Site icon Kannada News-suddikshana

Paralympics 2024: ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದ ಸುಮಿತ್ ಆಂಟಿಲ್

ಪ್ಯಾರಿಸ್: ಪ್ಯಾರಾಲಿಂಪಿಕ್ಸ್‌ನಲ್ಲಿ ಜಾವೆಲಿನ್ ಥ್ರೋ F64 ಫೈನಲ್ ಸ್ಪರ್ಧೆಯಲ್ಲಿ 70.59 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಭಾರತೀಯ ತಾರೆ ಸುಮಿತ್ ಆಂಟಿಲ್ ಅವರು ಚಿನ್ನದ ಪದಕ ಗಳಿಸಿದ್ದಾರೆ. 

ಶ್ರೀಲಂಕಾದ ದುಲಾನ್ ಅವರು 67.03 ಮೀಟರ್ ದೂರ ಜಾವೆಲಿನ್ ಎಸೆದು ಬೆಳ್ಳಿ ಪದಕ ಗೆದ್ದಿದ್ದಾರೆ. ಜೊತೆಗೆ ಆಸ್ಟ್ರೇಲಿಯಾದ ಬುರಿಯಾನ್ ಅವರು 64.89 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ.

ಸುಮಿತ್ ಆಂಟಿಲ್ ತನ್ನ ಮೊದಲ ಪ್ರಯತ್ನದಲ್ಲಿಯೇ ಪ್ಯಾರಾಲಿಂಪಿಕ್ಸ್ ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಮೊದಲ ಎಸೆತದಲ್ಲೇ 69.11 ಮೀಟರ್‌ ದೂರ ಜಾವೆಲಿನ್ ಎಸೆದಿದ್ದಾರೆ. ಎರಡನೇ ಪ್ರಯತ್ನದ ಮೂಲಕ 70.59 ಮೀಟರ್ ಎಸೆದು ಚಿನ್ನದ ಪದಕವನ್ನು ಖಚಿತಪಡಿಸಿಕೊಂಡರು. ಇನ್ನು ಮೂರನೇ ಪ್ರಯತ್ನದಲ್ಲಿ 66.66 ಮೀಟರ್ ದೂರ ಎಸೆದ ಅವರು, ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಫೌಲ್ ಥ್ರೋ ಮಾಡಿದರು. ಐದನೇ ಪ್ರಯತ್ನದಲ್ಲಿ 69.04 ಮೀಟರ್ ದೂರ ಎಸೆದರೆ, ಕೊನೆಯ ಪ್ರಯತ್ನದಲ್ಲಿ 66.57 ಮೀಟರ್‌ ದೂರ ಜಾವೆಲಿನ್ ಎಸೆದರು.

Exit mobile version