Site icon Kannada News-suddikshana

ರಕ್ಷಕನೇ ಭಕ್ಷಕ: ಅಪ್ರಾಪ್ತೆ ಜೊತೆ “ಓಯೋ ಲಾಡ್ಜ್ ನಲ್ಲಿ ಪೋಲಿ ಆಟ” ಆಡಿದ್ದ ಕಾನ್ ಸ್ಟೇಬಲ್ ಅರೆಸ್ಟ್!

SUDDIKSHANA KANNADA NEWS/ DAVANAGERE/ DATE:24-02-2025

ಬೆಂಗಳೂರು: ಸಹಾಯ ಮಾಡುವುದಾಗಿ ಅಪ್ರಾಪ್ತೆ ನಂಬಿಸಿ ಓಯೋ ಲಾಡ್ಜ್ ನಲ್ಲಿ ಪೋಲಿ ಆಟ ಆಡಿದ್ದ ಪೊಲೀಸ್ ಕಾನ್ ಸ್ಟೇಬಲ್ ಬಂಧನಕ್ಕೊಳಗಾಗಿರುವ ಘಟನೆ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೊಮ್ಮನಹಳ್ಳಿ ಪೊಲೀಸ್ ಠಾಣೆ ಕಾನ್ ಸ್ಟೇಬಲ್ ಅರುಣ್ ಎಂಬಾತನೇ ಬಂಧಿತ ಆರೋಪಿ. ಕಳೆದ ಡಿಸೆಂಬರ್ 30ರಂದು ಬಿಟಿಎಂ ಲೇ ಔಟ್ ನ ಓಯೋ ಲಾಡ್ಜ್ ಗೆ ಅಪ್ರಾಪ್ತೆಯನ್ನು ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಅತ್ಯಾಚಾರ ಎಸಗಿದ್ದೂ ಅಲ್ಲದೇ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ. ಈ ವಿಚಾರ ಎಲ್ಲಿಯಾದರೂ ಬಾಯಿ ಬಿಟ್ಟರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾನೆ. ಜೀವ ಬೆದರಿಕೆಯೂ ಹಾಕಿದ್ದು, ಇದರಿಂದ ಅಪ್ರಾಪ್ತೆ ಯಾರಿಗೂ ಹೇಳದೇ ಸುಮ್ಮನಿದ್ದಳು.

ಅಪ್ರಾಪ್ತ ಬಾಲಕಿಯನ್ನು ನಂಬಿಸಿ ಅತ್ಯಾಚಾರ ಎಸಗಿ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಪದೇ ಪದೇ ಕಿರುಕುಳ ನೀಡುತ್ತಿದ್ದರಿಂದ ನೊಂದಿದ್ದ ಅಪ್ರಾಪ್ತೆ ಬೊಮ್ಮನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಕಾನ್ ಸ್ಟೇಬಲ್ ಅರುಣ್ ನನ್ನು ಬಂಧಿಸಿದ್ದಾರೆ.

ವಿಕ್ಕಿ ಎಂಬಾತನು ಅಪ್ರಾಪ್ತೆ ಪ್ರೀತಿಸುತ್ತಿದ್ದ. ಈಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ. ಆತನ ವಿರುದ್ಧ ದೂರು ನೀಡಲು ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ಹೋಗಿದ್ದಾಗ ಆಪ್ರಾಪ್ತೆಯನ್ನು ಕಾನ್ಸ್‌ಟೆೇಬಲ್ ಅರುಣ್ ಪರಿಚಯ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಈ ಕೇಸ್ ವಿಚಾರದಲ್ಲಿ ಸಹಾಯ ಮಾಡುವುದಾಗಿ ನಂಬಿಸಿ ರೇಪ್ ಮಾಡಿದ್ದಾನೆ ಎಂದು ಅಪ್ರಾಪ್ತೆ ದೂರಿನಲ್ಲಿ ತಿಳಿಸಿದ್ದಾರೆ.

ವಿಕ್ಕಿ ಮತ್ತು ಅರುಣ್ ಇಬ್ಬರನ್ನು ಬಂಧಿಸಲಾಗಿದ್ದು, ಮೈಕೋ ಲೇಔಟ್ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಲಾಗಿದೆ. ತನಿಖೆ ಮುಂದುವರಿದಿದೆ.

Exit mobile version