Site icon Kannada News-suddikshana

ಇಂದು ರೆಬಲ್​ ಸ್ಟಾರ್ ಅಂಬರೀಶ್ ಅವರ​ 72ನೇ ಜನ್ಮದಿನೋತ್ಸವ

ಸ್ಯಾಂಡಲ್​ವುಡ್​​ ನಟ ದಿವಂಗತ ಅಂಬರೀಶ್​ ಅವರ 72ನೇ ಜನ್ಮ ದಿನವಿಂದು. ಕನ್ವರ್ಲಾಲ್​​ನ ಹುಟ್ಟುಹಬ್ಬಕ್ಕೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಶುಭಾಶಯ ಕೋರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನೆಚ್ಚಿನ ಅಪ್ಪಾಜಿಯ ಹುಟ್ಟುಹಬ್ಬವನ್ನು ಸ್ಮರಿಸಿಕೊಂಡಿದ್ದಾರೆ. ಅಭಿಮಾನಿಗಳು ಸಹ ಈ ದಿನವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

ಸಿಡಿಬಿ ಬಿಡುಗಡೆ ಮಾಡುವ ಮೂಲಕ ನೆನಪಿಸಿಕೊಂಡಿದ್ದಾರೆ. ಅಭಿಮಾನಿಗಳು ರೆಡಿ ಮಾಡಿರುವ ಸಿಡಿಪಿಯನ್ನು ನಟ ದರ್ಶನ್​ ಬಿಡುಗಡೆ ಮಾಡಿದ್ದು, ಇಂತಹ ಅವಕಾಶ ಮಾಡಿಕೊಟ್ಟ ಫ್ಯಾನ್ಸ್​ಗೆ ಧನ್ಯವಾದ ಸಮರ್ಪಿಸಿದ್ದಾರೆ. ಟ್ವೀಟ್​ ಮಾಡಿರುವ ದರ್ಶನ್​, ‘ನಮ್ಮೆಲ್ಲರ ಅಚ್ಚುಮೆಚ್ಚಿನ ಸಹೃದಯಿ, ರೆಬೆಲ್ ಸ್ಟಾರ್ ಅಂಬಿ ಅಪ್ಪಾಜಿ ರವರ ಹುಟ್ಟುಹಬ್ಬದ ಪ್ರಯುಕ್ತ ಮೂಡಿಬಂದಿರುವ CDP ಬಿಡುಗಡೆ ಮಾಡಲು ಅವಕಾಶ ಮಾಡಿಕೊಟ್ಟ ಅಭಿಮಾನಿ ಸಮೂಹಕ್ಕೆ ಧನ್ಯವಾದಗಳು. ನಮ್ಮ ನಿಷ್ಠೆಯ ಕೆಲಸ-ಕಾರ್ಯಗಳಲ್ಲಿ ಸದಾ ಬೆನ್ನೆಲುಬಾಗಿ ಅಂಬಿ ಅಪ್ಪಾಜಿ ನಮ್ಮೊಂದಿಗೆ ಜೀವಂತವಾಗಿದ್ದಾರೆ’ ಎಂದು ಬರೆದುಕೊಳ್ಳುವ ಮೂಲಕ ಅಂಬರೀಶ್​ ಅವರನ್ನು ನೆನಪಿಸಿಕೊಂಡಿದ್ದಾರೆ.

https://x.com/dasadarshan/status/1795432450635841841 ಸುಮಲತಾ ಅಂಬರೀಶ್​ ಕೂಡ ಟ್ವೀಟ್​ ಮಾಡಿದ್ದು, ‘‘ನಿನ್ನನ್ನು ನೆನೆಯುವುದು.. ಸದಾ ಮುಗುಳ್ನಗೆಯನ್ನು ತರುತ್ತದೆ.. ನಿನ್ನನ್ನು ಕಳೆದುಕೊಂಡಿರುವ ನೋವು ಹಾಗೆಯೇ ಉಳಿದಿದೆ.. ನೀನು ನಮ್ಮ ಜೀವನದ ಒಂದು ಭಾಗ.. ಪ್ರತಿ ದಿನ ಪ್ರತಿ ಕ್ಷಣ ಮತ್ತು ಎಂದೆಂದಿಗೂ.. ನೀನು ಜೀವನದ ಆಚೆಗೂ… ನೀನೇ ಜೀವನ.. ಸ್ವರ್ಗದಲ್ಲಿರುವ ನಿನಗೆ ಜನ್ಮದಿನದ ಶುಭಾಶಯಗಳು’’ ಎಂದು ಬರೆದುಕೊಂಡಿದ್ದಾರೆ. ಇನ್ನು ಅಂಬರೀಷ್ ಅವರ ಸಮಾಧಿಗೆ ತೆರಳಿ ಸುಮಲತಾ ಪೂಜೆ ಸಲ್ಲಿಸಿದರು. ‘ಅಂಬಿ ಅವರು ನಮ್ಮ ಮನಸ್ಸಲ್ಲಿ ಅಷ್ಟೇ ಅಲ್ಲ ಅಭಿಮಾನಿಗಳ ಮನಸ್ಸಲ್ಲಿ ಇದ್ದಾರೆ. ಆರು ವರ್ಷವಾದರೂ ಅಭಿಮಾನಿಗಳು ಈ ರೀತಿ ಸೆಲೆಬ್ರೇಷನ್ ಮಾಡುತ್ತಾರೆ. ಅವರು ಮಾಡಿದ ಒಳ್ಳೆ ಕೆಲಸಗಳಿಂದ ಜನ ಶಾಶ್ವತವಾಗಿ ಅವರನ್ನು ನೆನಪಿನಲ್ಲಿ ಉಳಿಸಿಕೊಂಡಿದ್ದಾರೆ. ಆ ಪ್ರೀತಿಯನ್ನೇ ನೋಡ್ಕೊಂಡು ನಾವು ತೃಪ್ತಿ ಪಡುತ್ತಿದ್ದೇವೆ’ ಎಂದಿದ್ದಾರೆ. https://x.com/sumalathaA/status/1795634542549889323

Exit mobile version