ನವದೆಹಲಿ: ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಕಥೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಇನ್ ಇಂಡಿಯಾ’ (Belonging: A Journey of Love in India) ಪುಸ್ತಕದ ಪ್ರಕಟಣೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಬಂದಿರುವ ವರದಿಗಳನ್ನು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ (PRHI) ಸ್ಪಷ್ಟಪಡಿಸಿದೆ.
ಸೋನಿಯಾ ಗಾಂಧಿ ಅವರು ಸಂಪಾದಕೀಯ ಬದಲಾವಣೆಗಳಿಗೆ ಒಪ್ಪದ ಕಾರಣ ಪ್ರಕಾಶನ ಸಂಸ್ಥೆಯು ಪುಸ್ತಕ ಪ್ರಕಟಿಸುವುದನ್ನು ಕೈಬಿಟ್ಟಿದೆ ಎಂಬ ವರದಿಗಳು ತಪ್ಪು ಎಂದು ಪೆಂಗ್ವಿನ್ ಇಂಡಿಯಾ ತಿಳಿಸಿದೆ.
ಭಾರತದಲ್ಲಿ ಈ ಪುಸ್ತಕದ ಪ್ರಕಾಶಕರು ತಾವಲ್ಲ ಎಂದಿರುವ ಸಂಸ್ಥೆ, ಹಸ್ತಪ್ರತಿಗಳನ್ನು ಪರಿಶೀಲಿಸುವುದು ಮತ್ತು ಸಲಹೆಗಳನ್ನು ನೀಡುವುದು ಸಾಮಾನ್ಯ ಪ್ರಕ್ರಿಯೆಯಾಗಿದ್ದು, ತಾವು ಪುಸ್ತಕವನ್ನು ಪ್ರಕಟಿಸಲು ಉತ್ಸುಕರಾಗಿದ್ದೆವು ಎಂದು ಸ್ಪಷ್ಟಪಡಿಸಿದೆ.
ಈ ಆತ್ಮಕಥೆಯು ನವೆಂಬರ್ 10, 2026ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ.





Leave a comment