Site icon Kannada News-suddikshana

ಪಡಿತರ ಚೀಟಿದಾರರು, ಬಿ.ಪಿ.ಎಲ್, ಅಂತ್ಯೋದಯ ಪಡಿತರ ಚೀಟಿ ಪಡೆಯಲು ಅನರ್ಹರು: ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಪಡಿತರ ಚೀಟಿ

SUDDIKSHANA KANNADA NEWS/ DAVANAGERE/DATE:19_09_2025

ದಾವಣಗೆರೆ: ರಾಜ್ಯ ಸರ್ಕಾರವು ಅನಧಿಕೃತ ಪಡಿತರ ಚೀಟಿದಾರರು, ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿಗಳ ರದ್ದುಪಡಿಸಲು ಮುಂದಾಗಿದೆ. ಈ ನಡುವೆ ಯಾರ್ಯಾರದ್ದು ರದ್ದಾಗುತ್ತೆ ಎಂಬ ಆತಂಕ ಜನರಲ್ಲಿ ಕಾಡುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

READ ALSO THIS STORY: ಕರ್ನಾಟಕ ಗ್ರಾಮೀಣ ಬ್ಯಾಂಕ್ ಭರ್ಜರಿ ನೇಮಕಾತಿ: 1,425 ಕಚೇರಿ ಸಹಾಯಕ, ಸಹಾಯಕ ವ್ಯವಸ್ಥಾಪಕ, ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪಡಿತರ ಚೀಟಿಯಲ್ಲಿನ ಎಲ್ಲಾ ಸದಸ್ಯರು ಹೊಂದಿರುವ ಜಮೀನು ಸೇರಿಸಿದಾಗ, 7 ಎಕರೆಗೂ ಹೆಚ್ಚು ಜಮೀನು ಇದ್ದಲ್ಲಿ ಅಂತಹವರು ಬಿ.ಪಿ.ಎಲ್, ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.

ಪಡಿತರ ಚೀಟಿಯ ಯಾವುದೇ ಸದಸ್ಯ 4 ಚಕ್ರ ವಾಹನ (only white board) ಹೊಂದಿದ್ದಲ್ಲಿ ಅಂತಹವರು ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ ಸದಸ್ಯರು(ತಂದೆ/ ತಾಯಿ/ಹೆಂಡತಿ / ಅವಿವಾಹಿತ ಮಕ್ಕಳು) ಬಿ.ಪಿ.ಎಲ್/ ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.

ಜಿ.ಎಸ್.ಟಿ ಅಥವಾ ಆದಾಯ ತೆರಿಗೆ ಪಾವತಿಸುತ್ತಿರುವ ಯಾವುದೇ ವ್ಯಕ್ತಿ ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ ಸದಸ್ಯರು (ತಂದೆ/ ತಾಯಿ/ ಹೆಂಡತಿ/ ಅವಿವಾಹಿತ ಮಕ್ಕಳು) ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.

ಸರ್ಕಾರಿ ನೌಕರಿ ಮಾಡುತ್ತಿರುವ ಯಾವುದೇ ವ್ಯಕ್ತಿ ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ ಸದಸ್ಯರು (ತಂದೆ/ತಾಯಿ/ಹೆಂಡತಿ/ಅವಿವಾಹಿತ ಮಕ್ಕಳು) ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.

ಸಹಕಾರಿ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಯಂ ಸಿಬ್ಬಂಧಿ ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ ಸದಸ್ಯರು (ತಂದೆ/ ತಾಯಿ/ ಹೆಂಡತಿ/ ಅವಿವಾಹಿತ ಮಕ್ಕಳು) ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.

ವೃತ್ತಿಪರ ನೌಕರರು (ವೈದ್ಯರು, ಇಂಜಿನೀಯರ್‌ಗಳು, ವಕೀಲರು, ಇತರರು) ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ ಸದಸ್ಯರು (ತಂದೆ/ ತಾಯಿ/ ಹೆಂಡತಿ/ ಅವಿವಾಹಿತ ಮಕ್ಕಳು) ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.

ನೋಂದಾಯಿತ ಗುತ್ತಿಗೆದಾರರು, ಎ.ಪಿ.ಎಂ.ಸಿ ಟ್ರೇಡರ್ಗಳು, ಕಮಿಷನ್ ಏಜೆಂಟರು, ಬೀಜ ಮತ್ತು ಗೊಬ್ಬರ ಡೀಲರ್‌ಗಳು ಇತ್ಯಾದಿ ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ ಸದಸ್ಯರು (ತಂದೆ/ ತಾಯಿ/ ಹೆಂಡತಿ/ ಅವಿವಾಹಿತ ಮಕ್ಕಳು) ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.

ಅನುದಾನಿತ ಶಾಲಾ ಕಾಲೇಜುಗಳ ನೌಕರರು ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ ಸದಸ್ಯರು (ತಂದೆ/ ತಾಯಿ/ ಹೆಂಡತಿ/ ಅವಿವಾಹಿತ ಮಕ್ಕಳು) ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.

ಸರ್ಕಾರಿ ಸ್ವಾಮ್ಯದ ಉದ್ಯಮಗಳು/ ಮಂಡಳಿಗಳು /ನಿಗಮಗಳ ಖಾಯಂ ನೌಕರರು, ಸ್ವಾಯತ್ತ ಸಂಸ್ಥೆ/ ಮಂಡಳಿಯ ನೌಕರರು ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ ಸದಸ್ಯರು (ತಂದೆ/ ತಾಯಿ/ ಹೆಂಡತಿ/ ಅವಿವಾಹಿತ ಮಕ್ಕಳು) ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.

ಇನ್ನು ದಾವಣಗೆರೆಗೆ ಆಗಮಿಸಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಹೆಚ್. ಮುನಿಯಪ್ಪ ಸುಳಿವು ನೀಡಿದ್ದರು. ಸಿಎಂ ಸಿದ್ದರಾಮಯ್ಯ ಅವರೂ ಸಹ ಅರ್ಹರಿಗೆ ತೊಂದರೆಯಾಗದಂತೆ ಬಿಪಿಎಲ್ ಕಾರ್ಡ್ ರದ್ದುಪಡಿಸುವಂತೆ ಸೂಚನೆ ನೀಡಿದ್ದರು. ಮೇಲಿನ ಅಂಶಗಳಿದ್ದವರು ಅನರ್ಹರಾಗುವುದು ಗ್ಯಾರಂಟಿ.

Exit mobile version