Site icon Kannada News-suddikshana

ಶಿವಮೊಗ್ಗಕ್ಕೆ ಮೂರು ತಿಂಗಳಲ್ಲಿ ವಂದೇ ಭಾರತ್ ರೈಲು- ಸಚಿವ ಸೋಮಣ್ಣ

ಶಿವಮೊಗ್ಗ: ಶಿವಮೊಗ್ಗ ಶಿಕಾರಿಪುರ ರೈಲ್ವೆ ಯೋಜನೆಯ ಕೆಲಸ ಈಗಾಗಲೇ ಆರಂಭವಾಗಿದೆ. 2026 ರೊಳಗೆ ಶಿವಮೊಗ್ಗ ಶಿಕಾರಿಪುರ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಹೇಳಿದರು.

ಶಿವಮೊಗ್ಗದಲ್ಲಿ ರೈಲ್ವೆ ಯೋಜನೆಗಳ ಪರಿಶೀಲಿಸಿ ಮಾತನಾಡಿದ ಅವರು, ಕೋಟೆ ಗಂಗೂರಿನಲ್ಲಿ ಕೋಚಿಂಗ್ ಡಿಪೋ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಮುಂದಿನ ಜೂನ್​​ನಲ್ಲಿ ಈ ಕಾಮಗಾರಿ ಮುಗಿಸುತ್ತೇವೆ ಎಂದರು.

ಮೋದಿ ಮೂರನೇ ಬಾರಿ ಪ್ರಧಾನಿಯಾದ ಮೇಲೆ ರೈಲ್ವೆ ಇಲಾಖೆ ಐತಿಹಾಸಿಕ ಕಾರ್ಯಗಳನ್ನು ಮಾಡುತ್ತಿದೆ. ಕರ್ನಾಟಕದಲ್ಲಿ ಕೋಚಿಂಗ್ ಡಿಪೋ ಸಿದ್ಧವಾಗುತ್ತಿದ್ದು, ಶಿವಮೊಗ್ಗದಲ್ಲೇ ಆಗುತ್ತಿರುವುದು ಗಮನಾರ್ಹ ಎಂದು ಹೇಳಿದರು. ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ ವೀಕ್ಷಣೆ ಮಾಡಿದ ಬಳಿಕ ಅವರು ಪ್ರತಿಕ್ರಿಯೆ ನೀಡಿದರು.

ರೈಲ್ವೆ ಇಲಾಖೆಯಲ್ಲಿ ಕಳಪೆ ಕಾಮಗಾರಿ ಸಹಿಸಲ್ಲ. ರೈಲ್ವೆ ಇಲಾಖೆ ಎಂಬುದು ರಕ್ಷಣಾ ಇಲಾಖೆ ಇದ್ದ ಹಾಗೆ. ಇನ್ನು ಎರಡರಿಂದ ಮೂರು ತಿಂಗಳಲ್ಲಿ ವಂದೇ ಭಾರತ್ ರೈಲು ಶಿವಮೊಗ್ಗಕ್ಕೆ ಬರಲಿದೆ ಎಂದು ಅವರು ಹೇಳಿದರು.

Exit mobile version