Site icon Kannada News-suddikshana

ಹಾಸನ: ಪ್ರಜ್ವಲ್ ರೇವಣ್ಣ ನಿವಾಸಕ್ಕೆ ಎಫ್‌ಎಎಲ್ ತಂಡ ದಿಢೀರ್ ಭೇಟಿ

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಹಾಸನದಲ್ಲಿರುವ ಸಂಸದರ ನಿವಾಸಕ್ಕೆ ಎಫ್‌ಎಎಲ್ ತಂಡ ಭೇಟಿ ನೀಡಿದೆ. ಜೊತೆಗೆ ಪ್ರಕರಣ ಸಂಬಂಧ ತಂಡವು ಸಾಕ್ಷ್ಯ ಸಂಗ್ರಹ ಮಾಡುತ್ತಿದೆ.

ಪ್ರಜ್ವಲ್ ರೇವಣ್ಣ ಅವರ ನಿವಾಸಕ್ಕೆ ಹಾಕಿದ್ದ ಬೀಗವನ್ನು ಸ್ಥಳೀಯ ಪೊಲೀಸರ ಸಮ್ಮುಖದಲ್ಲಿ ಎಫ್‌ಎಎಲ್ ತಂಡ ತೆರೆದಿದೆ. ಬಳಿಕ ಒಳಪ್ರವೇಶಿಸಿದ ತಂಡ ಸಾಕ್ಷ್ಯಕ್ಕಾಗಿ ಹುಡುಕಾಟ ನಡೆಸುತ್ತಿದೆ.

ಪ್ರಜ್ವಲ್ ರೇವಣ್ಣರ ನಿವಾಸದ ಎದುರು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಈಗಾಗಲೇ ಎಸ್‌ಐಟಿ ತಂಡವು ಸಂತ್ರಸ್ತೆಯ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಿತ್ತು.

Exit mobile version