Site icon Kannada News-suddikshana

ದಾವಣಗೆರೆಯ ಅಶೋಕನಗರದ ಹೊರವಲಯದ ಮನೆಯಲ್ಲಿ ವೇಶ್ಯಾವಾಟಿಕೆ: ಆರೋಪಿ ಬಂಧನ!

ದಾವಣಗೆರೆ

SUDDIKSHANA KANNADA NEWS/ DAVANAGERE/ DATE-30-06-2025

ದಾವಣಗೆರೆ: ದಾವಣಗೆರೆಯ ಅಶೋಕ ನಗರದ ಹೊರವಲಯದಲ್ಲಿನ ಮೆನಯೊಂದರಲ್ಲಿ ಅಕ್ರಮವಾಗಿ ವೇಶ್ಯವಾಟಿಕೆ ನಡೆಸುತ್ತಿದ್ದದ್ದು ಬೆಳಕಿಗೆ ಬಂದಿದ್ದು, ಓರ್ವನನ್ನು ಬಂಧಿಸಲಾಗಿದೆ.

ಈ ಸುದ್ದಿಯನ್ನೂ ಓದಿ: ದಾವಣಗೆರೆ: ಮಹಿಳೆಯರಿಗೆ ಉಚಿತ ಫಾಸ್ಟ್ ಪುಡ್ ತಯಾರಿಕೆ ತರಬೇತಿ

ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶ್ ಅಲಿಯಾಸ್ ಜ್ಞಾನೇಶ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ.

ಅಶೋಕನಗರದ ಹೊರವಲಯದಲ್ಲಿನ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಕುರಿತಂತೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿದ ಸಿಇಎನ್ ಪೊಲೀಸ್ ಠಾಣೆಯ ಡಿವೈಎಸ್ಪಿ ಪದ್ಮಶ್ರೀ ಗುಂಜಿಕರ್ ಅವರ ನೇತೃತ್ವದಲ್ಲಿ ಮಹಿಳಾ ಠಾಣೆಯ ಪಿಐ ನೂರ್ ಅಹಮದ್ ಹಾಗೂ ಸಿಬ್ಬಂದಿಗಳಗಳನ್ನೊಳಗೊಂಡ ತಂಡವು ದಾಳಿ ನಡೆಸಿದೆ.

ಈ ಸುದ್ದಿಯನ್ನೂ ಓದಿತುಂಗಭದ್ರ ನದಿಗೆ ಹಾರಲು ಹೋಗಿದ್ದ ತಾಯಿ -ಮಗು ರಕ್ಷಿಸಿದ 112 ಹೊಯ್ಸಳ!

ಈ ವೇಳೆ ಗಣೇಶ ಅಲಿಯಾಸ್ ಜ್ಞಾನೇಶ ಎಂಬ ವ್ಯಕ್ತಿಯನ್ನು ಬಂಧಿಸಿ, ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

Exit mobile version