Site icon Kannada News-suddikshana

ಐವರಿಂದ ವೃದ್ಧ ದಂಪತಿ ಮೇಲೆ ಹಲ್ಲೆ, ಬಂಗಾರ ಬೆಳ್ಳಿ ದರೋಡೆ: ಬೆಚ್ಚಿಬಿದ್ದ ಕಾಕನೂರು ಗ್ರಾಮ!

ದರೋಡೆ

SUDDIKSHANA KANNADA NEWS/ DAVANAGERE/DATE:07_09_2025

ದಾವಣಗೆರೆ: ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಾಕಾನೂರು ಗ್ರಾಮದ ಹೊರವಲಯದಲ್ಲಿರುವ ಮೆನಯೊಂದರಲ್ಲಿ ವೃದ್ಧ ದಂಪತಿ ಮೇಲೆ ಐವರು ದರೋಡೆಕೋರರು ಹಲ್ಲೆ ನಡೆಸಿ ಬಂಗಾರ ಮತ್ತು ಬೆಳ್ಳಿ ದರೋಡೆ ಮಾಡಿದ ಘಟನೆ ನಡೆದಿದೆ.

READ ALSO THIS STORY: ದಾವಣಗೆರೆ ವಿದ್ಯಾನಗರ ಪೊಲೀಸರ ಭರ್ಜರಿ ಬೇಟೆ: ರಾಜಸ್ತಾನ ಮೂಲದ ಮೂವರು ಕಳ್ಳರ ಬಂಧನ, 15,37,800 ರೂ. ಮೌಲ್ಯದ ವಸ್ತು ವಶ!

ಸೆಪ್ಟಂಬರ್ 6ರ ರಾತ್ರಿ ಐವರು ದರೋಡೆಕೋರರು ಮೆನೆಗೆ ನುಗ್ಗಿ ಮನೆಯಲ್ಲಿದ್ದ ವೃದ್ದರ ಮೇಲೆ ಹಲ್ಲೆ ಮಾಡಿ ಬೆಳ್ಳಿ ಮತ್ತು ಬಂಗಾರದ ಸಾಮಗ್ರಿ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಭೇಟಿ ನೀಡಿ ಪರಿಶೀಲಿಸಿದರು. ಆರೋಪಿತರ ಪತ್ತೆಗಾಗಿ ತನಿಖಾಧಿಕಾರಿಗಳಿಗೆ ಸೂಕ್ತ ತನಿಖಾ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ, ಚನ್ನಗಿರಿ ಪೊಲೀಸ್ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್, ಸಂತೇಬೆನ್ನೂರು ವೃತ್ತ ನಿರೀಕ್ಷಕ ಲಿಂಗನಗೌಡ ನೆಗಳೂರು ಅವರು ಸೇರಿದಂತೆ ಸುಕೋ ಅಧಿಕಾರಿಗಳ ತಂಡ, ಶ್ವಾನ ದಳ, ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡದವರು ಹಾಜರಿದ್ದರು.

ಘಟನೆಗೆ ಸಂಬಂಧಿಸಿದಂತೆ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಆರೋಪಿತರ ಪತ್ತೆಗೆ ತಂಡ ರಚಿಸಿದ್ದು, ತನಿಖೆ ಮುಂದುವರಿದಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Exit mobile version