Site icon Kannada News-suddikshana

ದಾವಣಗೆರೆ ಗೋದಾಮಿನಲ್ಲಿ ಸಿಕ್ಕ ಅಕ್ಕಿ ಅನ್ನಭಾಗ್ಯ, ಬಿಸಿಯೂಟ ಯೋಜನೆಯದ್ದಲ್ವಂತೆ!

ದಾವಣಗೆರೆ

ದಾವಣಗೆರೆ: ಇತ್ತೀಚೆಗೆ ಲೋಕಾಯುಕ್ತ ದಾಳಿಯಲ್ಲಿ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ದಾವಣಗೆರೆ ಗೋದಾಮಿನಲ್ಲಿ ಸಿಕ್ಕ ಕಳಪೆ ಅಕ್ಕಿಯು ಅನ್ನಭಾಗ್ಯ ಅಕ್ಕಿಯಾಗಲಿ ಅಥವಾ ಮಧ್ಯಾಹ್ನದ ಬಿಸಿಯೂಟ ಯೊಜನೆಯ ಅಕ್ಕಿಯಾಗಲಿ ಅಲ್ವಂತೆ.

READ ALSO THIS STORY: ಶೇ.300 ರಷ್ಟು ಲಾಭದ ಆಸೆಗೆ ಬಿದ್ದು 11.93 ಲಕ್ಷ ರೂ. ಕಳೆದುಕೊಂಡ ಶಿಕ್ಷಕ!

ಹಾಗಂತ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಮಧುಸೂದನ್ ಸ್ಪಷ್ಟನೆ ನೀಡಿದ್ದಾರೆ.

ಇದು 2 ವರ್ಷಗಳ ಹಿಂದೆಯೆ ಎಂ.ಎಸ್.ಪಿ ಯೋಜನೆಯಡಿ ಪೂರೈಕೆಯಾಗಿ, ತಿರಸ್ಕೃತಗೊಂಡ ಅಕ್ಕಿಯಾಗಿದ್ದು, ಈ ಅಕ್ಕಿಯನ್ನು ನಮ್ಮ ಇಲಾಖೆಯ ಯಾವುದೇ ಯೋಜನೆಗಳಿಗೆ ಬಳಸಲು ಅವಕಾಶವಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಾವಣಗೆರೆ, ಹರಿಹರ ತಾಲೂಕಿನಲ್ಲಿ ಅನ್ನಭಾಗ್ಯ, ಬಿಸಿಯೂಟ ಯೋಜನೆಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರ ಹಿಂದೆ ದೊಡ್ಡ ಪ್ರಭಾವಿಗಳಿದ್ದಾರೆ. ಹಾಗಾಗಿ ರಾಜಾರೋಷವಾಗಿ ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ ಮಾಡಲಾಗುತ್ತಿದೆ. ಸ್ವತಃ ಜಿಲ್ಲಾಧಿಕಾರಿಯವರೇ ನ್ಯಾಮತಿ ತಾಲೂಕಿನಿಂದ ಅನ್ನಭಾಗ್ಯ ಸೇರಿದಂತೆ ಸರ್ಕಾರಿ ಯೋಜನೆಯ ಅಕ್ಕಿಯನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಸಿಸಿಟಿವಿ ಸೇರಿದಂತೆ ಹಲವು ರೀತಿಯ ಕ್ರಮಕ್ಕೆ ಸೂಚನೆ ನೀಡಿದ್ದರೂ ಪ್ರಯೋಜನ ಶೂನ್ಯ.

ಕೆಲವರು ಪ್ರಭಾವಿಗಳ ಹೆಸರು ಬಳಸಿಕೊಂಡು ಅವ್ಯಾಹತವಾಗಿ ಅನ್ನಭಾಗ್ಯ ಅಕ್ಕಿ ಲೂಟಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ನಿಟ್ಟಿನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಇಂಥ ಸಬೂಬು ನೀಡದೇ ದಾಳಿ ನಡೆಸಿ ಕಾಳಸಂತೆಯಲ್ಲಿ ಮಾರಾಟ ಮಾಡುವವರ ಹೆಡೆಮುರಿ ಕಟ್ಟಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Exit mobile version