ಬೆಂಗಳೂರು: ಮಧ್ಯಕರ್ನಾಟಕ ಕೇಂದ್ರ ಬಿಂದು ದಾವಣಗೆರೆ ಈಗ ಡ್ರಗ್ಸ್ ಮಾಫಿಯಾ, ಅನ್ನಭಾಗ್ಯ ಅಕ್ಕಿ ಕಳ್ಳತನ, ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ಸೇರಿದಂತೆ ಬೇರೆ ಬೇರೆ ವಿಚಾರಗಳಿಂದ ಕುಖ್ಯಾತಿ ಗಳಿಸುತ್ತಿದೆ. ಇದನ್ನೇ ಅಸ್ತ್ರವಾಗಿಸಿಕೊಂಡಿರುವ ಬಿಜೆಪಿಯು ಪೋಸ್ಟ್ ವಾರ್ ಶುರು ಮಾಡಿದೆ. ಮಾತ್ರವಲ್ಲ, ಈ ಎಲ್ಲಾ ವಿಚಾರಗಳನ್ನು ಇಟ್ಟುಕೊಂಡು ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ ಘಟಕವು ರಿಪಬ್ಲಿಕ್ ಆಫ್ ದಾವಣಗೆರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ದಾವಣಗೆರೆ ನಗರದ ಜೆ. ಹೆಚ್. ಪಟೇಲ್ ಬಡಾವಣೆಯಲ್ಲಿ ಹೊರ ಬಿದ್ದ ಸಿಂಥೆಟಿಕ್ ಡ್ರಗ್ಸ್ ಜಾಲದಲ್ಲಿ ಬಂಧನಕ್ಕೊಳದವರೆಲ್ಲರೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರೇ. ಹಾಗಾಗಿ, ಈ ಪ್ರಕರಣ ರಾಜ್ಯದ ಗಮನ ಸೆಳೆದಿತ್ತು.
ಸಚಿವರ ಆಪ್ತರೇ ಸಿಕ್ಕಿ ಹಾಕಿಕೊಂಡಿದ್ದರು.
ಎಸ್. ಎಸ್. ಮಲ್ಲಿಕಾರ್ಜುನ್ ಹೇಳಿದ್ದೇನು?
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು, ಯಾರೇ ತಪ್ಪು ಮಾಡಿದ್ದರೂ ಮುಲಾಜಿಲ್ಲದೇ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಅಕ್ರಮ ಹಣ ಸಂಪಾದನೆ ಮಾಡುವವರಿಗೆ ಕುಮ್ಮಕ್ಕು ನೀಡಿಲ್ಲ. ಕಾನೂನು ಕೈಗೆತ್ತಿಕೊಳ್ಳುವವರಿಗೆ, ಪೊಲೀಸರ ಮೇಲೆ ಹಲ್ಲೆ ನಡೆಸಿದವರ ರಕ್ಷಣೆಗೆ ನಿಂತಿಲ್ಲ. ಕ್ರಮಕ್ಕೆ ಸೂಚಿಸಿದ್ದೇನೆ ಎಂದು ಹೇಳಿದ್ದರು. ಆದರೂ ಬಿಜೆಪಿಯು ಸಚಿವರ ಮೇಲೆಯೇ ಆರೋಪ ಮಾಡುತ್ತಿದೆ.
ಮಧ್ಯ ಕರ್ನಾಟಕ ಈಗ “ರಿಪಬ್ಲಿಕ್ ಆಫ್ ದಾವಣಗೆರೆ” ಆಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ! ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರ ಆಪ್ತರ ʻಕೈʼಚಳಕ ನೋಡಿ ಎಂದು ಕಿಡಿಕಾರಿದೆ.
ಬಿಜೆಪಿ ಆರೋಪವೇನು?
ಶಾಮನೂರು ವೇದಮೂರ್ತಿ: ಡ್ರಗ್ಸ್ ದಂಧೆಯಲ್ಲಿ ಭಾಗಿ.
ಮೊಹಮ್ಮದ್ ಜಮೀರ್: ಬಡವರ ಅನ್ನಭಾಗ್ಯ ಅಕ್ಕಿ ಕಳ್ಳತನ.
ಹುಸೇನ್ & ಹಸೀನ್ : ಪೊಲೀಸರ ಮೇಲೆಯೇ ಹಲ್ಲೆ, ಗೂಂಡಾಗಿರಿ.
ಖಾಕಿ ಪಡೆಗೇ ರಕ್ಷಣೆಯಿಲ್ಲದ ಮೇಲೆ ಜನಸಾಮಾನ್ಯರ ಪಾಡೇನು? ಈ ಗೂಂಡಾ ಸಂಸ್ಕೃತಿಗೆ ಕಡಿವಾಣ ಯಾವಾಗ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರೇ? ಎಂದು ಬಿಜೆಪಿ ಪ್ರಶ್ನಿಸಿದೆ. ಈ ಎಲ್ಲಾ ಪ್ರಕರಣಗಳನ್ನು
ಒಂದು ಹಂತಕ್ಕೆ ಕೊಂಡೊಯ್ಯಲು ಬಿಜೆಪಿ ನಿರ್ಧರಿಸಿದ್ದು, ಮುಂಬರುವ ದಿನಗಳಲ್ಲಿ ದಾವಣಗೆರೆ ನಗರದಲ್ಲಿ ದೊಡ್ಡ ಸಮಾವೇಶ ಇಲ್ಲವೇ ಕಾರ್ಯಕ್ರಮ ನಡೆಸಲು ಚಿಂತನೆ ನಡೆಸಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
- Annabhagya Rice Scam
- Assault on police
- BJP Karnataka
- Central Karnataka Politics
- Congress vs BJP
- Drugs Mafia
- Post War
- Prabha Mallikarjun
- Republic of Davanagere
- SS Mallikarjun
- ಅನ್ನಭಾಗ್ಯ ಅಕ್ಕಿ ಕಳ್ಳತನ
- ಎಸ್. ಎಸ್. ಮಲ್ಲಿಕಾರ್ಜುನ್
- ಕಾಂಗ್ರೆಸ್ ವಿರುದ್ಧ ಬಿಜೆಪಿ
- ಡ್ರಗ್ಸ್ ಮಾಫಿಯಾ
- ಪೊಲೀಸರ ಮೇಲೆ ಹಲ್ಲೆ
- ಪೋಸ್ಟ್ ವಾರ್
- ಪ್ರಭಾ ಮಲ್ಲಿಕಾರ್ಜುನ್
- ಬಿಜೆಪಿ ಕರ್ನಾಟಕ
- ಮಧ್ಯ ಕರ್ನಾಟಕ ರಾಜಕೀಯ
- ರಿಪಬ್ಲಿಕ್ ಆಫ್ ದಾವಣಗೆರೆ





Leave a comment