Site icon Kannada News-suddikshana

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮ ಮಂದಿರಕ್ಕೆ ಬೀಗ: ಪ್ರಧಾನಿ ಮೋದಿ

ಶಿಮ್ಲಾ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮ ಮಂದಿರಕ್ಕೆ ಬೀಗ ಹಾಕ್ತಾರೆ. ಹೀಗಾಗಿ ಮತಗಟ್ಟೆ ಇವರನ್ನು ಸ್ವಚ್ಛ ಮಾಡಬೇಕಿದೆ. ನನ್ನ ಸ್ವಚ್ಛ ಭಾರತ ಅಭಿಯಾನ ನಿಮಗೆ ಗೊತ್ತಿದೆಯಲ್ಲ..ಅದೇ ರೀತಿ ಕಾಂಗ್ರೆಸ್‌ಅನ್ನು ಮತಗಟ್ಟೆಯಿಂದ ಸ್ವಚ್ಛ ಮಾಡಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಹಿಮಾಚಲ ಪ್ರದೇಶದ ಸಿರ್ಮೌರ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮಾಡಿರುವ ಷಡ್ಯಂತ್ರವನ್ನು ಈಗಾಗಲೇ ಅವರೇ ಬಹಿರಂಗಪಡಿಸಿದ್ದಾರೆ. ಅವರು ಅಧಿಕಾರಕ್ಕೆ ಬಂದರೆ ಬಾಲರಾಮನನ್ನು ಟೆಂಟ್‌ನಲ್ಲಿ ಕೂರಿಸಿ ಮಂದಿರಕ್ಕೆ ಬೀಗ ಹಾಕ್ತಾರೆ. ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗದವರ ಮೀಸಲಾತಿಯನ್ನು ಕಸಿದು ಮುಸ್ಲಿಮರಿಗೆ ನೀಡಿದೆ. ಕೋಮುವಾದ, ಜಾತೀಯತೆ, ಕುಟುಂಬ ರಾಜಕಾರಣ ಇವೆಲ್ಲ ಕಾಂಗ್ರೆಸ್‌ನ ಹಾಗೂ ಅದರ ಮಿತ್ರ ಪಕ್ಷಗಳಲ್ಲಿ ಸಾಮಾನ್ಯವಾಗಿದೆ ಎಂದು ನರೇಂದ್ರ ಮೋದಿ ಆರೋಪಿಸಿದ್ದಾರೆ.

Exit mobile version