ದಾವಣಗೆರೆ: ದಾವಣಗೆರೆ ಚೆಸ್ ಕ್ಲಬ್ ವತಿಯಿಂದ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಇವರ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವ ಹಾಗೂ ಪುನಿತ್ ರಾಜಕುಮಾರ್ ಅವರ ಸವಿನೆನಪಿಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ನಗರದಲ್ಲಿ ಓಪನ್ ರಾಪಿಡ್ ಪುನೀತ್ ರಾಜ್‍ಕುಮಾರ್ ಕಪ್ ಸೀಸನ್-4 ಚದುರಂಗ ಸ್ಪರ್ಧೆಯನ್ನು ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿತ್ತು.
READ ALSO THIS STORY: ಡ್ರಗ್ಸ್ ಕೇಸಲ್ಲಿ ದಾವಣಗೆರೆ ಕಾಂಗ್ರೆಸ್ ಮುಖಂಡ, ರಿಯಲ್ ಎಸ್ಟೇಟ್ ಉದ್ಯಮಿ ಶಾಮನೂರು ವೇದಮೂರ್ತಿ ಸೇರಿ ನಾಲ್ವರ ಬಂಧನ!
ಬೆಳಗ್ಗಿನಿಂದ ಲೀಗ್ ಮಾದರಿಯಲ್ಲಿ ಪಂದ್ಯಾವಳಿಗಳು ಎಂಟು ಸುತ್ತುಗಳಲ್ಲಿ ನಡೆದು ಕೊನೆಯ ಸುತ್ತಿನಲ್ಲಿ ಶಿವಮೊಗ್ಗದ ಅಜಯ್ ಎಸ್ ಎಂ ಅವರ ವಿರುದ್ಧ ಗೆದ್ದು ಪ್ರಥಮ ಸ್ಥಾನ ಪಡೆದು 15000 ನಗದು ಹಾಗೂ ಪುನೀತ್ ರಾಜಕುಮಾರ್ ಕಪ್ ಮುಡಿಗೇರಿಸಿಕೊಂಡರು.
ದಿನೇಶ್ ಕೆ. ಶೆಟ್ಟಿ ಹಾಗೂ ಮಾಜಿ ಮಹಾಪೌರರಾದ ಚಮನ್ ಸಾಬ್, ಮಾಜಿ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ನಾಗರಾಜ್, ದೂಡಾ ಸದಸ್ಯೆ ವಾಣಿ ಬಕ್ಕೇಶ್, ಮುಸ್ತಫಾ, ಅಜ್ಜಂಪುರ ಬಕ್ಕೇಶ್ ಅವರು ಪುನೀತ್ ಟ್ರೋಫಿಯನ್ನು ವಿತರಿಸಿ ಸನ್ಮಾನಿಸಿದರು.
ನಂತರದ ಸ್ಥಾನಗಳಲ್ಲಿ ಶಿವಮೊಗ್ಗದ ಅಜಯ್ ಎಸ್. ಎಂ. ಎರಡನೇ ಸ್ಥಾನವನ್ನು ಪಡೆದು 10 ಸಾವಿರ ನಗದು ಹಾಗೂ ವಿಶೇಷ ಟ್ರೋಫಿ ಶಿವಮೊಗ್ಗದ ವಿಲಾಸ್ 5000 ನಗದು ಹಾಗೂ ಟ್ರೋಫಿ ಮೂರನೇ ಸ್ಥಾನ ಗೋಪಿನಾಥ್ 4ನೇ ಸ್ಥಾನ ನಯಾಝ ಅಹಮದ್ ಐದನೇ ಸ್ಥಾನವನ್ನು ಪಡೆದರು ಪ್ರಶಸ್ತಿ ಪಡೆದ ವಿಜೇತರಿಗೆ ಮಹಾನಗರ ಪಾಲಿಕೆಯ ಮಹಾಪೌರರಾದ ಚಮನ್ ಸಾಬ್ ಅವರು ವಿತರಿಸಿದರು.
READ ALSO THIS STORY: ದಾವಣಗೆರೆಯಲ್ಲಿ 1 ಲಕ್ಷ ನಗದು ಸೇರಿ 11 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ: ಆರೋಪಿಗಳ ಹಿನ್ನೆಲೆ ಬಗ್ಗೆ ಪೊಲೀಸರಿಂದ ಮಹತ್ವದ ಮಾಹಿತಿ!
ಈ ಪಂದ್ಯಾವಳಿಯಲ್ಲಿ ವಿಶೇಷ ಬಹುಮಾನವಾಗಿ 19 ವರ್ಷ ಮೇಲ್ಪಟ್ಟ ಮಹಿಳೆಯರ ಭಾಗದಲ್ಲಿ ಕೌಸಲ್ಯ ಎಸ್ ಪ್ರಥಮ ಬಹುಮಾನ ರೂ.2,000 ಮತ್ತು ಟ್ರೋಫಿ ಸೋನಿಯಾ ಸಿಂಗಾಣಿಯ ದ್ವಿತೀಯ ಬಹುಮಾನ ರೂ. 1,500- ಹಾಗೂ ಟ್ರೋಫಿ ನಂದಿನಿ ವಿ ತೃತೀಯ ಬಹುಮಾನ ರೂ.1,000 ನಗದು ಮತ್ತು ಟ್ರೋಫಿ 4ನೇ ರಿಂದ 10ನೇ ಸ್ಥಾನ ಪಡೆದವರಿಗೆ ವಿಶೇಷ ಟ್ರೋಫಿಗಳನ್ನು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ವಾಣಿ ಬಕ್ಕೇಶ್ ಅವರು ವಿತರಿಸಿದರು.
59 ವರ್ಷ ಮೇಲ್ಪಟ್ಟ ವಯಸ್ಕರ ವಿಭಾಗದಲ್ಲಿ ಹೊನ್ನಾಳಿಯ ಹಾಲೇಶ್ವರಯ್ಯ ಪ್ರಥಮ ಸ್ಥಾನ ರೂ.2,000 ಮತ್ತು ಟ್ರೋಫಿ ಚಿಕ್ಕಮಗಳೂರಿನ ಮಂಜುನಾಥ್ ಪ್ರಸಾದ್ ದ್ವಿತೀಯ ರೂ.1,500 ಟ್ರೋಫಿ ತೃತೀಯ, ದಾವಣಗೆರೆಯ ಬಸವರಾಜ್ ವಿ ಪಿ ರೂ.1.000 ನಗದು ಹಾಗೂ ವಿಶೇಷ ಟ್ರೋಫಿ ಪಡೆದರು. ನಂತರದ 4 ರಿಂದ 10ನೇ ಸ್ಥಾನ ಪಡೆದ ಹಿರಿಯ ಕ್ರೀಡಾಪಟುವಿಗೆ ವಿಶೇಷ ಬಹುಮಾನವಾಗಿ ಟ್ರೋಫಿಗಳನ್ನು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಗಡಿಗುಡಾಳ್ ಮಂಜುನಾಥ್ ಅವರು ವಿತರಿಸಿದರು.
49 ವರ್ಷದ ಮೇಲ್ಪಟ್ಟ ಹಿರಿಯರ ವಿಭಾಗದಲ್ಲಿ ಸಂತೋಷ್ ಕುಮಾರ್ ಬಿ. ಎಸ್. ಪ್ರಥಮ ಸ್ಥಾನ, ವಾಲ್ಮೀಕರ್ ಪ್ರವೀಣ್ ದ್ವಿತೀಯ ಸ್ಥಾನ, ಶ್ರೀಪಾದ ಗಣಪತಿ ಹೆಗಡೆ ತೃತೀಯ ಸ್ಥಾನ ಪಡೆದರು. ಇವರಿಗೆ ನಗದು ಹಾಗೂ ವಿಶೇಷ ಟ್ರೋಫಿಯನ್ನು ಪಡೆದರು. ನಾಲ್ಕನೇ ಸ್ಥಾನದಿಂದ 10ನೇ ಸ್ಥಾನ ಪಡೆದ ಹಿರಿಯ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು.
7 ವರ್ಷದೊಳಗಿನ ವಿಭಾಗದಲ್ಲಿ ಆಂಧ್ರದ ವೆದುಗಲ ರತನ್ ತೇಜ್ ಪ್ರಥಮ ಸ್ಥಾನ, ಸಮರ್ಥ್ ಎಸ್ ಪೂಜಾರ್ ದ್ವಿತೀಯ ಸ್ಥಾನ, ಚಿರಂತೇಶ್ ಗೌಡ 3 ನೇ ಸ್ಥಾನ ನಗದು ಹಾಗೂ ವಿಶೇಷ ಟ್ರೋಫಿ ನಂತರ ನಾಲ್ಕರಿಂದ ಹತ್ತನೇ ಸ್ಥಾನದವರೆಗೆ ವಿಶೇಷ ಟ್ರೋಫಿಗಳನ್ನು ನಗರದ ಕಾಂಗ್ರೆಸ್ ಮುಖಂಡ ಅಜ್ಜಂಪುರ ಬಕ್ಕೇಶ್ ವಿತರಿಸಿದರು.
9 ವರ್ಷದೊಳಗಿನ ವಿಭಾಗದಲ್ಲಿ ಆಂಧ್ರದ ಎಸ್ ಕೆ ವಿಜ್ಞೇಶ್ ರೆಡ್ಡಿ ಪ್ರಥಮ ಸ್ಥಾನ, ಶಿವಮೊಗ್ಗದ ಆಯುಷ್ ಭಟ್ ದ್ವಿತೀಯ ಸ್ಥಾನ, ಗೋವಾದ ಅಮೀರ ಬ್ರೋಕರ್ ತೃತಿಯ ಸ್ಥಾನ ನಗದು ಹಾಗೂ ವಿಶೇಷ ಟ್ರೋಫಿ ಮತ್ತು ನಾಲ್ಕನೇ ರಿಂದ ಹತ್ತನೇ ಸ್ಥಾನದವರೆಗೆ ಟ್ರೋಫಿಯನ್ನು ನಗರದ ಓಂ ಅಪ್ಪಿಯನ್ಸಸ್ ಎಪಿಎಸ್ ಡಿಸ್ಟ್ರಿಬ್ಯೂಟರ್ ಆದ ಶಿವಕುಮಾರ್ ಅವರು ವಿತರಿಸಿದರು.
11 ವರ್ಷದೊಳಗಿನ ವಿಭಾಗದಲ್ಲಿ ಅನಿರುದ್ ಭಾರ್ಗವ್ ಪ್ರಥಮ, ಶ್ರೇಷ್ಠ ಗುಣಶೇಖರ್ ದ್ವಿತೀಯ ಸ್ಥಾನ, ನಚಿಕೇತ್ ಗುರುಕರ್ ತೃತೀಯ ಸ್ಥಾನ, 13 ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ದಾವಣಗೆರೆಯ ಈಶಾನ್ ಬಂಗೇರಿ ಪ್ರಥಮ ಸ್ಥಾನ, ಗೋವಾದ ಅನ್ವೇ ಬ್ರೋಕರ್ ದ್ವಿತೀಯ ಸ್ಥಾನ, ದಾವಣಗೆರೆ ಅದ್ವೈತ್ ಎಂ. ಎಸ್. ತೃತೀಯ ಸ್ಥಾನ, 15 ವರ್ಷದೊಳಗಿನ ವಿಭಾಗದಲ್ಲಿ ಹಾವೇರಿಯ ಸಂಗಮೇಶ್ ವಿ. ಸುಗಂಧಿ ಪ್ರಥಮ ಸ್ಥಾನ, ಗುಹಾನ್ ನೀಲಮಂಗಲ ಹರ್ಷ ದ್ವಿತೀಯ ಸ್ಥಾನ, ತ್ರಿಶೂಲ ಎಚ್ ಎಂ ತೃತೀಯ ಸ್ಥಾನ, 17 ವರ್ಷದೊಳಗಿನ ವಿಭಾಗದಲ್ಲಿ ಶಿವಮೊಗ್ಗದ ಅನಗ ಪಾಟೀಲ್ ಪ್ರಥಮ ಸ್ಥಾನ, ಗೋವಾದ ಗುಣಶೇಖರ್, ಅರ್ಪಿತ ಮೂರನೇ ಸ್ಥಾನ, 19 ವರ್ಷದ ಒಳಗಿನ ವಿಭಾಗದಲ್ಲಿ ಸಚಿನ್ ಪೈ ಪ್ರಥಮ ಸ್ಥಾನ, ಅರ್ಫತ್ ಎ ದ್ವಿತೀಯ ಸ್ಥಾನ, ಶ್ರೇಯಸ್ ಎಮ್ ಶಿವಪ್ರಸಾದ್ ಮೂರನೇ ಸ್ಥಾನ ಪಡೆದರು. ಸ್ಪರ್ಧಾಳುಗಳಿಗೆ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ ಶೆಟ್ಟಿಯವರು ನಗದು ಹಾಗೂ ವಿಶೇಷ ಟ್ರೋಫಿಗಳನ್ನು ವಿತರಿಸಿದರು.
ಬಹುಮಾನ ವಿತರಿಸಿದ ಗಣ್ಯರಿಗೆ ದಾವಣಗೆರೆ ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ ಯುವರಾಜ್, ಮಂಜುಳಾ ಯುವರಾಜ್ ಅವರು ವಿಶೇಷ ಗೌರವ ಸಮರ್ಪಿಸಲಾಯಿತು.





Leave a comment