Site icon Kannada News-suddikshana

ಮೌನ ಮುರಿದ ರೋಹಿತ್ ಶರ್ಮಾ: ನಾನು ಕೆಳಗೆ ನಿಂತಿದ್ದೇನೆ ಎಂದಿದ್ಯಾಕೆ ಹಿಟ್ ಮ್ಯಾನ್?

SUDDIKSHANA KANNADA NEWS/ DAVANAGERE/ DATE:04-01-2025

ಸಿಡ್ನಿ: ನಾನು ಕೆಳಗೆ ನಿಂತಿದ್ದೇನೆ ಎಂದು ಹೇಳುವ ಮೂಲಕ ಹಿಟ್ ಮ್ಯಾನ್ ರೋಹಿತ್ ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ.

ಸಿಡ್ನಿ ಟೆಸ್ಟ್ ನಲ್ಲಿ ಕೈ ಬಿಟ್ಟಿದ್ದಕ್ಕೆ ಕೂಲ್ ಆಗಿಯೇ ರಿಯಾಕ್ಟ್ ಮಾಡಿರುವ ರೋಹಿತ್ ಶರ್ಮಾ ಉತ್ತಮವಾಗಿ ಆಡುವವರಿಗೆ ಅವಕಾಶ ನೀಡುವ ಸಲುವಾಗಿ ಸಿಡ್ನಿ ಟೆಸ್ಟ್ ನಿಂದ ದೂರು ಉಳಿದಿದ್ದೇನೆ ಎಂದು ಹೇಳಿದರು.

ಈ ವಿಷಯದ ಬಗ್ಗೆ ಕೋಚ್ ಗೌತಮ್ ಗಂಭೀರ್ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ನನ್ನ ನಿರ್ಧಾರ ಬೆಂಬಲಿಸಿದರು ಎಂದು ಹೇಳಿದ್ದಾರೆ. ನಾನು ಕೆಳಗೆ ನಿಂತಿದ್ದೇನೆ. ನಾನು ಒಂದು ವಿಷಯವನ್ನು
ಹೇಳುತ್ತೇನೆ ಮತ್ತು ಅದಕ್ಕೆ 50 ವ್ಯಾಖ್ಯಾನಗಳಿವೆ. ನಾನು ಕೋಚ್‌ನೊಂದಿಗೆ ಚಾಟ್ ಮಾಡಿದ್ದೇನೆ. ಈ ಸಮಯದಲ್ಲಿ ರನ್‌ಗಳನ್ನು ಮಾಡುತ್ತಿಲ್ಲ. ನಾನು ಫಾರ್ಮ್‌ನಲ್ಲಿಲ್ಲ.ಬ್ಯಾಟಿಂಗ್ ಕ್ರಮಾಂಕವು ಪ್ರಸ್ತುತ ಫಾರ್ಮ್‌ನಲ್ಲಿಲ್ಲ, ಆದ್ದರಿಂದ ತಂಡ ಮುನ್ನೆಡಸಲು ಆಗಿಲ್ಲ ಎಂದಿದ್ದಾರೆ.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಸಿಡ್ನಿ ಟೆಸ್ಟ್‌ನಿಂದ ಹೊರಗುಳಿದಿರುವ ಬಗ್ಗೆ ಮೌನ ಮುರಿದಿದ್ದಾರೆ. 5ನೇ ಟೆಸ್ಟ್‌ಗೆ ಭಾರತ 1-2 ಹಿನ್ನಡೆಯಲ್ಲಿದ್ದಾಗ ಅಭಿಮಾನಿಗಳು ಮತ್ತು ಕ್ರಿಕೆಟ್ ಪಂಡಿತರು ಫಾರ್ಮ್ ನಲ್ಲಿ ಇಲ್ಲದ ರೋಹಿತ್ ಶರ್ಮಾ ಕೈಬಿಡಬೇಕು ಎಂದಿದ್ದರು. ಸಿಡ್ನಿಯಲ್ಲಿನ ಟೆಸ್ಟ್ ಪಂದ್ಯದಿಂದ ಕೈ ಬಿಟ್ಟಿದ್ದಕ್ಕೆ ಈ ರೀತಿ ಪ್ರತಿಕ್ರಿಯೆ ನೀಡುವ ಮೂಲಕ ಕೋಚ್ ಗೌತಮ್ ಗಂಭೀರ್ ಗೆ ತಿರಗೇಟು ನೀಡಿದ್ದಾರೆ.

ರೋಹಿತ್ ಶರ್ಮಾ ಕಳೆದ 5 ಇನ್ನಿಂಗ್ಸ್‌ಗಳಲ್ಲಿ ಗಳಿಸಿರುವುದು ಕೇವಲ 31 ರನ್. 2ನೇ ದಿನದ ಭೋಜನ ವಿರಾಮದ ವೇಳೆ ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡುತ್ತಿದ್ದ ರೋಹಿತ್, ತನ್ನನ್ನು ಕೈಬಿಡಲಾಗಿಲ್ಲ ಅಥವಾ ತಂಡದಿಂದ ಹೊರಗುಳಿದಿಲ್ಲ.
ಇನ್-ಫಾರ್ಮ್ ಆಟಗಾರನಿಗೆ ಹೊರಗುಳಿಯಲು ನಿರ್ಧರಿಸಿದೆ ಎಂದು ಹೇಳಿದರು.

Exit mobile version