Site icon Kannada News-suddikshana

ಶತಕದ ಹೊಸ್ತಿಲಲ್ಲಿ ಎಡವಿದ ರೋಹಿತ್ ಶರ್ಮಾ ಈಗ 18 ಸಾವಿರ ರನ್ ಗಳ ಸರದಾರ : ನಿರಾಸೆ ಮೂಡಿಸಿದ ಗಿಲ್, ವಿರಾಟ್ ಕೊಹ್ಲಿ…!

SUDDIKSHANA KANNADA NEWS/ DAVANAGERE/ DATE:29-10-2023

ಲಕ್ನೋ: ಏಕಾನಾ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುತ್ತಿರುವ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ರನ್ ಪೇರಿಸಲು ಪರದಾಡುತ್ತಿದೆ. ನಾಯಕ ರೋಹಿತ್ ಶರ್ಮಾ ಭರ್ಜರಿ ಅರ್ಧಶತಕ ಬಾರಿಸಿ, ತಂಡವನ್ನು ಆರಂಭಿಕ ಕುಸಿತದಿಂದ ಪಾರು ಮಾಡಿದರು.

ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಈ ಪಂದ್ಯಾವಳಿಯಲ್ಲಿ ಭಾರತ ಮೊದಲು ಬ್ಯಾಟ್ ಮಾಡುತ್ತಿರುವುದು ಇದೇ ಮೊದಲು. ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿದರು. ಆದ್ರೆ, ಶುಭಮನ್ ಗಿಲ್ ಹೆಚ್ಚು ಹೊತ್ತು ನಿಲ್ಲಿಲಿಲ್ಲ.

ಫೋರ್, ಸಿಕ್ಸರ್ ಮೂಲಕ ರಂಜಿಸಿದ ರೋಹಿತ್ ಶರ್ಮಾ ಶತಕದ ಹೊಸ್ತಿಲಲ್ಲಿ ಮತ್ತೊಮ್ಮೆ ಎಡವಿದರು. ರೋಹಿತ್ ಶರ್ಮಾ ಇನ್ನು ಕೆಲವೇ ರನ್ ಗಳಿಸಿದ್ದರೆ ಶತಕ ಬಾರಿಸುತ್ತಿದ್ದರು. ಆದ್ರೆ, ಶತಕ ಸಿಡಿಸದೇ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದರು.

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ 49 ನೇ ಶತಕದ ದಾಖಲೆ ಸರಿಗಟ್ಟುತ್ತಾರೆ ವಿರಾಟ್ ಕೊಹ್ಲಿ ಎಂದೇ ಭಾವಿಸಿದ್ದರು. ಆದರೆ, ಅವರು 9 ಎಸತೆಗಳಲ್ಲಿ ಶೂನ್ಯ ರನ್ ಗೆ ಡೆವಿಡ್ ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ಮರಳಿದರು. ಈ ಮೂಲಕ ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟುವ ಅವಕಾಶ ಇಂದು ಕಳೆದುಕೊಂಡರು. ರೋಹಿತ್ ಶರ್ಮಾ 87 ರನ್ ಗಳಿಸಿ ಔಟಾದರು. ಶ್ರೇಯಸ್ ಅಯ್ಯರ್ ಗಳಿಸಿದ್ದು ನಾಲ್ಕೇ ರನ್.

ಶ್ರೇಯಸ್ ಅಯ್ಯರ್ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕೆ. ಎಲ್. ರಾಹುಲ್ 39 ರನ್ ಗಳಿಸುವ ಮೂಲಕ ರೋಹಿತ್ ಶರ್ಮಾ ಜೊತೆ ಉತ್ತಮ ಜೊತೆಯಾಟ ನೀಡಿದರು. ಆದ್ರೆ, ಹೆಚ್ಚು ಹೊತ್ತು ಆಟವಾಡಲಿಲ್ಲ. 31ನೇ ಓವರ್‌ನಲ್ಲಿ ರಾಹುಲ್ ವಿಲ್ಲಿಗೆ ವಿಕೆಟ್ ಒಪ್ಪಿಸಿದರು.

18 ಸಾವಿರ ರನ್ ಗಳ ಸರದಾರ:

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 18 ಸಾವಿರ ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು. ಈ ವಾರದ ಆರಂಭದಲ್ಲಿ ನಿಧನರಾದ ತಮ್ಮ ಮಾಜಿ ನಾಯಕ ಬಿಶನ್ ಸಿಂಗ್ ಬೇಡಿ ಅವರಿಗೆ ಗೌರವ ಸಲ್ಲಿಸಲು ಭಾರತದ ಆಟಗಾರರು ಕಪ್ಪು ಪಟ್ಟಿ ಧರಿಸಿ ಆಟಕ್ಕಿಳಿದರು.

Exit mobile version