Site icon Kannada News-suddikshana

“ದೇಶದ ಕೋಟ್ಯಂತರ ರೈತರಿಗೆ ಪ್ರಧಾನಿ ನರೇಂದ್ರ ಮೋದಿ ದಸರಾ ಉಡುಗೊರೆ”: 20 ಸಾವಿರ ಕೋಟಿ ರೂ. ರಿಲೀಸ್

SUDDIKSHANA KANNADA NEWS/ DAVANAGERE/ DATE:05-10-2024

ಬೆಂಗಳೂರು: ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿಯ 18ನೇ ಕಂತಿನ ಹಣವನ್ನು ನೇರ ಡಿಬಿಟಿ ಮೂಲಕ ರೈತರ ಖಾತೆಗಳಿಗೆ ಬಿಡುಗಡೆ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ರೈತರು ಧನ್ಯವಾದಗಳನ್ನು ಅರ್ಪಿಸಿದ್ದಾರೆ. ದೇಶದ 9.5 ಕೋಟಿ ಫಲಾನುಭವಿ ರೈತರ ಖಾತೆಗಳಿಗೆ ಒಟ್ಟಾರೆಯಾಗಿ 20 ಸಾವಿರ ಕೋಟಿ ರೂ. ಹಣ ವರ್ಗಾವಣೆ ಮಾಡಲಾಗಿದೆ.

ಈ ಮಹತ್ವದ ಯೋಜನೆ ಆರಂಭವಾದಾಗಿನಿಂದ ಇಲ್ಲಿಯವರೆಗೂ ಒಟ್ಟು ₹74, 492.71 ಕೋಟಿ ರೂಗಳು ರೈತರ ಖಾತೆಗಳಿಗೆ ತಲುಪಿದೆ. ವಿಕಸಿತ ಭಾರತ ನಿರ್ಮಾಣದ ಸಂಕಲ್ಪದ ಗುರಿ ಸಾಧಿಸಿ ಅನ್ನದಾತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಮೋದಿ ಜೀ ಅವರ ಸರ್ಕಾರ ದೇಶದ ರೈತ ಸಮುದಾಯಕ್ಕೆ ಭರವಸೆಯ ಬೆಳಕಾಗಿದೆ ಎಂದು ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ತಿಳಿಸಿದ್ದಾರೆ.

 

Exit mobile version