Site icon Kannada News-suddikshana

ಶ್ರೇಷ್ಠ ವಿಜ್ಞಾನಿಗಳ ಸಾಲಿನಲ್ಲಿ ದಾವಣಗೆರೆ ಯುಬಿಡಿಟಿ ಕಾಲೇಜಿನ ಪ್ರೊ.ಡಾ. ಎಸ್ ಬಸವರಾಜಪ್ಪಗೆ ಸ್ಥಾನ

ದಾವಣಗೆರೆ

ದಾವಣಗೆರೆ: ಅಮೆರಿಕಾದ ಪ್ರತಿಷ್ಟಿತ ಸ್ಟಾಯನ್ ಫೋರ್ಡ್ ವಿಶ್ವವಿದ್ಯಾನಿಲಯ ಮತ್ತು ಎಲ್ಸೆವಿಯರ್ ಸಂಸ್ಥೆ ಅಧ್ಯಯನ ಮಾಡಿ ತಯಾರಿಸಿದ ಜಗತ್ತಿನ ಶೇ.2ರಷ್ಟು ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ನಗರದ ಯುಬಿಡಿಟಿ ಕಾಲೇಜಿನ ಯಾಂತ್ರಿಕ ವಿಭಾಗದ ಮುಖ್ಯಸ್ಥರಾದ ಪ್ರೊ.ಡಾ. ಎಸ್ ಬಸವರಾಜಪ್ಪ ಮತ್ತೊಮ್ಮೆ ಸ್ಥಾನ ಪಡೆದಿದ್ದಾರೆ.

READ ALSO THIS STORY: ನಾನು ತಂಗಿ ಎಂದುಕೊಂಡು ಸಾರ್ಜಜನಿಕವಾಗಿ ಮುತ್ತಿಡುತ್ತೇನೆಯೇ: ರಾಹುಲ್ ಗಾಂಧಿ -ಪ್ರಿಯಾಂಕಾ ಬಗ್ಗೆ ಬಿಜೆಪಿ ಸಚಿವನ ಟೀಕೆಗೆ ಕೈ ಪಡೆ ನಿಗಿನಿಗಿ!

ಪ್ರೊ.ಡಾ. ಎಸ್ ಬಸವರಾಜಪ್ಪ ಅವರು ಸತತ ಐದನೇ ಬಾರಿಗೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, 2024ರ ಪ್ರಭಾವ ಪಟ್ಟಿ ಹಾಗೂ ಜೀವಮಾನದ ಸಾಧನೆ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದಾರೆ. ಈಚೆಗೆ ಬಿಡುಗಡೆಯಾದ ಪಟ್ಟಿಯಲ್ಲಿ ‘ಅಪ್ಡೇಟೆಡ್ ಸೈನ್ಸ್-ವೈಡ್ ಆಥೋರ್ ಡೆಟಾ ಬೇಸ್ ಆಫ್ ಸ್ಟಾನ್ರ‍್ಡೆಸ್ಡ್ ಸಿಟಾಷನ್ ಇಂಡಿಕೇರ‍್ಸ್’ ವಿಶ್ಲೇಷಣಿಯ ವಿಭಾಗ ಮತ್ತು ‘ಸ್ಕೋಪ’ ಡೇಟಾ ಬೇಸ್ ಆಧಾರದ ಮೇಲೆ ಸಿದ್ದವಾಗಿದೆ. ಸಂಶೋಧನಾ
ಲೇಖನಗಳ ಪ್ರಮಾಣ, ಉಲ್ಲೇಖಗಳ ಸಂಖ್ಯೆ, ಹೆಚ್-ಸೂಚ್ಯಾಂಕ, ಸಹ-ಲೇಖಕರ ಆಧಾರ-ಸೂಚ್ಯಾಂಕ ಮುಂತಾದ ಮಾನದಂಡಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗಿದೆ.

ಬಸವರಾಜಪ್ಪ ಅವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್, ಕುಲಸಚಿವ ಪ್ರೊ.ಬಿ. ಇ. ರಂಗಸ್ವಾಮಿ, ಕಾಲೇಜಿನ ಪ್ರಾಂಶುಪಾಲ ಡಾ. ಡಿ. ಪಿ. ನಾಗರಾಜಪ್ಪ, ಅಧ್ಯಾಪಕ ಹಾಗೂ ಅಧ್ಯಾಪಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

Exit mobile version