Home ದಾವಣಗೆರೆ ತಾಳಿದವನು ಬಾಳಿಯಾನು.. ತಾಳ್ಮೆ ಮಿತಿಮೀರಿದಾಗ ತಾಳ್ಮೆಯೂ ಕೆಡುತ್ತೆ: ಶಿವಗಂಗಾ ಬಸವರಾಜ್ ನಿಗೂಢ ಮಾತು!
ದಾವಣಗೆರೆನವದೆಹಲಿಬೆಂಗಳೂರು

ತಾಳಿದವನು ಬಾಳಿಯಾನು.. ತಾಳ್ಮೆ ಮಿತಿಮೀರಿದಾಗ ತಾಳ್ಮೆಯೂ ಕೆಡುತ್ತೆ: ಶಿವಗಂಗಾ ಬಸವರಾಜ್ ನಿಗೂಢ ಮಾತು!

Share
ಸಿದ್ದರಾಮಯ್ಯ
Share

ದಾವಣಗೆರೆ: ತಾಳಿದವನು ಬಾಳಿದವನು ಎಂಬ ಗಾದೆಯಂತೆ ಒಮ್ಮೆ ನಡೆದುಕೊಳ್ಳಬೇಕಾಗುತ್ತದೆ. ಇನ್ನು ತಾಳ್ಮೆಗೂ ಒಂದು ಮಿತಿ ಇದೆ. ತಾಳ್ಮೆ ಮಿತಿಮೀರಿದಾಗ ತಾಳ್ಮೆಯೂ ಕೆಡುತ್ತದೆ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ನಿಗೂಢ ಹೇಳಿಕೆ ನೀಡಿದ್ದಾರೆ.

READ ALSO THIS STORY: ಅನ್ನ ಭಾಗ್ಯ ಅಕ್ಕಿಗೆ ಕನ್ನ ಹಾಕಿ ಅಕ್ರಮ ಸಂಗ್ರಹ: ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಆಪ್ತ ಸೇರಿ ಇಬ್ಬರ ವಿರುದ್ಧ ಎಫ್ಐಆರ್!

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾಳ್ಮೆ ಎಲ್ಲಿಯವರೆಗೆ ನಿಯಂತ್ರಣ ಮಾಡಲು ಸಾಧ್ಯವೋ ಅಲ್ಲಿಯವರೆಗೆ ಮಾಡಬಹುದು. ಇದು ಕಟ್ಟೆಯೊಡೆದರೆ ಏನಾಗುತ್ತದೆ ಎಂದು ಹೇಳಲು ಆಗದು ಎಂದರು.

ಮಾಜಿ ಸಂಸದ ಡಿ. ಕೆ. ಸುರೇಶ್ ಅವರು ಹೇಳಿರುವುದು ಸರಿಯಾಗಿಯೇ ಇದೆ. ಮೊದಲಿನಿಂದಲೂ ತಾಳ್ಮೆಗೂ ಒಂದು ಮಿತಿ ಇರುತ್ತದೆ. ಎಲ್ಲರ ಸಹನೆ ಮೀರಿ ತಾಳ್ಮೆ ಕಟ್ಟೆಯೊಡೆಯುವ ಸಂದರ್ಭ ಬರುತ್ತದೆ ಎಂದಿದ್ದಾರೆ. ಇದು ಯಾವ ಅರ್ಥದಲ್ಲಿ ಹೇಳಿದ್ದಾರೋ ಏನೋ ಗೊತ್ತಿಲ್ಲ. ಕೆಲವೊಮ್ಮೆ ಏನೋ ಹೇಳಿದರೆ ಮತ್ತೇನ್ನಿನೋ ಕಲ್ಪನೆ ಮಾಡಿಕೊಳ್ಳಲಾಗುತ್ತದೆ. ಸಿಎಂ ಖುರ್ಚಿ ಆಧಾರವಿಟ್ಟುಕೊಂಡು ಈ ಮಾತು ಹೇಳಿಲ್ಲ. ಸಂದರ್ಭಕ್ಕೆ ತಕ್ಕಂತೆ
ಹೇಳಿರುತ್ತಾರೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಮನಸ್ಸು ಮಾಡುವುದಿಲ್ಲ. ಅಧ್ಯಕ್ಷರಾಗುವ ಮುನ್ನ ಹೇಳಿದ ಮಾತಿಗೂ ಅವಧಿ ಮುಗಿದ ಬಳಿಕ ಹೇಳುವ ಮಾತಿಗೂ ಅಜಗಜಾಂತರ ವ್ಯತ್ಯಾಸ ಇರುತ್ತದೆ. ಅಧಿಕಾರಕ್ಕೋಸ್ಕರ ಗ್ರಾಮ ಪಂಚಾಯಿತಿ ಅಧ್ಯಕ್ಷರೇ ಬಿಡುವುದಿಲ್ಲ ಎಂಬರ್ಥದಲ್ಲಿ ಡಿ. ಕೆ. ಸುರೇಶ್ ಅವರು ಹೇಳಿರುವುದು ಸರಿಯಾಗಿಯೇ ಇದೆ. ಅಧಿಕಾರ ಹಂಚಿಕೆ ಸಂಬಂಧ ಮಾತು ಕೊಟ್ಟಿದ್ದಾರೋ ಇಲ್ಲವೋ ಎಂಬುದು ನಮಗೆ ಗೊತ್ತಿಲ್ಲ. ಮಾಧ್ಯಮದವರಿಗೆ ಗೊತ್ತಿರಬೇಕು ಎಂದು ಹೇಳಿದರು.

ಇನ್ನು ಕಳೆದ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೂ ಮುನ್ನ ಕಾಂಗ್ರೆಸ್ ಪಕ್ಷವು 136 ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದೇ ಡಿ. ಕೆ. ಶಿವಕುಮಾರ್ ಅವರೊಬ್ಬರೇ. ಕೆಪಿಸಿಸಿ ಅಧ್ಯಕ್ಷರಾಗಿದ್ದವರು. ಯಾವ್ಯಾವ ಅಭ್ಯರ್ಥಿ, ಯಾವ್ಯಾವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಿದೆ, ಗೆಲ್ಲುತ್ತಾರೆ ಎಂಬ ಕುರಿತಂತೆ ನಿಖರವಾಗಿ ಹೇಳಿದ್ದವರು. ಅವರಲ್ಲಿ ಅಂಥ ಸಾಮರ್ಥ್ಯ ಇದೆ. ಪ್ರತಿಯೊಂದಕ್ಕೂ ಡಿಕೆಶಿ ಅವರೇ ಉತ್ತರ ನೀಡಿದ್ದಾರೆ. ಮುಖ್ಯಮಂತ್ರಿಯಾಗಲು ಅಸಮರ್ಥರಲ್ಲ. ಸಮರ್ಥರಿದ್ದಾರೆ. ಅವರು ಮುಖ್ಯಮಂತ್ರಿಯಾದರೆ ನಮಗೆ ಖುಷಿಯಾಗುತ್ತದೆ ಎಂದು ಶಿವಗಂಗಾ ಬಸವರಾಜ್ ಹೇಳಿದ್ದಾರೆ.

Share

Leave a comment

Leave a Reply

Your email address will not be published. Required fields are marked *