ದಾವಣಗೆರೆ: ಸಾಕು ನಾಯಿಗಳ ಮಾಲೀಕರು, ನಾಯಿಗಳಿಗೆ ವಯಸ್ಸಾದ ಮೇಲೆ ಎಲ್ಲೆಂದರಲ್ಲಿ ಬಿಟ್ಟು ಹೋಗಬಾರದು. ಅದರಲ್ಲೂ ರಾಟ್ ವೈಲರ್ ನಾಯಿಗಳು ಭಾರೀ ಡೇಂಜರ್ ನಾಯಿ ಆಗಿದ್ದು, ಈ ನಾಯಿಗಳನ್ನು ಸಾಕಿದ ಮೇಲೆ ಮಾಲೀಕರು ಸಾರ್ವಜನಿಕ ಸ್ಥಳಗಳಲ್ಲಿ ಬಿಟ್ಟು ಹೋಗಬಾರದು. ಮಹಿಳೆ ಸಾಯುವಷ್ಟು ಕ್ರೂರವಾಗಿ ಕಚ್ಚಿ ಗಾಯಗೊಳಿಸಿರುವುದೇ ಸಾಕ್ಷಿ ಎಂದು ಶಾಸಕ ಕೆ. ಎಸ್. ಬಸವಂತಪ್ಪ ಆತಂಕ ವ್ಯಕ್ತಪಡಿಸಿದರು.
READ ALSO THIS STORY: “ರಾಟ್ ವೀಲರ್ ನಾಯಿಗಳ ದಾಳಿಗೆ ಮಹಿಳೆ ಕೇಸ್: ನಾಯಿ ಮಾಲೀಕರ ಪತ್ತೆ ಹಚ್ಚಿ ಎಫ್ಐಆರ್ ದಾಖಲಿಸಿ”
ಗುರುವಾರ ರಾತ್ರಿ ರಾಟ್ ವೈಲರ್ ನಾಯಿ ದಾಳಿಗೊಳಗಾಗಿ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊನ್ನೂರು ಗೊಲ್ಲರಹಟ್ಟಿಯ ಮಲ್ಲಶೆಟ್ಟಿಹಳ್ಳಿ ಗ್ರಾಮದ ಬಾಪೂಜಿ ಬಡಾವಣೆಯ ನಿವಾಸಿ ಅನಿತಾ ( 38) ಮೃತಪಟ್ಟ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಬಳಿಕ ಅವರು ಮಾತನಾಡಿದರು.
ಕೂಡಲೇ ನಾಯಿ ಮಾಲೀಕರನ್ನು ಪತ್ತೆ ಕಠಿಣ ಕ್ರಮ ಕೈಗೊಂಡರೆ ನಾಯಿಗಳ ಮಾಲೀಕರಿಗೆ ಎಚ್ಚರಿಕೆಯ ಗಂಟೆಯಾಗಲಿದೆ ಎಂದು ಪೊಲೀಸರಿಗೆ ಸೂಚಿಸಿದರು.
ಬಡತನದಿಂದ ಕೂಡಿದ ಅನಿತಾ ಕುಟುಂಬಕ್ಕೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸುತ್ತೇನೆ. ಅಲ್ಲದೇ ಮುಖ್ಯಮಂತ್ರಿಗಳ ಬಳಿ ಈ ಬಗ್ಗೆ ಚರ್ಚಿಸಿ ಸೂಕ್ತ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ಡಿಎಸ್ಪಿ ಬಸವರಾಜ್, ಸಿಪಿಐ ಅಣ್ಣಯ್ಯ, ಗ್ರಾಮಸ್ಥರು ಹಾಜರಿದ್ದರು.





Leave a comment