Home ದಾವಣಗೆರೆ ಪುಣೆ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿಗೆ ಯುವತಿಯಿಂದ ಮುತ್ತು ಮುತ್ತು ಸಿಹಿಮುತ್ತು: ನೆಟ್ಟಿಗರ ಗಮನ ಸೆಳೆದ ಕ್ಯೂಟ್ ಕ್ಷಣ!
ದಾವಣಗೆರೆನವದೆಹಲಿಬೆಂಗಳೂರು

ಪುಣೆ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿಗೆ ಯುವತಿಯಿಂದ ಮುತ್ತು ಮುತ್ತು ಸಿಹಿಮುತ್ತು: ನೆಟ್ಟಿಗರ ಗಮನ ಸೆಳೆದ ಕ್ಯೂಟ್ ಕ್ಷಣ!

Share
ರಾಹುಲ್ ಗಾಂಧಿ
Share

ಪುಣೆ: ಪುಣೆಯಲ್ಲಿ ಆಯೋಜಿಸಲಾಗಿದ್ದ “ಛಾತ್ರೋಂ ಕೀ ಗೂಂಜ್” (ವಿದ್ಯಾರ್ಥಿಗಳ ಧ್ವನಿ) ಎಂಬ ಯುವ ಮತ್ತು ವಿದ್ಯಾರ್ಥಿ ಸಂವಾದ ಕಾರ್ಯಕ್ರಮದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಅವರು ವೇದಿಕೆಯ ಮೇಲೆ ಬೆಂಬಲಿಗರು ಮತ್ತು ವಿದ್ಯಾರ್ಥಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ, ಯುವತಿಯೊಬ್ಬಳು ಹತ್ತಿರ ಬಂದು ಅವರ ಕೆನ್ನೆಗೆ ಮುತ್ತಿಟ್ಟು ತನ್ನ ಸಂತಸವನ್ನು ವ್ಯಕ್ತಪಡಿಸಿದಳು.

ಈ ಘಟನೆಯ ನಂತರ ರಾಹುಲ್ ಗಾಂಧಿ ಆಕೆಯೊಂದಿಗೆ ಕ್ಷಣಕಾಲ ಸಂಭಾಷಣೆ ನಡೆಸಿ, ನಂತರ ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ವೇದಿಕೆಯಿಂದ ತೆರಳಿದರು. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ರಾಹುಲ್ ಗಾಂಧಿ ಹೇಳಿಕೆ: ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ದೇಶದಲ್ಲಿರುವ “ಮನುಸ್ಮೃತಿ ಮನಸ್ಥಿತಿ”ಯನ್ನು ಟೀಕಿಸಿದರು. ಮಹಿಳೆಯರು ಪಿತೃಪ್ರಭುತ್ವದ ಸಂಕೋಲೆಗಳನ್ನು ಮುರಿಯಬೇಕು ಎಂದು ಕರೆ ನೀಡಿದ್ದಲ್ಲದೆ, ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ ಮಹಿಳಾ ಕ್ರೀಡಾಪಟುಗಳ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವನ್ನು ಪ್ರಶ್ನಿಸಿದರು.

ಬಿಜೆಪಿ ಪ್ರತಿಕ್ರಿಯೆ: ಮಹಾರಾಷ್ಟ್ರ ಬಿಜೆಪಿ ಉಪಾಧ್ಯಕ್ಷ ಕೇಶವ್ ಉಪಾಧ್ಯೆ ಈ ಕಾರ್ಯಕ್ರಮವನ್ನು “ರಾಜಕೀಯ ಕಾಮಿಡಿ ಶೋ” ಎಂದು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ವಿದ್ಯಾರ್ಥಿಗಳ ನಿಜವಾದ ಸಮಸ್ಯೆಗಳನ್ನು ಬಿಟ್ಟು ಕೇವಲ ರಾಜಕೀಯ ಭಾಷಣ ಮಾಡಿದೆ ಮತ್ತು ಜನರನ್ನು ಸೇರಿಸಲು ಕಾಲೇಜು ಬಸ್‌ಗಳನ್ನು ಬಳಸಿಕೊಂಡಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ತಿರುಗೇಟು: ಕಾಂಗ್ರೆಸ್ ಕಾರ್ಯದರ್ಶಿ ಸಚಿನ್ ಸಾವಂತ್ ಮಾತನಾಡಿ, ಸರಕಾರದ ನಾನಾ ನಿರ್ಬಂಧಗಳ ನಡುವೆಯೂ ಕಾರ್ಯಕ್ರಮಕ್ಕೆ ಸಿಕ್ಕ ಅಭೂತಪೂರ್ವ ಸ್ಪಂದನೆ ಕಂಡು ಬಿಜೆಪಿ ನಾಯಕರ ನಿದ್ರೆ ಗೆಟ್ಟಿದೆ ಎಂದು ಪ್ರತ್ಯುತ್ತರ ನೀಡಿದರು.

Share

Leave a comment

Leave a Reply

Your email address will not be published. Required fields are marked *

Related Articles