Site icon Kannada News-suddikshana

Priyank Kharge Tweet: ಬಿ. ಎಲ್. ಸಂತೋಷ್ ವಿರುದ್ಧ ವಾಗ್ಬಾಣ ಮುಂದುವರಿಸಿದ ಪ್ರಿಯಾಂಕ್ ಖರ್ಗೆ: ಟ್ವೀಟಾಸ್ತ್ರ ಹೇಗಿದೆ ಗೊತ್ತಾ…?

PRIYANAK KHARGE

PRIYANAK KHARGE

SUDDIKSHANA KANNADA NEWS/ KALBURGI/ DATE:03-09-2023

ಕಲಬುರಗಿ: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಾಗ್ದಾಳಿ ಮುಂದುವರಿಸಿದ್ದಾರೆ. ಮಾತ್ರವಲ್ಲ, 40ರಿಂದ 50 ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಹೇಳಿಕೆ ನೀಡಿದ್ದಕ್ಕೆ ಖಡಕ್ ಆಗಿಯೇ ಸಂತೋಷ್ ಗೆ ತಿರುಗೇಟು ಕೊಟ್ಟಿದ್ದಾರೆ.

ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ (Priyank Kharge) ಅವರು, ಹೇ, ಹತಾಶ @BJP4Karnataka ಎಂದು ಟೀಕಿಸಿದ್ದಾರೆ. ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ನೀವು ಘೋಷಿಸಿದ ಪ್ರತಿ ಆರು ಅಭ್ಯರ್ಥಿಗಳಲ್ಲಿ ಒಬ್ಬರು ಕುಟುಂಬ
ರಾಜಕಾರಣದ ಹಿನ್ನೆಲೆ ಉಳ್ಳವರು. ಒಂದೋ ನೀವು ಅದರ ಬಗ್ಗೆ ಚರ್ಚಿಸಲು ತುಂಬಾ ಹೆದರುತ್ತೀರಿ ಅಥವಾ ನಿಮ್ಮ ಅಭ್ಯರ್ಥಿಗಳು ತಮ್ಮ ವಂಶಾವಳಿಯ ಬಗ್ಗೆ ನಾಚಿಕೆಪಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

 

ಈ ಸುದ್ದಿಯನ್ನೂ ಓದಿ: 

Kalaburagi: ಮಾವ ಮಾವ ಅಂದ್ಕೊಳ್ಳಿ ಅಂತಾ ಮೈಕೈ ಮುಟ್ಟುತ್ತಿದ್ದ ಪ್ರಭಾರಿ ಮುಖ್ಯೋಪಾಧ್ಯಾಯನಿಗೆ ವಾಡಿ ಪೊಲೀಸರ ಡ್ರಿಲ್…!

 

ಸಾರ್ವಜನಿಕವಾಗಿ ಅದನ್ನು ಒಪ್ಪಿಕೊಳ್ಳಲು ತುಂಬಾ ಮುಜುಗರಪಡುತ್ತಾರೆ. ಇಂಥವರಿಂದ ನಾವಿನ್ನೇನೂ ನಿರೀಕ್ಷಿಸಲು ಸಾಧ್ಯ ಎಂದು ಪ್ರಿಯಾಂಕ್ ಖರ್ಗೆ (Priyank Kharge) ವಾಗ್ದಾಳಿ ನಡೆಸಿದ್ದಾರೆ.

ಬಿ. ಎಲ್. ಸಂತೋಷ್ ಸವಾಲು ಹಾಕಿರುವ ಅವರು, ಒಂದು ದಿನವಲ್ಲ, ಒಂದು ತಿಂಗಳು ಸಮಯ ನೀಡುತ್ತೇವೆ, ನಮ್ಮ ಸರ್ಕಾರವನ್ನು ಬೀಳಿಸುವುದಿರಲಿ, ಅಲ್ಲಾಡಿಸಲು ಸಾಧ್ಯವಾ ಎಂದು ತೋರಿಸಲಿ ಎಂದು ಹೇಳಿದ್ದಾರೆ.

ಇದೆಲ್ಲವಕ್ಕೂ ಮಿಗಿಲಾಗಿ ಮತ್ತೊಂದು ಸವಾಲು, ಒಂದು ವಾರದ ಸಮಯದಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನು ಹಾಗೂ ಮೇಲ್ಮನೆಯ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿ ತೋರಿಸಲಿ ಎಂದು ಸಂತೋಷ್ ಗೆ ಸವಾಲು ಹಾಕಿದ್ದಾರೆ.

 

Exit mobile version