Home ಕ್ರೈಂ ನ್ಯೂಸ್ ರಾಸಲೀಲೆ ಪ್ರಕರಣದ ಆರೋಪಿ ಡಿಜಿಪಿ ರಾಮಚಂದ್ರರಾವ್ ವಿಚಾರಣೆ ನಡೆಸಿ ಶಿಸ್ತು ಕ್ರಮ: ಸಿಎಂ ಸಿದ್ದರಾಮಯ್ಯ ಗರಂ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ರಾಸಲೀಲೆ ಪ್ರಕರಣದ ಆರೋಪಿ ಡಿಜಿಪಿ ರಾಮಚಂದ್ರರಾವ್ ವಿಚಾರಣೆ ನಡೆಸಿ ಶಿಸ್ತು ಕ್ರಮ: ಸಿಎಂ ಸಿದ್ದರಾಮಯ್ಯ ಗರಂ!

Share
Share

ಬೆಂಗಳೂರು: ರಾಸಲೀಲೆ ವಿಡಿಯೋ ಪ್ರಕರಣಗಳು ವೈರಲ್ ಆದ ವಿಚಾರ ಗಮನಕ್ಕೆ ಬಂದಿದೆ. ವಿಚಾರಣೆ ನಡೆಸಿ ಕಾನೂನು ಪ್ರಕಾರ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಡಿಯೋಗಳು ವೈರಲ್ ಆದ ವಿಚಾರ ಗಮನಕ್ಕೆ ಬಂದಿದೆ. ವಿಚಾರಣೆ ನಡೆಸುತ್ತೇವೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಕಾನೂನಿಗೆ ಎಲ್ಲರೂ ತಲೆಬಾಗಲೇಬೇಕು. ಹಾಗಾಗಿ, ಶಿಸ್ತು ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದರು.

ಎಷ್ಟೇ ವ್ಯಕ್ತಿಯಾದರೂ, ಉನ್ನತ ಹುದ್ದೆಯಲ್ಲಿದ್ದವರಾದರೂ ಕಾನೂನಿನ ಮುಂದೆ ಸಮಾನರು. ಹಾಗೆಂದ ಮಾತ್ರಕ್ಕೆ ಸುಮ್ಮನೆ ಬಿಡುವುದಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಿ ಕ್ರಮ ಜರುಗಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದ ಉನ್ನತ ಹುದ್ದೆಯಲ್ಲಿದ್ದ ಡಿಜಿಪಿ ರಾಮಚಂದ್ರರಾವ್ ಯುವತಿಯರು ಮತ್ತು ಮಹಿಳೆಯರ ಜೊತೆ ಕುಚ್ ಕುಚ್ ನಡೆಸಿರುವ ವಿಡಿಯೋಗಳು ಬಹಿರಂಗವಾಗಿವೆ. ಇದು ರಾಜ್ಯದ ಪೊಲೀಸ್ ಇಲಾಖೆಗೆ ಭಾರೀ ಮುಜುಗರ ತಂದಿತ್ತು.

ಕಳೆದ ವರ್ಷದ ಹಿಂದೆ ಈ ವಿಡಿಯೋಗಳನ್ನು ರೆಕಾರ್ಡ್ ಮಾಡಲಾಗಿದೆ. ಈಗ ಈ ವಿಡಿಯೋಗಳನ್ನು ಹರಿಬಿಡಲಾಗಿದೆ.
ಪೊಲೀಸ್ ಸಮವಸ್ತ್ರದಲ್ಲಿದ್ದಾಗಲೇ ಡಿಜಿಪಿ ರಾಮಚಂದ್ರರಾವ್ ಕಚೇರಿಯಲ್ಲಿ ಪೊಲೀಸ್ ಡ್ರೆಸ್ ನಲ್ಲೇ ಮಹಿಳೆಯರ ಜೊತೆಗೆ ರಾಸಲೀಲೆ ನಡೆಸಿರುವುದು ಬೆಳಕಿಗೆ ಬಂದಿದೆ. ರಾಮಚಂದ್ರರಾವ್ ಮಹಿಳೆಯರನ್ನು ಅಪ್ಪಿಕೊಂಡು, ಮುದ್ದಾಡುತ್ತಾ, ತಬ್ಬಿಕೊಂಡು, ಹೊಟ್ಟೆ ಇಸುಕುತ್ತಾ ಲೈಂಗಿಕ ತೀಟೆ ತೀರಿಸಿಕೊಂಡಿರುವಂಥ ವಿಡಿಯೋಗಳು ರಿಲೀಸ್ ಆಗಿವೆ.

ಕರ್ನಾಟಕದ ಡಿಜಿಪಿ ದರ್ಜೆಯ ಐಪಿಎಸ್ ಅಧಿಕಾರಿಯಾಗಿರುವ ಡಾ.ರಾಮಚಂದ್ರರಾವ್ ಅವರು ಮಹಿಳೆಯರ ಜೊತೆ ರಾಸಲೀಲೆ ನಡೆಸುತ್ತಿರುವ ವಿಡಿಯೋ ಬಿಡುಗಡೆಯಾಗಿದ್ದು, ಭಾರೀ ಮುಜುಗರಕ್ಕೂ ಕಾರಣವಾಗಿದೆ.

Share

Leave a comment

Leave a Reply

Your email address will not be published. Required fields are marked *