Site icon Kannada News-suddikshana

ನನ್ನ ಬ್ಯಾಗ್​ನಲ್ಲಿ ಬಾಂಬ್ ಇದೆ ಎಂದ ಏರ್ ಇಂಡಿಯಾ ವಿಮಾನದ ಪ್ರಯಾಣಿಕನ ಬಂಧನ..!

ಕೊಚ್ಚಿ: ‘ನನ್ನ ಬ್ಯಾಗ್​ನಲ್ಲಿ ಬಾಂಬ್ ಇದೆ’ ಎಂದು ಏರ್ ಇಂಡಿಯಾ ವಿಮಾನದ ಪ್ರಯಾಣಿಕನೋರ್ವ ಎಕ್ಸರೇ ಬ್ಯಾಗೇಜ್ ಇನ್‌ಸ್ಪೆಕ್ಷನ್ ಸಿಸ್ಟಮ್ ಚೆಕ್‌ಪಾಯಿಂಟ್‌ನಲ್ಲಿ ಸಿಐಎಸ್‌ಎಫ್ ಅಧಿಕಾರಿಗೆ ತಿಳಿಸಿದ್ದು, ಆತನನ್ನು ಬಂಧಿಸಿದ ಘಟನೆ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಬಂಧಿತ ವ್ಯಕ್ತಿ. ಮನೋಜ್ ಕುಮಾರ್ (42) ಎನ್ನಲಾಗಿದೆ. ಈ ವ್ಯಕ್ತಿ ಕೊಚ್ಚಿಯಿಂದ ಮುಂಬೈಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ. ಏರ್ ಇಂಡಿಯಾ ಪ್ರಯಾಣಿಕ ಮನೋಜ್ ಕುಮಾರ್ ಅವರನ್ನು ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯಲ್ಲಿ “ನನ್ನ ಬ್ಯಾಗ್‌ನಲ್ಲಿ ಬಾಂಬ್ ಇದೆ” ಎಂದು ಹೇಳಿಕೆ ನೀಡಿದ್ದಾನೆ. ಈತನ ಹೇಳಿಕೆಯಿಂದಾಗಿ ವಿಮಾನ ನಿಲ್ದಾಣದಲ್ಲಿ ಭದ್ರತಾ ಭಯ ಉಂಟಾಯಿತು. ಬಳಿಕ, ಏರ್ ಇಂಡಿಯಾ ವಿಮಾನವು ನಿಗದಿತ ಸಮಯಕ್ಕೆ ಹೊರಟಿತು. ಆತನ ಹೇಳಿಕೆ ಬಳಿಕ ವಿಮಾನ ನಿಲ್ದಾಣದ ಭದ್ರತಾ ತಂಡ ಕ್ರಮ ಕೈಗೊಂಡು ಪರಿಶೀಲನೆ ನಡೆಸಿದರು. ವಿಮಾನ ನಿಲ್ದಾಣದ ಅಧಿಕಾರಿಗಳು ಬಾಂಬ್ ಪತ್ತೆ ಮತ್ತು ವಿಲೇವಾರಿ ಸ್ಕ್ವಾಡ್ ಗೆ ಕರೆ ಮಾಡಿದರು. ಅವರು ಪ್ರಯಾಣಿಕರ ಕ್ಯಾಬಿನ್ ಅನ್ನು ಪರಿಶೀಲಿಸಿದರು ಮತ್ತು ಬ್ಯಾಗೇಜ್ ಅನ್ನು ಪರಿಶೀಲಿಸಿದರು. ಈ ಎಲ್ಲಾ ಪರಿಶೀಲನೆ ಬಳಿಕ ಹೆಚ್ಚಿನ ತನಿಖೆಗಾಗಿ ಮನೋಜ್ ಕುಮಾರ್‌ನನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಯಿತು ಎಂದು ತಿಳಿದುಬಂದಿದೆ.

Exit mobile version