SUDDIKSHANA KANNADA NEWS/DAVANAGERE/DATE:02_01_2026
ದಾವಣಗೆರೆ: ಸ್ಯಾಂಡಲ್ ವುಡ್ ಖ್ಯಾತ ನಟಿ, ಕೂಲಿ ಸಿನಿಮಾ ಮೂಲಕ ಸೂಪರ್ ಸ್ಟಾರ್ ರಜನೀಕಾಂತ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದ ಡಿಂಪಲ್ ಕ್ವೀನ್ ರಚಿತಾ ರಾಮ್, ಕಿರುತೆರೆ ಮತ್ತು ಸಿನಿಮಾ ಮೂಲಕ ಮನೆ ಮಾತಾಗಿರುವ ಮಲೈಕಾ ಮತ್ತು ಸ್ಟೈಲಿಶಾ ಸ್ಟಾರ್ ಜೈದ್ ಖಾನ್ ದಾವಣಗೆರೆಗೆ ಜನವರಿ 4ರಂದು ಬರುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: BIG BREAKING: ಭದ್ರಾ ಅಚ್ಚುಕಟ್ಟು ಬೇಸಿಗೆ ಹಂಗಾಮಿಗೆ ಜನವರಿ 8ರಿಂದ ನಾಲೆಗೆ ನೀರು
ಅಂದು ಸಂಜೆ ಆರು ಗಂಟೆಗೆ ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಕಲ್ಟ್ ಚಲನಚಿತ್ರದ ಹಾಡೊಂದರ ಧ್ವನಿಸುರುಳಿ ಬಿಡುಗಡೆ ಮಾಡಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸ್ಟೈಲಿಶ್ ಸ್ಟಾರ್ ಜೈದ್ ಖಾನ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಡ್ಯಾನ್ಸ್ ಮಾಡಿರುವ ಹಾಡು ರಿಲೀಸ್ ಆಗುತ್ತಿದೆ. ಯಾವ ಹಾಡು ಎಂಬುದನ್ನು ಇನ್ಮೂ ಚಿತ್ರತಂಡ ರಿವೀಲ್ ಮಾಡಿಲ್ಲ. ಈ ಹಾಡು ಬಿಡುಗಡೆ ಮಾಡಲಾಗುತ್ತಿದ್ದು, ಅಭಿಮಾನಿಗಳು ಕಾಯುತ್ತಿರುವುದಕ್ಕೆ ವೇದಿಕೆಯಲ್ಲೇ ಉತ್ತರ ಸಿಗಲಿದೆ ಎಂದು ಕೆಜಿಪಿ ಗೋಲ್ಡ್ ಪ್ಯಾಲೇಸ್ ಪ್ರಮುಖರೂ ಆದ ಕಾರ್ಯಕ್ರಮ ಸಂಘಟಕ ಸಂದೇಶ್ ರಾಯ್ಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಡಿಸೆಂಬರ್ 16ರಂದು ಧ್ವನಿಸುರುಳಿ ಬಿಡುಗಡೆ ಸಮಾರಂಭ ನಿಗದಿಯಾಗಿತ್ತು. ಡಿಸೆಂಬರ್ 14ಕ್ಕೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷರೂ ಆಗಿದ್ದ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರ ನಿಧನದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು ಎಂದು ತಿಳಿಸಿದರು.
ಕೆಜಿಪಿ ಗೋಲ್ಡ್ ಪ್ಯಾಲೇಸ್ ಆಯೋಜಿಸಿರುವ ಕಲ್ಡ್ ಚಲನಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭಕ್ಕೆಂದು ಆಗಮಿಸುತ್ತಿದ್ದಾರೆ. ಇವರ ಜೊತೆಗೆ ಕನ್ನಡದ ಖ್ಯಾತ ಗಾಯಕ ಚಂದನ್ ಶೆಟ್ಟಿ ಮತ್ತು ಆಲ್ ಓಕೆ ಚಿತ್ರದವರು ಕಲ್ಟ್ ಚಲನಚಿತ್ರದ
ಪ್ರಮೋಷನ್ ಗಾಗಿ ಬರುತ್ತಿದ್ದಾರೆ. ಕೆಜಿಪಿ ಗೋಲ್ಡ್ ಫೌಂಡೇಶನ್ ಅಧ್ಯಕ್ಷ ಶ್ರೀಗಂಧ ಶೇಟ್, ಕೆಜಿಪಿ ಗ್ರೂಪ್ ಆಫ್ ಕಂಪನೀಸ್ ಆಶ್ರಯದಲ್ಲಿ ಆಯೋಜಿಸುತ್ತಿರುವ ಬೆಣ್ಣೆನಗರಿಯಲ್ಲಿ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ಪ್ರಿಯರು, ದಾವಣಗೆರೆ ಜನರು ಆಗಮಿಸುವಂತೆ ಮನವಿ ಮಾಡಿದರು.
ಈ ಧ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಸೇರಿದಂತೆ ಗಣ್ಯಾತಿ ಗಣ್ಯರು ಆಗಮಿಸಲಿದ್ದಾರೆ ಎಂದು ಹೇಳಿದರು.
ಧ್ವನಿಸುರುಳಿ ಬಿಡುಗಡೆ ಸಮಾರಂಭದ ಬಳಿಕ ರ್ಯಾಪ್ ಸ್ಟಾರ್, ಖ್ಯಾತ ಗಾಯಕ ಚಂದನ್ ಶೆಟ್ಟಿ, ಆಲ್ ಒಕೆ ಚಿತ್ರದವರು ಕಲ್ಟ್ ಸಿನಿಮಾದ ಪ್ರಮೋಷನ್ ಗಾಗಿ ಬರುತ್ತಿದ್ದು, ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂದೇಶ್ ರಾಯ್ಕರ್ ಮಾಹಿತಿ ನೀಡಿದರು.
ಕಲ್ಟ್ ಸಿನಿಮಾ ಜನವರಿ 23ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುತ್ತಿದೆ. ಈ ಸಿನಿಮಾದ ಪ್ರಮೋಷನ್ ಕೂಡ ಎಲ್ಲಾ ಜಿಲ್ಲೆಗಳಲ್ಲಿಯೂ ನಡೆಯುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಲ್ಟ್ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಬಹುನಿರೀಕ್ಷಿತ ಸಿನಿಮಾ. ಈ ಸಿನಿಮಾವು ಹಲವು ವಿಶೇಷತೆಗಳನ್ನು ಹೊಂದಿದೆ. ಡಿಂಪಲ್ ಕ್ವೀನ್ ರಚಿತಾ ರಾಮ್, ಮಲೈಕಾ ಹಾಗೂ ಜೈದ್ ಖಾನ್ ನಟನೆಯ ಸಿನಿಮಾವಾಗಿದ್ದು, ಸಿನಿಪ್ರೇಕ್ಷಕರಿಗೆ ಹಾಗೂ ರಾಜ್ಯದ ಜನರಿಗೆ ಇಷ್ಟವಾಗಲಿದೆ ಎಂದು ತಿಳಿಸಿದರು.






Leave a comment