SUDDIKSHANA KANNADA NEWS/ DAVANAGERE/ DATE:16-01-2024
ದಾವಣಗೆರೆ: ಜಿಲ್ಲಾ ಸ್ಮಾರ್ಟ್ ಸಿಟಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಆಟೋ ಚಾಲಕರ ಸಂಘದ ಅಧ್ಯಕ್ಷ ಹೆಚ್. ಅಣ್ಣಪ್ಪ ಸ್ವಾಮಿ, ಉಪಾಧ್ಯಕ್ಷ ರೇವಣ್ಣ ಗಂಗಪ್ಪ, ಪ್ರಧಾನ ಕಾರ್ಯದರ್ಶಿ ಎಸ್. ಎಂ. ಕೊಟ್ರೇಶಪ್ಪ, ಖಜಾಂಚಿ ರಾಘವೇಂದ್ರ, ಪದಾಧಿಕಾರಿಗಳು ಹಾಗೂ ಆಟೋ ಚಾಲಕರು ಪಾಲ್ಗೊಂಡಿದ್ದರು. ಈ ವೇಳೆ ಆಟೋ ಚಾಲಕರಿಗೆ ಸಂಚಾರ ನಿಯಮ ಪಾಲಿಸುವಂತೆ ಸೂಚನೆ ನೀಡಲಾಯಿತು.
ಸಂಚಾರಿ ವೃತ್ತ ನಿರೀಕ್ಷಕಿ ಶೈಲಜಾ, ಪಿಎಸ್ ಐ ನಿರ್ಮಲ ಮತ್ತು ಸಂಚಾರಿ ಸಿಬ್ಬಂದಿ ಅವರ ಜೊತೆ ಆಟೋ ಚಾಲಕರು ಮತ್ತು ಮಾಲೀಕರು ಆಟೋ ರ್ಯಾಲಿ ನಡೆಸಿದರು. ಈ ಮೂಲಕ ಜನರು ಹಾಗೂ ವಾಹನ ಸವಾರರಿಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ಸೂಚನೆಗಳನ್ನು ನೀಡಲಾಯಿತು.
ಆಟೋ ಚಾಲಕರು ಸಹ ಟ್ರಾಫಿಕ್ ಪೊಲೀಸರಿಗೆ ಸಂಚಾರ ನಿಯಮಗಳನ್ನು ಪಾಲನೆ ಮಾಡುವುದಾಗಿ ಹೇಳಿದರು. ಪೊಲೀಸ್ ಇಲಾಖೆಯ ಈ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಆಟೋ ಮಾಲೀಕರು ಹಾಗೂ ಚಾಲಕರು ಭರವಸೆ ನೀಡಿದರು. ಆಟೋ ಚಾಲಕರೂ ಸಹ ಸಂಚಾರ ನಿಯಮ ಪಾಲನೆ ಮಾಡುವ ಕುರಿತಂತೆ ಮಾತನಾಡಿದರು.
ಸಂಚಾರ ನಿಯಮ ಪಾಲನೆ ಮಾಡಿದರೆ ಒಳ್ಳೆಯದು. ಆಟೋ ಚಾಲಕರು ಸಂಚಾರ ನಿಯಮ ಪಾಲನೆ ಮಾಡುತ್ತಾರೆ. ಯಾರೋ ಕೆಲವರು ಮಾತ್ರ ಪಾಲನೆ ಮಾಡುತ್ತಿಲ್ಲ. ಈ ಬಗ್ಗೆ ಸಂಘವು ಕಟ್ಟುನಿಟ್ಟಿನ ಸೂಚನೆ ನೀಡುತ್ತದೆ. ಪೊಲೀಸರಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಅವರ ಕಾರ್ಯಕ್ಕೆ ತೊಂದರೆಯಾಗದಂತೆ ವರ್ತಿಸುತ್ತೇವೆ ಎಂದು ಭರವಸೆ ನೀಡಿದರು.