Site icon Kannada News-suddikshana

ಒಮ್ಮೆ ಮಾಡಿ ನೋಡಿ ಪಾಲಕ್ ಪನೀರ್ ಬಿರಿಯಾನಿ

ಬೇಕಾಗುವ ಪದಾರ್ಥಗಳು…

ಗೋಡಂಬಿ-ಸ್ವಲ್ಪ
ತುಪ್ಪ- 2 ಚಮಚ
ಚಕ್ಕೆ- 2-4
ಲವಂಗ-2
ಏಲಕ್ಕಿ-2
ಜೀರಿಗೆ-1 ಸ್ವಲ್ಪ
ಶುಂಠಿ ಬೆಳ್ಳುಳ್ಳಿ ಪೇಸ್ಟ್- ಸ್ವಲ್ಪ
ಈರುಳ್ಳಿ ಉದ್ದಕ್ಕೆ ಸೀಳಿಕೊಳ್ಳಿ- 1
ಪಾಲಾಕ್ ಸೊಪ್ಪು- 3 ಬಟ್ಟಲು (ತೊಳೆದು ಸಣ್ಣಗೆ ಹೆಚ್ಚಿಕೊಂಡಿದ್ದು)
ಖಾರದ ಪುಡಿ, ½ ಚಮಚ
ಅರಿಶಿನ ಪುಡಿ- ಸ್ವಲ್ಪ
ದನಿಯಾ ಪುಡಿ- 1 ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಪನ್ನೀರ್- (ಚಿಕ್ಕದ್ದಾಗಿ ಕತ್ತರಿಸಿಕೊಂಡಿದ್ದು)
ಮೊಸರು- 3 ಚಮಚ
ಬಾಸುಮತಿ ಅಕ್ಕಿ
ಮಾಡುವ ವಿಧಾನ…

ಮೊದಲಿಗೆ ಅಕ್ಕಿಯನ್ನು ತೊಳೆದು 20 ನಿಮಿಷಗಳ ಕಾಲ ನೆನೆಸಿಕೊಳ್ಳಿ. ನಂತರ ಒಂದು ಕುಕ್ಕರ್ ಗೆ ಹಾಕಿ 2 ಕಪ್ ನೀರು ಹಾಕಿ 1 ವಿಷಲ್ ಕೂಗಿಸಿಕೊಳ್ಳಿ.
ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ತುಪ್ಪ ಹಾಕಿ ಚಕ್ಕೆ, ಲವಂಗ, ಏಲಕ್ಕಿ, ಜೀರಿಗೆ ಹಾಕಿ ಸ್ವಲ್ಪ ಫ್ರೈ ಮಾಡಿ. ನಂತರ ಇದಕ್ಕೆ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ.
ನಂತರ ಕತ್ತರಿಸಿದ ಪಾಲಾಕ್ ಸೊಪ್ಪು ಹಾಕಿ 2 ನಿಮಿಷ ಚೆನ್ನಾಗಿ ಫ್ರೈ ಮಾಡಿ. ಇದಕ್ಕೆ ಖಾರದ ಪುಡಿ, ಅರಿಶಿನ ಪುಡಿ, ದನಿಯಾ ಪುಡಿ, ಉಪ್ಪು, ಮೊಸರು ಹಾಕಿ ಮಿಕ್ಸ್ ಮಾಡಿ.
ನಂತರ ತುರಿದ ಪನ್ನೀರ್ ಸೇರಿಸಿ ನಿಧಾನಕ್ಕೆ ಮಿಕ್ಸ್ ಮಾಡಿ ಇದಕ್ಕೆ ಅನ್ನ ಹಾಕಿ ಎಲ್ಲಾ ಸರಿಹೊಂದುವಂತೆ ಮಿಕ್ಸ್ ಮಾಡಿ ಒಂದು ಮುಚ್ಚಳ ಮುಚ್ಚಿ 5 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ, ನಂತರ ತುಪ್ಪದಲ್ಲಿ ಫ್ರೈ ಮಾಡಿದ ಗೋಡಂಬಿಯೊಂದಿಗೆ ಅಲಂಕರಿಸಿದರೆ ರುಚಿಕರವಾದ ಪಾಲಾಕ್ ಬಿರಿಯಾನಿ ಸವಿಯಲು ಸಿದ್ಧ.

Exit mobile version