Home ಕ್ರೈಂ ನ್ಯೂಸ್ ದಾಖಲೆ ಬರೆದ “ಅಭಿನವ ಅರಸು”ಗೆ ಅಭಿನಂದನೆಗಳು: ಸಿದ್ದರಾಮಯ್ಯರೇ ಆಡಳಿತದ ವೈಫಲ್ಯದ ಸಾಧನೆಗಳನ್ನೊಮ್ಮೆ ನೆನಪಿಸಿಕೊಳ್ಳಿ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ದಾಖಲೆ ಬರೆದ “ಅಭಿನವ ಅರಸು”ಗೆ ಅಭಿನಂದನೆಗಳು: ಸಿದ್ದರಾಮಯ್ಯರೇ ಆಡಳಿತದ ವೈಫಲ್ಯದ ಸಾಧನೆಗಳನ್ನೊಮ್ಮೆ ನೆನಪಿಸಿಕೊಳ್ಳಿ!

Share
Share

ಬೆಂಗಳೂರು: ಔಟ್‌ ಗೋಯಿಂಗ್‌ ಸಿಎಂ ಸಿದ್ದರಾಮಯ್ಯ ಅವರೇ, ಕೊನೆಗೂ ಕುಂಟುತ್ತಾ, ತೆವಳುತ್ತಾ, ರಾಜೀನಾಮೆ ನೀಡುವ ಭಯದಲ್ಲಿಯೇ ಅತಿ ಹೆಚ್ಚು ವರ್ಷಗಳ ಕಾಲ ಸಿಎಂ ಆದ ದಾಖಲೆಗೆ ಪಾತ್ರರಾಗಿದ್ದಿರಿ. ಹೀಗಾಗಿ ನಿಮಗೆ ಮೊದಲು ನಮ್ಮ ಅಭಿನಂದನೆಗಳು. ಈ ಸಮಯದಲ್ಲಿ ನೀವು ಸಿಎಂ ಆದ ಅವಧಿಯಲ್ಲಿನ ನಿಮ್ಮ ಮಹಾನ್‌ ಸಾಧನೆಗಳನ್ನು ಒಮ್ಮೆ ಮೆಲುಕು ಹಾಕೋಣ ಬನ್ನಿ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಏನೆಲ್ಲಾ ಆರೋಪ ಮಾಡಿದೆ?

  • ಸಿಎಂ ಆದ ಕೆಲವು ದಿನಗಳಲ್ಲಿಯೇ ಮತಾಂಧ ಟಿಪ್ಪು ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು ನಿರ್ಧರಿ”ಸಿದ್ದು”!!
  • ಸಿಎಂ ಆದ ಕೆಲವು ದಿನಗಳಲ್ಲಿಯೇ ಕರ್ನಾಟಕಕ್ಕೆ ಕಂಡು ಕೇಳರಿಯದಂತಹ ಬರಗಾಲ ಆವರಿ”ಸಿದ್ದು”!!
  • ಸಮರ್ಥವಾಗಿದ್ದ ಲೋಕಾಯುಕ್ತಕ್ಕೆ ಮೊಳೆ ಹೊಡೆದು ದುರ್ಬಲ ಎಸಿಬಿ ಸ್ಥಾಪಿ”ಸಿದ್ದು”!!
  • ದಕ್ಷ ಹಿರಿಯ ಅಧಿಕಾರಿಗಳಿಗೆ ಸಾವಿನ ಭಾಗ್ಯ ಕರುಣಿ”ಸಿದ್ದು”!!
  • ಅತಿಯಾದ ಓಲೈಕೆ ರಾಜಕಾರಣಕ್ಕೆ ಕುಮ್ಮಕ್ಕು ನೀಡಿ”ಸಿದ್ದು”!!
  • ಮಹಾದಾಯಿ ಹೋರಾಟಗಾರರ ಮೇಲೆ ಲಾಠಿಚಾರ್ಜ್‌ ಮಾಡಿ”ಸಿದ್ದು”!!
  • ರಾಜ್ಯದಲ್ಲಿ ಅನೇಕ ಹಿಂದೂ ಕಾರ್ಯಕರ್ತರ ಹತ್ಯೆಗೆ ಅನುಕೂಲವಾಗುವಂತಹ ವಾತಾವರಣ ನಿರ್ಮಿ”ಸಿದ್ದು”!!
  • ಸಿಎಂ ಆದ ಮೊದಲ ಅವಧಿಯಲ್ಲಿ ಕರ್ನಾಟಕದ 4257 ರೈತರಿಗೆ ಆತ್ಮಹತ್ಯೆ ಭಾಗ್ಯ ಕರುಣಿ”ಸಿದ್ದು”!!
  • ವೀರಶೈವ-ಲಿಂಗಾಯತ ಎಂದು ಸಮುದಾಯದೊಳಗೆ ಬೆಂಕಿ ಹಚ್ಚಿ”ಸಿದ್ದು”!!
  • ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಸಾಲ ಮಾಡಿ”ಸಿದ್ದು”!!
  • ಸಮಾಜವಾದಿ ಎಂದು ಹೇಳಿ ದುಬಾರಿ ಹ್ಯುಬ್ಲೋಟ್‌ ವಾಚ್‌ ಧರಿ”ಸಿದ್ದು”!!
  • ಗೌಡ-ಲಿಂಗಾಯತ-ಬ್ರಾಹ್ಮಣ(ಜಿಲೇಬಿ)ಫೈಲುಗಳನ್ನು ದೂರವಿರಿ”ಸಿದ್ದು”!!
  • ಅರ್ಕಾವತಿ ಲೇಔಟ್‌ ನ ರೀ-ಡೂ ಹಗರಣ ಮಾಡಿ”ಸಿದ್ದು”!!
  • ಅವಾಸ್ತವಿಕ ಗ್ಯಾರಂಟಿಗಳ ಅಪ್ರಬುದ್ಧ ಅನುಷ್ಠಾನ ಮಾಡಿ”ಸಿದ್ದು”!!
  • ಅತಿ ಹೆಚ್ಚು ಸಾಲ ಮಾಡಿ ಕರ್ನಾಟವನ್ನು ದಿವಾಳಿ ಮಾಡಿ”ಸಿದ್ದು”!!
  • ಮುಡಾದಲ್ಲಿ ಅಕ್ರಮವಾಗಿ 14 ಸೈಟು ಕಬಳಿ”ಸಿದ್ದು”!!
  • ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ₹187 ಕೋಟಿಯನ್ನು ಎಗರಿ”ಸಿದ್ದು”!!
  • ಕಾವೇರಿಯನ್ನು ಸ್ಟಾಲಿನ್‌ ನಾಡಿಗೆ ಹರಿ”ಸಿದ್ದು”!!
  • ಕನ್ನಡಿಗರನ್ನು ಕಡೆಗಣಿಸಿ ವಯನಾಡಿಗೆ ಮನೆ ಹಂಚಿ”ಸಿದ್ದು”!!
  • ತಮ್ಮ ವೈಫಲ್ಯಗಳಿಗೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿ”ಸಿದ್ದು”!!
  • ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್‌ ಎಂದು ಕೂಗಿ”ಸಿದ್ದು”!!
  • ಭಯೋತ್ಪಾದಕರಿಗೆ ಅಮಯಾಕ ಪಟ್ಟ ಕಟ್ಟಲು ಪೂರಕ ವಾತಾವರಣ ಕಲ್ಪಿ”ಸಿದ್ದು”!!
  • ಮತಾಂಧ ಔರಂಗಜೇಬನ ಕಟೌಟ್‌ ಹಾಕಲು ಪ್ರೇರೆಪಿ”ಸಿದ್ದು”!!
  • ದಲಿತರ ಪಾಲಿನ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಹಣವನ್ನು ದುರ್ಬಳಕೆ ಮಾಡಿ”ಸಿದ್ದು”!!
  • ಮಕ್ಕಳಿಗೆ ಹುಳುಯುಕ್ತ ಊಟವನ್ನು ಹಾಕಿ”ಸಿದ್ದು”!!
  • ಪಂಚಮಸಾಲಿಗಳ ಮೇಲೆ ಲಾಠಿಚಾರ್ಜ್‌ ಮಾಡಿ”ಸಿದ್ದು”!!
  • ಬರ ಹಾಗೂ ನೆರೆ ನಿರಾಶ್ರಿತರಿಗೆ ಪರಿಹಾರ ನೀಡದೆ ವಂಚಿ”ಸಿದ್ದು”!!
  • ಕಾರ್ಮಿಕರಿಗೆ ನೀಡುವ ಕಿಟ್‌ ನಲ್ಲಿ ಹಗರಣ ಮಾಡಿ”ಸಿದ್ದು”
  • ಬಡವರಿಗೆ ಹಂಚುವ ಮನೆಗೆ ಲಂಚ ಕೇಳಿ”ಸಿದ್ದು”!!
  • SDPI/PFI ಮತಾಂಧರ ಕೇಸ್ ವಜಾ ಮಾಡಿ”ಸಿದ್ದು”!!
  • ಗುತ್ತಿಗೆದಾರರ ಬಳಿ 60 ಪರ್ಸೆಂಟ್‌ ಕಮಿಷನ್‌ ಗೆ ಕೈ ಚಾಚಿ”ಸಿದ್ದು”!!
  • ವಕ್ಫ್‌ ಹೆಸರಿನಲ್ಲಿ ರೈತರ ಭೂಮಿ ಕಬಳಿಕೆಗೆ ಸ್ಕೆಚ್‌ ಹಾಕಿ”ಸಿದ್ದು”!!
  • ಅಬಕಾರಿ ಲೈಸೆನ್ಸ್‌ ನವೀಕರಣದ ಹೆಸರಿನಲ್ಲಿ ಲಂಚಾವತಾರ ಸ್ಥಾಪಿ”ಸಿದ್ದು”!!
  • ಗೃಹಲಕ್ಷ್ಮಿ ಹಣವನ್ನು ಎಗರಿ”ಸಿದ್ದು”!!
  • ಎಲ್ಲಾ ವಸ್ತುಗಳ ಬೆಲೆಯೇರಿಕೆ ಮಾಡಿ”ಸಿದ್ದು”!!
  • ರೈತರ ಬೋರ್ವೆಲ್‌ಗಳ ಟಿಸಿ ಶುಲ್ಕ ಏರಿ”ಸಿದ್ದು”!!
  • ಜನೌಷಧಿ ಕೇಂದ್ರಗಳನ್ನು ಮುಚ್ಚಲು ಷಡ್ಯಂತ್ರ ರೂಪಿ”ಸಿದ್ದು”!!
  • ಸ್ಮಾರ್ಟ್‌ ಮೀಟರ್‌ ಹಗರಣದ ಮೂಲಕ ಜನರನ್ನು ದೋಚಲು ಯತ್ನಿ”ಸಿದ್ದು”!!
  • ಗಂಧದ ನಾಡಾಗಿದ್ದ ಕರ್ನಾಟಕವನ್ನು ನಶೆಯ ನಾಡನ್ನಾಗಿ”ಸಿದ್ದು”!!
  • ದಸರಾ ಕಲಾವಿದರ ಬಳಿ ಮಾಮೂಲು ಕೇಳಿ”ಸಿದ್ದು”!!
  • ಹಿಂದೂ ದೇವಾಲಯಗಳ ಹುಂಡಿ ಕಾಸನ್ನು ಎಗರಿ”ಸಿದ್ದು”!!
  • ಸಾರಿಗೆ ಇಲಾಖೆಗೆ ಡಕೋಟಾ ಬಸ್ಸುಗಳನ್ನು ಕರುಣಿ”ಸಿದ್ದು”!!
  • ಕೊಗಿಲು ಅಕ್ರಮವಾಸಿಗಳಿಗೆ ಐಷಾರಾಮಿ ಫ್ಲ್ಯಾಟ್‌ ಹಂಚಿ”ಸಿದ್ದು”!!
  • ನೀರಿನ ದರ ಏರಿ”ಸಿದ್ದು” – ಕಸಕ್ಕೆ ಟ್ಯಾಕ್ಸ್‌ ಹಾಕಿ”ಸಿದ್ದು”!!
  • ಬಾಣಂತಿಯರಿಗೆ ಸಾವಿನ ಭಾಗ್ಯ ಕರುಣಿ”ಸಿದ್ದು”!!
  • ಅನ್ನಭಾಗ್ಯದ 10 ಕೆಜಿ ಅಕ್ಕಿ ನೀಡದೆ ವಂಚಿ”ಸಿದ್ದು”!!
  • ದ್ವೇಷ ಭಾಷಣ ಕಾಯ್ದೆ ಜಾರಿಗೆ ತರಿ”ಸಿದ್ದು”!!
  • ಆರ್ಸಿಬಿ ವಿಜಯೋತ್ಸವದಲ್ಲಿ ಕನ್ನಡಿಗರ ಕೊಲೆ ಮಾಡಿ”ಸಿದ್ದು”!!
  • ಬಡವರಿಗೆ ಕಲುಷಿತ ನೀರು ಕುಡಿಸಿ ಸಾಯಿ”ಸಿದ್ದು”!!
  • ಪರಪ್ಪನ ಅಗ್ರಹಾರವನ್ನು ಐಷಾರಾಮಿ ರೆಸಾರ್ಟ್‌ ಆಗಿ”ಸಿದ್ದು”!!

ಇವಿಷ್ಟು ಸಾಧನೆಗಳು ನಮ್ಮ ಕಣ್ಣ ಮುಂದೆ ಕಾಣಿ”ಸಿದ್ದು”!!

ಇವುಗಳನ್ನು ಹೊರತುಪಡಿಸಿ ಯಾವುದಾದರೂ ಸಾಧನೆ ಬಿಟ್ಟುಹೋದಲ್ಲಿ ದಯವಿಟ್ಟು ನಮೂದಿಸತಕ್ಕದ್ದು. ದಾಖಲೆ ಬರೆದ “ಅಭಿನವ ಅರಸು”ಗೆ ಅಭಿನಂದನೆಗಳು… ನಿಮ್ಮ ದಾಖಲೆ ಆಡಳಿತದ ವೈಫಲ್ಯದ ಸಾಧನೆಗಳನ್ನು ಬಿಡುವು ಸಿಕ್ಕಾಗ ಒಮ್ಮೆ ಕಣ್ಣಾಡಿಸಿ ಎಂದು ವ್ಯಂಗ್ಯವಾಡಿದೆ.

  • 7 ವರ್ಷ 240 ದಿನಗಳ ಆಡಳಿತದಲ್ಲಿ
  • ಭ್ರಷ್ಟಾಚಾರ ಮಿತಿ ಮೀರಿದೆ
  •  ಸಾಲದ ಹೊರೆ
  • ಅಧಿಕವಾಗಿದೆ
  •  ಅಭಿವೃದ್ಧಿ ಶೂನ್ಯವಾಗಿದೆ
  •  ಕರುನಾಡು
  • ಗೂಂಡಾ ರಾಜ್ಯವಾಗಿದೆ
  •  ಶಾಲೆಗಳು ಪಾಳು ಬಿದ್ದಿದೆ
  •  ಜಲಾಶಯಗಳು ಹೂಳು ತುಂಬಿವೆ
  •  ನೇಮಕಾತಿ ನಡೆಯದಾಗಿದೆ
  •  ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ
  •  ರೈತರ ಆತ್ಮಹತ್ಯೆ ಲೆಕ್ಕಕ್ಕೆ ಸಿಗದಾಗಿದೆ
  •  ರಾಜ್ಯದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ
  •  ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಮುಟ್ಟಿದೆ
  •  ಓಲೈಕೆ ರಾಜಕಾರಣ ಮಿತಿಮೀರಿದೆ
  •  ಇವಿಷ್ಟೇ ಅಲ್ಲ ಪಟ್ಟಿ ಮುಂದುವರಿಯಲಿದೆ…

ಸಿದ್ದರಾಮಯ್ಯನವರೇ, ತಾವು ದಾಖಲೆಯ ಪುಸ್ತಕದಲ್ಲಿ ಬರೆದಿರುವುದು ಕೇವಲ ದಿನಗಳ ಸಂಖ್ಯೆಯನ್ನೇ ಹೊರತು, ಸಾಧನೆಯ ಅಕ್ಷರಗಳನ್ನಲ್ಲ! ತಮ್ಮ ತುಘಲಕ್‌ ಆಡಳಿತದ ದುಸ್ಥಿತಿಯ ದಿನಗಳನ್ನು ಕನ್ನಡಿಗರು ಎಂದಿಗೂ ಮರೆಯುವುದಿಲ್ಲ, ಕ್ಷಮಿಸುವುದಿಲ್ಲ ಎಂದು ಬಿಜೆಪಿ ಎಕ್ಸ್ ನಲ್ಲಿ ಕಿಡಿಕಾರಿದೆ.

Share

Leave a comment

Leave a Reply

Your email address will not be published. Required fields are marked *