ದಾವಣಗೆರೆ: ಅಪ್ರಾಪ್ಕರಿಗೆ ಬೈಕ್ ಕೊಡ್ತೀರಾ. ಪೋಷಕರೇ ಹಾಗೂ ವಾಹನ ಕೊಡುವವರೇ ಎಚ್ಚರೇ. ಕೇವಲ ಎರಡು ದಿನಗಳಲ್ಲಿ ಬರೋಬ್ಬರಿ 60ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರ ನಿರ್ದೇಶನದಲ್ಲಿ ಹೆಚ್ಚವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ರವರು ಹಾಗೂ ನಗರ ಡಿವೈಎಸ್ಪಿ ಶರಣಬಸವೇಶ್ವರ ಬಿ. ಮಾರ್ಗದರ್ಶನದಲ್ಲಿ ನಗರ ಸಂಚಾರ ವೃತ್ತ ಸಿಪಿಐ ಮಂಜುನಾಥ ನೇತೃತ್ವದಲ್ಲಿ ದಕ್ಷಿಣ ಮತ್ತು ಉತ್ತರ ಸಂಚಾರ ಪೊಲೀಸ್ ಅಧೀಕಾರಿಗಳು ಹಾಗೂ ಸಿಬ್ಬಂದಿಗಳ ತಂಡಗಳು ಕಳೆದೆರೆಡು ದಿನಗಳಲ್ಲಿ ನಗರದಲ್ಲಿ ಕಾರ್ಯಾಚರಣೆ ನಡೆಸಿ ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವವರ ವಿರುದ್ಧ ಸಮರ ಸಾರಿದ್ದಾರೆ. 60 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಎಸ್ಪಿ ಉಮಾ ಪ್ರಶಾಂತ್ ಅವರ ಅಧ್ಯಕ್ಷತೆಯಲ್ಲಿ ಅರುಣ ವೃತ್ತದಲ್ಲಿರುವ ಸಂಚಾರಿ ಪೊಲೀಸ್ ವೃತ್ತ ಕಚೇರಿ ಮುಂಭಾಗ ಅಪ್ರಾಪ್ತ ವಯಸ್ಕರ ಪೋಷಕರುಗಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಟ್ರಾಫಿಕ್ ಕಮಾಂಡ್ ಸೆಂಟರ್ ಗೆ ಪೋಷಕರನ್ನು ಕರೆದೊಯ್ದು ದಾವಣಗೆರೆ ನಗರದಲ್ಲಿ ಹೇಗೆ ಸಿಸಿಟಿವಿ ಸರ್ವೈಲೈನ್ಸ್ ಕೆಲಸ ಮಾಡುತ್ತದೆ, ಸಂಚಾರ ನಿರ್ವಹಣೆ ಮೇಲೆ ಹೇಗೆ ನಿಗಾವಹಿಸಲಾಗಿರುತ್ತದೆ ಎಂದು ತಿಳಿಸಿಕೊಡಲಾಯಿತು.
ಈ ವೇಳೆ ಹೆಚ್ಚುವರಿ ಪೊಲೀಸ್ ಅಧೀಕ್ಷಕಪರಮೇಶ್ವರ ಹೆಗಡೆ, ಸಂಚಾರ ವೃತ್ತ ನಿರೀಕ್ಷಕ ಮಂಜುನಾಥ, ಪಿಎಸ್ಐ ಶೈಲಜಾ, ಜಯಶೀಲ, ಶಕುಂತಲಾ, ಮಹಾದೇವ ಬತ್ತಿ ಸೇರಿದಂತೆ ಸಂಚಾರ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.





Leave a comment