Site icon Kannada News-suddikshana

ನಿಮ್ಮ ಮಕ್ಕಳಿಗೆ ಗಣವೇಷ, ತ್ರಿಶೂಲ ದೀಕ್ಷೆ ಯಾವಾಗ? ಯಾವಾಗ ಗೋಮೂತ್ರ ಸೇವಿಸುತ್ತಾರೆ?: ಬಿಜೆಪಿ ನಾಯಕರಿಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆಗಳ ಸುರಿಮಳೆ!

ಪ್ರಿಯಾಂಕ್ ಖರ್ಗೆ

SUDDIKSHANA KANNADA NEWS/DAVANAGERE/DATE:21_10_2025

ಬೆಂಗಳೂರು: ಆರ್‌ಎಸ್‌ಎಸ್‌ನ ಆಚರಣೆಗೆ ನಮ್ಮ ವಿರೋಧವಿಲ್ಲ. ಜನಪ್ರತಿನಿಧಿಗಳು ಸಂಸತ್ತು ಅಥವಾ ವಿಧಾನಸಭೆಗೆ ಗಣವೇಷ ಧರಿಸಿ ಬಂದರೆ ನನಗೆ ಆಕ್ಷೇಪಣೆಯಿಲ್ಲ. ಆದರೆ ಸರ್ಕಾರಿ ನೌಕರರು ಸಮವಸ್ತ್ರ ಧರಿಸಿದರೆ ಆಕ್ಷೇಪವಿದೆ. ನಿಮ್ಮ ಮನೆಗಳಲ್ಲಿ ಆಚರಣೆಗಳನ್ನು ಮಾಡಿಕೊಳ್ಳಿ, ಅದನ್ನು ಬೇರೆಯವರ ಮೇಲೆ ಏಕೆ ಹೇರುತ್ತಿದ್ದೀರಿ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

READ ALSO THIS STORY: 1800 ಕೋಟಿ ರೂ. ಕಪ್ಪ ಕೊಟ್ಟಿದ್ದ ಪೂಜ್ಯ ತಂದೆಯವರ ಮಾತು ಕಿವಿಗೊಟ್ಟು ಕೇಳಿ ಬಿ. ವೈ ರಾಘವೇಂದ್ರ ಮಾತನಾಡಲಿ: ಪ್ರಿಯಾಂಕ್ ಖರ್ಗೆ ಟಾಂಗ್!

ನಿಮ್ಮ ಮಕ್ಕಳಿಗೆ ಯಾವಾಗ ಗಣವೇಷ ಹಾಕಿಸುತ್ತೀರಿ? ಅವರಿಗೆ ತ್ರಿಶೂಲ ದೀಕ್ಷೆ ಯಾವಾಗ ಕೊಡಿಸುತ್ತೀರಿ? ಅವರು ಯಾವಾಗ ಗೋಮೂತ್ರ ಸೇವಿಸುತ್ತಾರೆ? ಅವರು ಯಾವಾಗ ಗೋರಕ್ಷಕರಾಗುತ್ತಾರೆ. ಧರ್ಮ ರಕ್ಷಣೆಗೆ ಇಳಿಯುತ್ತಾರೆ ಎಂದು ತಿಳಿಸಿ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ್ದಾರೆ.

ನಾನು ನನ್ನ ಮಕ್ಕಳಿಗೆ ಬಯಸುವುದನ್ನು ನಿಮ್ಮ ಮಕ್ಕಳಿಗೂ ಬಯಸುತ್ತೇನೆ. ಆದರೆ ಅವರು ಹಾಗಲ್ಲ, ತಮ್ಮ ಮಕ್ಕಳು ವಿದೇಶದಲ್ಲಿ ಓದಬೇಕು, ಉದ್ಯಮಿಗಳಾಗಬೇಕು. ಕಾರ್ಯಕರ್ತರಿಗೆ ಧರ್ಮರಕ್ಷಣೆಯ ಜವಾಬ್ದಾರಿ. ತ್ರಿಶೂಲ ದೀಕ್ಷೆ ಪಡೆದು, ಗೋರಕ್ಷಣೆಗೆ ಇಳಿಯಿರಿ ಎನ್ನುತ್ತಾರೆ. ಇದು ನಿಜವಾದ ಸಮಸ್ಯೆ ಎಂದು ಹೇಳಿದ್ದಾರೆ.

ಆರ್‌ಎಸ್‌ಎಸ್ ಕಾನೂನಿಗಿಂತ ದೊಡ್ಡವರಾಗಲು ಸಾಧ್ಯವಿಲ್ಲ. ಪ್ರತಿಯೊಂದು ಸಂಘಟನೆಯೂ, ಅದರ ಹೆಸರು ಅಥವಾ ಸಿದ್ಧಾಂತವನ್ನು ಲೆಕ್ಕಿಸದೆ, ಸಾರ್ವಜನಿಕ ಸ್ಥಳಗಳು, ಶಾಲೆಗಳು ಅಥವಾ ಸರ್ಕಾರಿ ಸಂಸ್ಥೆಗಳನ್ನು ತಮ್ಮ ಚಟುವಟಿಕೆಗಳಿಗೆ ಬಳಸುವ ಮೊದಲು ಅನುಮತಿ ಪಡೆಯಬೇಕು. ನಮ್ಮ ಸರ್ಕಾರದ ನಿಲುವು ಸ್ಪಷ್ಟವಾಗಿದೆ; ನೀವು ಸಂವಿಧಾನದ ಚೌಕಟ್ಟಿನೊಳಗೆ ಕೆಲಸ ಮಾಡಿದರೆ, ಯಾವುದೇ ಸಮಸ್ಯೆ ಇಲ್ಲ. ಆದರೆ ಯಾರೂ ಹೊಣೆಗಾರಿಕೆಯಿಂದ ವಿಶೇಷ ವಿನಾಯಿತಿ ಪಡೆಯಲು ಸಾಧ್ಯವಿಲ್ಲ. ನಾನು ಆರ್‌ಎಸ್‌ಎಸ್ ಅನ್ನು ದೇಶದ ಕಾನೂನನ್ನು ಅನುಸರಿಸುವಂತೆ ಕೇಳಿಕೊಳ್ಳುತ್ತಿದ್ದೇನೆ ಫ್ರಂಟ್‌ಲೈನ್ ನಿಯತಕಾಲಿಕೆಯೊಂದಿಗಿನ ನನ್ನ ವಿವರವಾದ ಮಾತುಕತೆಯಲ್ಲಿ ನಾನು ಈ ಸಂಗತಿಗಳು ಮತ್ತು ಇನ್ನೂ ಅನೇಕ ವಿಚಾರಗಳನ್ನು ಚರ್ಚಿಸಿದ್ದೇನೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Exit mobile version