Site icon Kannada News-suddikshana

ಪವಿತ್ರಾ ಗೌಡ ಬಂದ್ರೂ ಮಾತನಾಡಿಸದ “ಸುಬ್ಬ”..!

SUDDIKSHANA KANNADA NEWS/ DAVANAGERE/ DATE:25-02-2025

ನಟಿ ಪವಿತ್ರಾ ಗೌಡ ಹಿಂದೆ ಬಿದ್ದು ಜೈಲು ಸೇರಿದ್ದ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ತೂಗುದೀಪಗೆ ಬುದ್ಧಿ ಬಂದಂತೆ ಕಾಣುತ್ತಿದೆ. ಪವಿತ್ರಾ ಗೌಡರಿಗೆ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಜೈಲು ಪಾಲಾಗಿದ್ದ ದಾಸ ಬೆಂಗಳೂರಿನ ಕೋರ್ಟ್ ಗೆ ಬಂದಿದ್ದರು.

ದರ್ಶನ್ ಅವರನ್ನು ಪ್ರೀತಿಯಿಂದ ಸುಬ್ಬ ಎಂದು ಕರೆಯುತ್ತಿದ್ದ ಸುಬ್ಬಿ ಪವಿತ್ರಾ ಗೌಡಳನ್ನು ಮಾತನಾಡಿಸದೇ ಹೊರಟು ಹೋಗಿದ್ದಾರೆ. ಜೈಲುಪಾಲಾದ ಬಳಿಕ ದರ್ಶನ್ ಪತ್ನಿ ವಿಜಯಲಕ್ಷ್ಮೀ ಪತಿಗೆ ಜಾಮೀನು ಕೊಡಿಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆದ್ರೆ, ಪವಿತ್ರಾ ಗೌಡ ಮಾತ್ರ ದರ್ಶನ್ ನೆನಪಿನಿಂದ ದೂರ ಹೋಗಿಲ್ಲ. ವಿಚಾರಣೆಗೆ ಕೋರ್ಟ್ ಗೆ ಬಂದಿದ್ದ 15 ಆರೋಪಿಗಳ ಪೈಕಿ 14 ಆರೋಪಿಗಳನ್ನು ಮಾತನಾಡಿಸಿದ ದರ್ಶನ್ ಸುಬ್ಬಿ ಕಡೆ ತಿರುಗಿ ನೋಡಲೇ ಇಲ್ಲ.

ಸುಬ್ಬಿಯಿಂದ ಸುಬ್ಬ ಅಂತರ ಕಾಯ್ದುಕೊಂಡರಾ? ವಿಜಯಲಕ್ಷ್ಮಿ ಅವರು ಪವಿತ್ರಾ ಗೌಡ ಮಾತನಾಡಿಸಬಾರದೆಂದು ದರ್ಶನ್ ಗೆ ಎಚ್ಚರಿಕೆ ಕೊಟ್ಟಿದ್ದಾರಾ? ದರ್ಶನ್ ತೂಗುದೀಪ ಅವರೇ ಅಂತರಕಾಯ್ದುಕೊಳ್ಳಲು ನಿರ್ಧರಿಸಿದ್ದರಾ? ತಿಳಿದು ಬಂದಿಲ್ಲ. ಆದ್ರೆ, ದರ್ಶನ್ ತೂಗುದೀಪ ಮಾತನಾಡಿಸದೇ ಹೋಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪವಿತ್ರಾ ಗೌಡ ಜೊತೆ ಸ್ನೇಹ ಬೆಳೆಸಿ, ಪ್ರೇಮಕ್ಕೆ ತಿರುಗಿತ್ತು. ಅದಕ್ಕಿಂತಲೂ ಹೆಚ್ಚಿನ ಬಾಂಧವ್ಯ ದರ್ಶನ್ ಮತ್ತು ಪವಿತ್ರಾ ನಡುವೆ ಇದ್ದದ್ದು ಎಲ್ಲರಿಗೂ ಗೊತ್ತಾಗಿದೆ. ಇವರಿಬ್ಬರ ಅಂತರ ನೋಡಿ ಫ್ಯಾನ್ಸ್ ಖುಷಿಯಾಗಿದೆ. ತನ್ನ ನೆಚ್ಚಿನ ನಟ ಸಂಕಷ್ಟ ಅನುಭವಿಸಲು ಪವಿತ್ರಾ ಗೌಡಳೇ ಕಾರಣ. ಆಕೆ ಸಂಗ ತೊರೆದರೆ ಬಾಸ್ ಎಂದಿದ್ದರೂ ಬಾಸ್ ಎನ್ನುತ್ತಿದ್ದಾರೆ ಫ್ಯಾನ್ಸ್.

Exit mobile version