SUDDIKSHANA KANNADA NEWS/ DAVANAGERE/ DATE: 07-09-2023
ಸುದ್ದಿಕ್ಷಣ ಸಿನಿಮಾ ಡೆಸ್ಕ್: ಶೀಘ್ರದಲ್ಲೇ ನಮ್ಮ ಊರಿನಲ್ಲಿ ಭೇಟಿಯಾಗೋಣ! ಇದು ಮೋಹಕ ತಾರೆ, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ (Ramya) ಅಲಿಯಾಸ್ ದಿವ್ಯಾಸ್ಪಂದನ ಟ್ವೀಟ್ ಮಾಡಿರುವ ಒನ್ ಲೈನ್.
ಸಾಮಾಜಿಕ ಜಾಲತಾಣಗಳಲ್ಲಿ ನಟಿ ರಮ್ಯಾ (Ramya) ಅವರಿಗೆ ಹೃದಯಸ್ತಂಭನವಾಗಿ ಇಹಲೋಕ ತ್ಯಜಿಸಿದ್ದಾರೆ ಎಂದೆಲ್ಲಾ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಈ ಸುದ್ದಿ ಬೇರೆ ಭಾಷೆಯ ಮಾಧ್ಯಮಗಳಲ್ಲಿಯೂ ಪ್ರಕಟವಾಗಿದೆ. ಯಾಕೆಂದರೆ ಸುಳ್ಳು ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದ್ದರೂ ಸ್ಪಷ್ಟನೆ ಕೊಟ್ಟಿರಲಿಲ್ಲ. ಕೊನೆಗೆ ಅವರ ಆಪ್ತ ಬಳಗ ಸ್ಪಷ್ಟನೆ ನೀಡಿತ್ತು. ಆ ನಂತರ ಒನ್ ಲೈನ್ ಮಾತ್ರ ಟ್ವೀಟ್ ಮಾಡಿರುವ ರಮ್ಯಾ (Ramya) ಅವರು, ಶೀಘ್ರದಲ್ಲೇ ನಮ್ಮ ಊರಿನಲ್ಲಿ ಭೇಟಿಯಾಗೋಣ ಎಂದು ಹೇಳುವ ಮೂಲಕ ಎಲ್ಲಾ ವದಂತಿಗೆ ಎಳ್ಳು ನೀರು ಬಿಟ್ಟಿದ್ದಾರೆ.
ಈ ಸುದ್ದಿಯನ್ನೂ ಓದಿ:
ಮುಂಬೈ ಷೇರುಪೇಟೆ(Stock market)ಯಲ್ಲಿ ಮುಂದುವರೆದ ಏರಿಳಿತ : 19,600 ರ ಗಡಿ ದಾಟಿದ ನಿಫ್ಟಿ
ರಮ್ಯಾ (Ramya) ಚೆನ್ನಾಗಿದ್ದಾರೆ, ಅವರ ಜೊತೆ ಮಾತನಾಡಿದ್ದೇನೆ:
ರಮ್ಯಾ (Ramya) ಚೆನ್ನಾಗಿದ್ದಾರೆ, ಅವರ ಜೊತೆ ಮಾತನಾಡಿದ್ದೇನೆ. ಸುಳ್ಳು ಸುದ್ದಿ ಹಬ್ಬಿಸಬೇಡಿ. ಕೆಲ ಮಾಧ್ಯಮಗಳು ಮಾಹಿತಿ ಸರಿಯಾಗಿ ಪಡೆಯದೇ ಸುಳ್ಳು ಸುದ್ದಿಯನ್ನೇ ಪ್ರಸಾರ ಮಾಡಿವೆ. ಅವರಿಗೇನೂ ಆಗಿಲ್ಲ. ಬದುಕಿದ್ದಾರೆ ಎಂದು ಅವರ ಆಪ್ತ ಗೆಳತಿ ಹಾಗೂ ಪತ್ರಕರ್ತೆ ಚಿತ್ರಾ ಸುಬ್ರಹ್ಮಣ್ಯಂ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.
ಅತ್ಯಂತ ಪ್ರತಿಭಾವಂತ ಮತ್ತು ಸೌಮ್ಯ ಮಹಿಳೆ @divyaspandana. ಅವರನ್ನು ಜಿನೀವಾದಲ್ಲಿ ಭೋಜನಕ್ಕೆ ಭೇಟಿಯಾಗಿರುವುದು ಅದ್ಭುತವಾಗಿದೆ. ಬೆಂಗಳೂರಿನ ಮೇಲಿನ ಪ್ರೀತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದೆವು ಎಂದು ಪತ್ರಕರ್ತೆ ಚಿತ್ರಾ ಸುಬ್ರಮಣ್ಯಂ ಮಾಹಿತಿ ನೀಡಿದ್ದರು.
ನಕಲಿ ಸುದ್ದಿ ಯಾಕೆ ನಂಬ್ತೀರಾ…?
“ನಕಲಿ ಸುದ್ದಿ” ಎಂಬ ಪದವು ಆಕ್ಸಿಮೋರಾನ್ ಆಗಿದೆ. ನೀವು ಸುಳ್ಳು ಹೇಳುವ ಅಥವಾ ಆಧಾರವಿಲ್ಲದ ವದಂತಿಗಳನ್ನು ಹರಡುವ ವ್ಯವಹಾರದಲ್ಲಿಲ್ಲದಿದ್ದರೆ ಅದು ನಕಲಿ ಸುದ್ದಿಯಾಗುವುದು ಹೇಗೆ? ನಿಖರವಾದ ವಿವರಣೆಯು ತಪ್ಪು ಸುದ್ದಿಯಾಗಿದೆ. ಅದನ್ನು ಸರಳವಾಗಿ, ಸ್ವಚ್ಛವಾಗಿ ಮತ್ತು ಜವಾಬ್ದಾರಿಯುತವಾಗಿ ಇರಿಸಿ. ಪತ್ರಿಕೋದ್ಯಮ ಸತ್ಯಗಳನ್ನು ಹೇಳಬೇಕು ಎಂದು ಟ್ವೀಟ್ ಮಾಡಿದ್ದಾರೆ.
ರಮ್ಯಾರ ಬಗ್ಗೆ ಸುಳ್ಳು ಸುದ್ದಿ ಹಬ್ಬಿದ್ದು ಹೇಗೆ…?
ಯಾರೊಬ್ಬರ ಬಗ್ಗೆ ತಪ್ಪು ಸುದ್ದಿಗಳನ್ನು ಹರಡುವುದು ತುಂಬಾ ಸುಲಭ, ವಿಶೇಷವಾಗಿ ಅವರು @divyaspandana ಅವರಂತೆಯೇ ಪ್ರಸಿದ್ಧರಾಗಿದ್ದಾರೆ. ರಮ್ಯಾ ಆರೋಗ್ಯವಾಗಿದ್ದಾರೆ. ಕೆಲವು ಯೋಜನೆಗಳಲ್ಲಿ ಕೆಲಸ ಮಾಡಲು ಎದುರು ನೋಡುತ್ತಿದ್ದಾರೆ ಎಂದಿರುವ ಅವರು, ಪತ್ರಿಕೋದ್ಯಮದ ಮೂಲ ನಿಯಮಗಳಿಗೆ ಏನಾಯಿತು! ಭಾರತ ಎಂದು ಟ್ವೀಟ್ ನಲ್ಲಿ ಕಿಡಿಕಾರಿದ್ದಾರೆ.
ಅತ್ಯಂತ ಪ್ರತಿಭಾವಂತ ಮತ್ತು ಸೌಮ್ಯ ಮಹಿಳೆ @divyaspandana ಅವರನ್ನು ಜಿನೀವಾದಲ್ಲಿ ಭೋಜನಕ್ಕೆ ಭೇಟಿಯಾಗಿರುವುದು ಅದ್ಭುತವಾಗಿದೆ. ಬೆಂಗಳೂರಿನ ಮೇಲಿನ ಪ್ರೀತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದೆವು.
ಐಸ್ ಕ್ರೀಮ್ ಅತ್ಯುತ್ತಮವಾಗಿತ್ತು, ಜಿನೀವಾದಲ್ಲಿ ಬೇಸಿಗೆ ವಿಶೇಷವಾಗಿ ಸರೋವರದ ಸುತ್ತಲೂ ಸುಂದರವಾಗಿರುತ್ತದೆ ಮತ್ತು ಜಿನೀವಾದಲ್ಲಿ @divyaspandana ಅವರೊಂದಿಗಿನ ಸಂಭಾಷಣೆಯು ನನ್ನ ಆಲೋಚನೆಗೆ ಹೆಚ್ಚು ಮತ್ತಷ್ಟು ಐಡಿಯಾ
ನೀಡಿತು. ತಲೆಯಲ್ಲಿ ಮತ್ತಷ್ಟು ಹೊಸ ಆಲೋಚನೆಗಳು ಹೊಳೆದವು ಎಂದಿದ್ದಾರೆ.
ಅಭಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ರಮ್ಯಾ (Ramya) ದಶಕಗಳ ಕಾಲ ಕನ್ನಡ ಚಿತ್ರರಂಗ ಆಳಿದರು. ಅವರಷ್ಟು ಜನಪ್ರಿಯ ನಟಿ ಮತ್ತೊಬ್ಬರು ಇಲ್ಲ. ಇಂದಿಗೂ ರಮ್ಯಾ (Ramya) ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಮಾತ್ರವಲ್ಲ, ಇಂದಿಗೂ ಅತ್ಯಂತ ಬೇಡಿಕೆಯಲ್ಲಿರುವ ನಟಿ.
ರಮ್ಯಾ (Ramya) ಅವರು ಕನ್ನಡ ಚಲನಚಿತ್ರೋದ್ಯಮದಿಂದ ಸಂಸತ್ತಿನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ನಟಿ ಮತ್ತು ಎರಡನೇ ವ್ಯಕ್ತಿ..ಅವರು ಕರ್ನಾಟಕದ 28 ಸಂಸದರಲ್ಲಿ ಅತ್ಯಂತ ಕಿರಿಯರು ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ.
ದಿವ್ಯಾ ಸ್ಪಂದನಾ ಎಂದು ಹೆಸರಿನಿಂದ ಕರೆಯಲ್ಪಟ್ಟರೂ ರಮ್ಯಾ ಆಗಿ ಫೇಮಸ್ ಅದವರು. ನಟಿ, ಮಂಡ್ಯ ಕ್ಷೇತ್ರದಿಂದ ಜೆಡಿಎಸ್‌ನ ಸಿಎಸ್ ಪುಟ್ಟರಾಜು ಅವರನ್ನು ಸೋಲಿಸಿದ್ದರು. ರಮ್ಯಾ 2003 ರಲ್ಲಿ ಅಭಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಮಾತ್ರವಲ್ಲ, ಎಕ್ಸ್ ಕ್ಯೂಸ್ ಮಿ, ರಂಗ ಎಸ್ ಎಸ್ ಎಲ್ ಸಿ, ಆಕಾಶ್, ಕುಟುಂಬ, ಅರಸ, ಜೊತೆ ಜೊತೆಯಲಿ, ಮುಸ್ಸಂಜೆ ಮಾತು, ಸಂಜು ವೆಡ್ಸ್ ಗೀತಾ, ದತ್ತಾ, ಕಿಚ್ಚ ಹುಚ್ಚ, ಕಠಾರಿ ವೀರ ಸುರಸುಂದರಾಗಿ, ಮೀರ ಮಾಧವ ರಾಘವ, ನಾಗರಹಾವು ಸೇರಿದಂತೆ ತೆಲುಗು, ತಮಿಳಿನಲ್ಲಿಯೂ ಮಿಂಚು ಹರಿಸಿದವರು. ಖ್ಯಾತ ನಟರ ಜೊತೆ ನಟಿಸಿ ಸೈ ಎನಿಸಿಕೊಂಡವರು.