಬೇಕು‌ ಎಂದು ಒತ್ತಾಯಿಸಿದೆ.

Exit mobile version