Home ಕ್ರೈಂ ನ್ಯೂಸ್ ಪ್ರಿಯಾಂಕ್ ಖರ್ಗೆ vs ಛಲವಾದಿ ನಾರಾಯಣಸ್ವಾಮಿ: ಕೈ-ಕಮಲ ನಾಯಕರ ನಡುವೆ ಸೈದ್ಧಾಂತಿಕ ಸಮರ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಪ್ರಿಯಾಂಕ್ ಖರ್ಗೆ vs ಛಲವಾದಿ ನಾರಾಯಣಸ್ವಾಮಿ: ಕೈ-ಕಮಲ ನಾಯಕರ ನಡುವೆ ಸೈದ್ಧಾಂತಿಕ ಸಮರ!

Share
ಪ್ರಿಯಾಂಕ್ ಖರ್ಗೆ
Share

ಬೆಂಗಳೂರು: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ನನ್ನನ್ನು ಟೀಕಿಸದ ದಿನವೇ ರಾಜಕೀಯದ ಕೊನೆಯ ದಿನ ಎಂದು ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.

ರಾಜಕೀಯ ಅಸ್ತಿತ್ವದ ಪ್ರಶ್ನೆ

ಛಲವಾದಿ ನಾರಾಯಣಸ್ವಾಮಿಯವರು ನನ್ನ ಬಗ್ಗೆ ಬಗೆಬಗೆಯ ಮಾತುಗಳನ್ನಾಡಿದ್ದಾರೆ. ಬಹುಶಃ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ನನ್ನ ಬಗ್ಗೆ ಮಾತನಾಡುವುದು ಅವರಿಗೆ ಅನಿವಾರ್ಯ. ನನ್ನ ಕುರಿತು ಮಾತನಾಡುವುದನ್ನು ನಿಲ್ಲಿಸಿದ ದಿನವೇ ಅವರ ರಾಜಕೀಯದ ಕೊನೆಯ ದಿನವಾಗುತ್ತದೆ! ಎಂದು ಭವಿಷ್ಯ ನುಡಿದಿದ್ದಾರೆ.

ವಂಶಪಾರಂಪರ್ಯ ರಾಜಕಾರಣ:

RSS ನವರ ಚಡ್ಡಿಗಳನ್ನು ತಲೆ ಮೇಲೆ ಹೊತ್ತು ರಾಜಕೀಯ ಅಸ್ತಿತ್ವ ಕಂಡುಕೊಳ್ಳುವ ಬದಲು, ನನ್ನ ತಂದೆಯವರ ಸೈದ್ಧಾಂತಿಕ ನೆರಳಿನಲ್ಲಿ ಮುಂದುವರೆಯುವುದು ಅತ್ಯಂತ ಗೌರವಯುತ ರಾಜಕಾರಣ ಎಂದು ಭಾವಿಸಿದ್ದೇನೆ ಎಂದು ತಿಳಿಸಿದ್ದಾರೆ.

ಸಿದ್ಧಾಂತ ಮತ್ತು ದಲಿತತ್ವ:

ವಂಶಪರಂಪರೆಯ ರಾಜಕಾರಣದ ಬಗ್ಗೆ ಮಾತನಾಡಲೇಬೇಕು ಎಂದಿದ್ದರೆ, ತಮ್ಮದೇ ಪಕ್ಷದ ಅಧ್ಯಕ್ಷರಾದ ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ಉಪನಾಯಕರಾದ ಅರವಿಂದ್ ಬೆಲ್ಲದ್ ಅವರಿಂದ ಮಾತನಾಡಲು ಶುರು ಮಾಡಲಿ., ಆ ಧೈರ್ಯ ನಾರಾಯಣಸ್ವಾಮಿಯವರಿಗಿದೆಯೇ? ಎಂದು ಪ್ರಶ್ನಿಸಿದ್ದಾರೆ.

ತಂದೆಯ ನೆರಳು:

ಸಂವಿಧಾನ ವಿರೋಧಿಸಿ ಕರಡು ಪ್ರತಿಯನ್ನು ಸುಟ್ಟಿದ್ದ ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ, ದಲಿತತ್ವ ಎಂದರೆ ಸ್ವಾಭಿಮಾನ, ದಲಿತತ್ವ ಎಂದರೆ ಅನ್ಯಾಯಕ್ಕೆ ಪ್ರತಿರೋಧ, ದಲಿತತ್ವ ಎಂದರೆ ಆತ್ಮಬಲ. ದಲಿತತ್ವದ ಸ್ವಾಭಿಮಾನವನ್ನು ಆರ್‌ಎಸ್‌ಎಸ್‌ನವರ ಚಡ್ಡಿಗಳಿಗೆ ಅಡ ಇಟ್ಟವರು, ದಲಿತತ್ವದ ಪಾಠ ಹೇಳುವುದು ಕುಚೋದ್ಯವಲ್ಲದೆ ಇನ್ನೇನು! ಎಂದು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *