SUDDIKSHANA KANNADA NEWS/DAVANAGERE/DATE:29_09_2025
ದಾವಣಗೆರೆ: ಅನಧಿಕೃತ ಚರ್ಮರೋಗ ಚಿಕಿತ್ಸಾ ಕೇಂದ್ರಗಳನ್ನು ತೆರೆದರೆ ಅಂತಹ ಕ್ಲಿನಿಕ್ ಗಳ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗುವುದು ಮತ್ತು ನಗರದಲ್ಲಿ ಅನಧಿಕೃತವಾಗಿ ಚರ್ಮರೋಗ ಚಿಕಿತ್ಸಾ ಕೇಂದ್ರಗಳನ್ನು ಅನುಮತಿ ಪಡೆಯದೆ ಕಾನೂನು ಬಾಹಿರವಾಗಿ ತೆರೆದು ಜನರಿಗೆ ಚಿಕಿತ್ಸೆ ನೀಡುತ್ತಿರುವ ಕೇಂದ್ರಗಳನ್ನು ಮುಚ್ಚಿಸಿ, ಒಂದು ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು.
READ ALSO THIS STORY: ದಾವಣಗೆರೆಯಲ್ಲಿ ವಿಜಯದಶಮಿ ಆಚರಣೆಯ ಮೆರವಣಿಗೆ: ತಾತ್ಕಾಲಿಕ ವಾಹನ ಮಾರ್ಗ ಬದಲಾವಣೆ
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕೆ.ಪಿ.ಎಂ.ಇ ನೊಂದಣಿ ಮತ್ತು ಕುಂದುಕೊರತೆ ನಿವಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಗರದಲ್ಲಿ ಒಟ್ಟು 15 ಚರ್ಮರೋಗ ಚಿಕಿತ್ಸಾ ಕೇಂದ್ರಗಳೆಂದು ಚರ್ಮ ಚಿಕಿತ್ಸೆ ನೀಡುತ್ತಿದ್ದ ಚಿಕಿತ್ಸಾ ಕೇಂದ್ರಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ 15 ತಂಡಗಳು ಏಕಕಾಲಕ್ಕೆ ಎಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಿದ್ದು ಸದರಿ ವರದಿಯನ್ವಯ ದಾವಣಗೆರೆಯ ರಾಮ್ ಅಂಡ್ ಕೋ ಸರ್ಕಲ್ ಬಳಿ ಇರುವ ವಿ-ಕೇರ್ ಹೇರ್ ಅಂಡ್ ಸ್ಕಿನ್ ಕ್ಲಿನಿಕ್ , ಶಾಮನೂರು ರಸ್ತೆ ಯಲ್ಲಿರುವ ಹೇರ್ ಓ ಕ್ರಾಪ್ಟ್ , ಯಲ್ಲಮ್ಮ ನಗರ ದಲ್ಲಿರುವ ಕಾಸ್ಮೋ ಅಸ್ತೇಟಿಕ್ ಅಂಡ್ ಸ್ಕಿನ್ ಕೇರ್ ಕ್ಲಿನಿಕ್‍ಗಳು ಕೆ.ಪಿ.ಎಂ.ಇ ಅಡಿಯಲ್ಲಿ ಅನುಮತಿ ಪಡೆಯದೆ ಚಿಕಿತ್ಸೆ ನೀಡುತ್ತಿದ್ದು ತಕ್ಷಣದಿಂದ ಜಾರಿಗೆ ಬರುವಂತೆ ಮುಚ್ಚಿಸಲಾಗಿರುತ್ತದೆ ಮತ್ತು ಎಫ್ .ಐ.ಆರ್ ದಾಖಲಿಸಿ ಕೆ.ಪಿ.ಎಂ.ಇ ರಿಡ್ರಸೇಲ್ ಕಮಿಟಿಗೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಕೆ.ಪಿ.ಎಂ ಇ ಕಾಯ್ದೆಯಡಿ ದಂಡ ವಿಧಿಸಲು ಅರ್ಹವಾಗಿರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದರು ಅನುಮತಿ ಪಡೆಯದೆ ಚಿಕಿತ್ಸಾ ಕೇಂದ್ರಗಳನ್ನು ನಡೆಸುತ್ತಿರುವುದು ಕಾನೂನು ಬಾಹಿರ ಆದುದರಿಂದ ಸದರಿ ಚಿಕಿತ್ಸಾ ಕೇಂದ್ರಗಳನ್ನು ಮುಚ್ಚಿಸಿ ತಲಾ ಒಂದು ಲಕ್ಷ ರೂ.ಗಳ ದಂಡ ವಿಧಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ರಾಂ ಮತ್ತು ಕೋ ಸರ್ಕಲ್ ಬಳಿ ಇರುವ ಕಾಸ್ಮೋ ಡರ್ಮ್ ಹೇರ್ ಅಂಡ್ ಸ್ಕಿನ್ ವೇಲ್ನೇಸ್ ಸೆಂಟರ್ ಬ್ಯೂಟಿ ಪಾರ್ಲರ್ ಆಗಿ ಕಾರ್ಯ ನಿರ್ವಹಿಸುತ್ತಿರುತ್ತದೆ ಕೂದಲು ಕಸಿ ಚಿಕಿತ್ಸೆಗೆ ಸಂಬಂಧಿಸಿದಂತೆ ಚಿಕಿತ್ಸೆ ನೀಡುವುದಾಗಿ ನಾಮಫಲಕವನ್ನು ಹಾಕಿದ್ದು ಕೂದಲು ಚಿಕಿತ್ಸೆ ನೀಡುತ್ತಿರುವುದು ಕಂಡು ಬಂದಿರುವುದಿಲ್ಲ ಆದುದರಿಂದ ನಾಮಫಲಕವನ್ನು ತೆರವುಗೊಳಿಸಿ ಚರ್ಮ ಚಿಕಿತ್ಸೆಯ ಉಪಕರಣವನ್ನು ಡಿ ಕಮಿಷನ್ ಮಾಡಿ ಇಡಿಸಲಾಯಿತು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದರು ನಾಮಫಲಕವನ್ನು ತೆರವುಗೊಳಿಸಿ ಒಂದು ಲಕ್ಷ ರೂ.ಗಳ ದಂಡ ವಿಧಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಎಂ.ಸಿ.ಸಿ ಎ ಬ್ಲಾಕ್ ನಲ್ಲಿರುವ ಇಶಾ ಹೇರ್ ಅಂಡ್ ಸ್ಕಿನ್ ಕ್ಲಿನಿಕ್ , ರಾಂ ಅಂಡ್ ಕೋ ಸರ್ಕಲ್ ನಲ್ಲಿರುವ ಓಂ ಡೆಂಟಲ್ ಕೇರ್ , ಎಂ.ಸಿ.ಸಿ ಬಿ ಬ್ಲಾಕ್ ನಲ್ಲಿರುವ ಲಾ ಪೇಟಲ್ಸ್ ಅಸ್ತೇಟಿಕ್ ಕ್ಲಿನಿಕ್ , ಶಿವಕುಮಾರ್ ಸ್ವಾಮಿ ಬಡಾವಣೆಯಲ್ಲಿರುವ ರಿಧಿ ದಂತ ಚಿಕಿತ್ಸಾಲಯ ಮತ್ತು ಮಾಮಾಸ್ ಜಾಯಿಂಟ್ ರಸ್ತೆ ಯಲ್ಲಿರುವ ಗ್ಲೋ ಡೆಂಟಲ್ ಅಂಡ್ ಫೇಶಿಯಲ್ ಅಸ್ಥೆಟಿಕ್ ಸೆಂಟರ್‍ಗಳು ದಂತ ಚಿಕಿತ್ಸೆಗಾಗಿ ಲೈಸನ್ಸ್ ಪಡೆದು ಚರ್ಮ ಚಿಕಿತ್ಸಾ ಕೇಂದ್ರಗಳಾಗಿ ಕಾರ್ಯ ನಿರ್ವಹಿಸುತ್ತಿರುತ್ತವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದರು.
ನಾಮಫಲಕವನ್ನು ತೆರವುಗೊಳಿಸಿ ಪುನರಾವರ್ತನೆಯಾಗದಂತೆ ಕ್ರಮವಹಿಸುವಂತೆ ತಿಳಿಸಿದರು.
ನಗರದ ವಿದ್ಯಾನಗರದಲ್ಲಿರುವ ಪ್ರೆಸ್ಟಿಜ್ ಹೇರ್ ಸಲ್ಯೂಷನ್ , ಹೌರ ಕಾಸ್ಮೆಟಿಕ್ ಕ್ಲಿನಿಕ್ , ದೇವರಾಜು ಅರಸು ಬಡಾವಣೆಯಲ್ಲಿರುವ ರೀಜಿವಾ ಹೇರ್/ಸ್ಕಿನ್/ಲೇಸರ್ ಕ್ಲಿನಿಕ್ ಅಂಡ್ ಆಯುರ್ವೇದ ವೆಲ್‍ನೆಸ್ ಸೆಂಟರ್ ಮತ್ತು ವಿದ್ಯಾರ್ಥಿ ಭವನದ ಬಳಿ ಇರುವ ವಿ ಸ್ಮಾರ್ಟ್ ಹೇರ್ ಟ್ರಾನ್ಸ್ ಪ್ಲಾಂಟ್ ಅಂಡ್ ಸ್ಕಿನ್ ಸಲ್ಯೂಷನ್ ಖಾಸಗಿ ಸಂಸ್ಥೆಗಳು ಮುಚ್ಚಿದ್ದು ಇವುಗಳು ಕಾರ್ಯ ನಿರ್ವಹಿಸುತ್ತಿಲ್ಲವೆಂದು ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಗೂ ಖಾಸಗಿ ಕ್ಲಿನಿಕ್ ಗಳ ಮುಖ್ಯಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.