Home ಉದ್ಯೋಗ ವಾರ್ತೆ ತಿಂಗಳಿಗೆ 21,000 ರೂ. ವೇತನ: ಹಿರಿಯ ಕ್ಷಯರೋಗ ಪ್ರಯೋಗ ಶಾಲಾ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

ತಿಂಗಳಿಗೆ 21,000 ರೂ. ವೇತನ: ಹಿರಿಯ ಕ್ಷಯರೋಗ ಪ್ರಯೋಗ ಶಾಲಾ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ

Share
Share

ಶಿವಮೊಗ್ಗ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಕ್ಷಯ ರೋಗ ವಿಭಾಗವು ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಶಿವಮೊಗ್ಗ ಮತ್ತು ಹೊಸನಗರ ತಾಲೂಕುಗಳಲ್ಲಿ ಒಳಗುತ್ತಿಗೆ ಆಧಾರದಲ್ಲಿ ಒಂದು ವರ್ಷ ಅವಧಿಗೆ ಹಿರಿಯ ಕ್ಷಯರೋಗ ಪ್ರಯೋಗ ಶಾಲಾ ಮೇಲ್ವಿಚಾರಕರ ಕಾರ್ಯ ನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಪದವಿ ಅಥವಾ ಮೆಡಿಕಲ್ ಲ್ಯಾಬರೋಟರಿ ಟೆಕ್ನಾಲಜಿಯಲ್ಲಿ ಡಿಪ್ಲಮೊ ಹೊಂದಿರುವ, ಕಂಪ್ಯೂಟರ್ ಬೆಸಿಕ್ ಜ್ಞಾನ ಹಾಗೂ ಪ್ರಮಾಣ ಪತ್ರ ಹೊಂದಿರುವ, ದ್ವಿಚಕ್ರ ವಾಹನ ಚಾಲನೆ ಬರುವ, ಕನಿಷ್ಠ ಒಂದು ವರ್ಷ ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಕೆಲಸ ಮಾಡಿದ ಅನುಭವವಿರುವವರಿಗೆ ಹಾಗೂ ಸ್ಥಳೀಯ ಅಬ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಮಾಸಿಕ ವೇತನ ರೂ. 21 ಸಾವಿರಗಳನ್ನು ನೀಡಲಾಗುವುದು.

ನಿಗದಿತ ನಮೂನ ಅರ್ಜಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಜಿಲ್ಲಾ ಕ್ಷಯರೋಗ ವಿಭಾಗ, ಮೆಗ್ಗಾನ್ ಆಸ್ಪತ್ರೆ ಆವರಣ, ಶಿವಮೊಗ್ಗ ಇಲ್ಲಿ ಡಿ.30 ರೊಳಗೆ ಪಡೆದು, ಭರ್ತಿಮಾಡಿದ ಅರ್ಜಿಯೊಂದಿಗೆ ಪೂರಕ ದಾಖಲೆಗಳನ್ನು ಲಗತ್ತಿಸಿ ದಿ:02/01/2026 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಚೇರಿ, ಮುಕುಂದ ಎಸ್.ಎನ್. ದೂ.ಸಂ.: 9448320005 ಇವರನ್ನು ಸಂಪರ್ಕಿಸುವುದು.

Share

Leave a comment

Leave a Reply

Your email address will not be published. Required fields are marked *