Site icon Kannada News-suddikshana

ಧರ್ಮಸ್ಥಳದ ಶ್ರೀ ಮಂಜುನಾಥ ದೇಗುಲಕ್ಕೆ ಮಾಗಿ ಕುಟುಂಬದಿಂದ 452 ಅಕ್ಕಿ ಪ್ಯಾಕೆಟ್ ಸಮರ್ಪಣೆ

Dharmasthala

SUDDIKSHANA KANNADA NEWS/ DAVANAGERE/DATE:03_08_2025

ದಾವಣಗೆರೆ: ನಗರದ ದಿವಂಗತ ಬಸಮ್ಮ ಮತ್ತು ವೀರಬಸಪ್ಪ ಮಾಗಿ ಕುಟುಂಬದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಶ್ರೀ ಮಂಜುನಾಥನ ದೇವಸ್ಥಾನಕ್ಕೆ ಅಕ್ಕಿ ಸಮರ್ಪಣೆ ಮಾಡಲು
ದಾವಣಗೆರೆಯಿಂದ ತೆರಳಲಾಯಿತು.

READ ALSO THIS STORY: ರೂ. 2.5 ಲಕ್ಷಕ್ಕಿಂತ ಹೆಚ್ಚಿನ ಆದಾಯವಿದ್ದರೆ ಐಟಿಆರ್ ಕಡ್ಡಾಯ: 2025ರಲ್ಲಿ ಐಟಿಆರ್ ಸಲ್ಲಿಸುವಾಗ ಈ ಹತ್ತು ತಪ್ಪು ಮಾಡಬೇಡಿ!

ಮಾಗಿ ಕುಟುಂಬದಿಂದ 452 ಪ್ಯಾಕೆಟ್ ಅಕ್ಕಿಯನ್ನು ಮಕ್ಕಳಾದ ಕೈಲಾಶ್‌ಬಾಬು ಮಾಗಿ, ರೂಪಾ ಹಾಗೂ ಚೌಕಿಪೇಟೆ ಅಕ್ಕಿ ವರ್ತಕರ ಸಂಘದ ಅಧ್ಯಕ್ಷ ಎಂ.ವಿ. ಜಯಪ್ರಕಾಶ್ ಮಾಗಿ, ದಾನೇಶ್ವರಿ ಅವರು ಹಾಗೂ ಸ್ನೇಹಿತರು, ಬಂಧು ಮಿತ್ರರಿಂದ
550 ಪ್ಯಾಕೇಟ್ ಅಕ್ಕಿಯನ್ನು ಇಂದು ಬೆಳಿಗ್ಗೆ ಹಳೇಪೇಟೆ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾದನಲ್ಲಿ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಲು ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದರು.

ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ದೇವರಮನೆ ಶಿವಕುಮಾರ್ ಅಕ್ಕಿ ಚೀಲವಿದ್ದ ಲಾರಿಗೆ ತೆರಳಲು ಚಾಲನೆ ನೀಡಿದರು. ಅಕ್ಕಿ ವರ್ತಕ ಎಸ್.ಜಿ. ಉಳುವಯ್ಯ, ದೇವರಮನೆ ಶಿವರಾಜ್, ಕೈಲಾಶ್ ಬಾಬು ಮಾಗಿ, ವಿನಾಯಕ ರೈಸ್ ಮಿಲ್ ವಿ ಸಿದ್ದೇಶ್, ಆರ್.ಎಂ. ಪಂಚಾಕ್ಷರಿ, ರಾಜೇಶ್, ಎಂ.ವೈ. ಆನಂದ್, ಹಾವೇರಿ ಸತೀಶ್, ಹಾವೇರಿ ಪ್ರಶಾಂತ್, ಹಾವೇರಿ ಅಂದನಪ್ಪ, ಸಂಗಪ್ಪ ಮಗನಹಳ್ಳಿ, ಬಿ.ಪಿ.ಎಂ. ಜಗದೀಶ್, ಜೈ ರಾಜ್ ಮೇಟಿ, ಕೆ. ವಿ‌ ಗುರು, ಟಿಂಕರ್ ಮಂಜಣ್ಣ, ಅಣಬೇರು ಮಂಜುನಾಥ್, ಕುಮಾರ್ ಪಾಲ್ ಜೈನ್. ಸಿ. ಎಮ್.ಬಿ. ಬಸವರಾಜ್ ಕಮಲ್, ಗಿರೀಶ್, ಜರಿಕಟ್ಟಿ ಚಂದ್ರು, ಎ‌.ಬಿ.ಸಿ. ಸುಮಿತ್, ಜಯ ಪ್ರಕಾಶ್ ಮಾಗಿ ಕುಟುಂಬದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Exit mobile version