Site icon Kannada News-suddikshana

ವಿಶ್ವಕಪ್ Cricket ಭಾರತ ಬೊಂಬಾಟ್ ಬೌಲಿಂಗ್, ಪಾಕಿಸ್ತಾನ ಕಂಗಾಲ್: ಟೀಂ ಇಂಡಿಯಾಕ್ಕೆ 192 ರನ್ ಗುರಿ

SUDDIKSHANA KANNADA NEWS/ DAVANAGERE/ DATE:14-10-2023

ಅಹಮದಾಬಾದ್: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ (Cricket) ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದೆ. ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡರು. ಪಾಕಿಸ್ತಾನ ತಂಡವು 191 ರನ್ ಗೆ ಸರ್ವಪತನ ಕಂಡಿದೆ.

Read Also This Story:

Davanagere: ಆನ್ ಲೈನ್ ಬಹುಮಾನ ಬಂದಿದೆಯೆಂದು ಹಣ ಹಾಕಿದ್ರೆ ಮುಗೀತು… ಶಿಕ್ಷಕರೊಬ್ಬರಿಗೆ 42 ಲಕ್ಷ ರೂ.ಗೂ ಹೆಚ್ಚು ವಂಚಿಸಿದ್ದೇಗೆ ಗೊತ್ತಾ…?

ಅಬ್ಜುಲ್ಲಾ ಶಫಿಕ್ ಹಾಗೂ ಇಮಾಮ್ ಉಲ್ ಹಕ್ ಮೊದಲ ವಿಕೆಟ್ ಗೆ 41 ರನ್ ಪೇರಿಸಿದರು. ಆದ್ರೆ, 20 ರನ್ ಗಳಿಸಿದ್ದ ಅಬ್ದುಲ್ಲಾ ಶಫಿಕ್ ವಿಕೆಟ್ ಒಪ್ಪಿಸಿದರೆ, ಇಮಾಮ್ ಉಲ್ ಹಕ್ 36 ರನ್ ಗಳಿಸಿ ಔಟಾದರು ಮೂರನೇ ವಿಕೆಟ್ ಗೆ ಉತ್ತಮ ಜೊತೆಯಾಟ ನೀಡಿದ ಬಾಬರ್ ಅಜಮ್ (50) ಹಾಗೂ ಮೊಹಮ್ಮದ್ ರಿಜ್ವಾನ್ (49) ತಂಡದ ಮೊತ್ತ ಹೆಚ್ಚಿಸುವಲ್ಲಿ ಸಫಲರಾದರು. ಆದ್ರೆ, ಅರ್ಧಶತಕ ಗಳಿಸಿದ್ದ ಬಾಬರ್ ಅಜಮ್ ಸಿರಾಜ್ ಬೌಲಿಂಗ್ ನಲ್ಲಿ ಬೋಲ್ಡ್ ಆದರು.

ಅರ್ಧಶತಕ ವಂಚಿತ ಮೊಹಮ್ಮದ್ ರಿಜ್ವಾನ್ ಜಸ್ ಪ್ರೀತ್ ಬೂಮ್ರಾ ಬೌಲ್ ಗೆ ಬೌಲ್ಡ್ ಆದ್ರು. ಸೌದ್ ಶಕೀಲ್, ಇಫ್ತಿಕಾರ್ ಅಹಮ್ಮ್ ಹೆಚ್ಚು ಹೊತ್ತು ಸ್ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಶಾದಾಬ್ ಖಾನ್, ಮೊಹಮ್ಮದ್ ನವಾಜ್ ಸಹ ಎರಡಂಕಿ ದಾಟಲಿಲ್ಲ. ಹಸನ್ ಅಲಿ ಕೇವಲ 12 ರನ್ ಗೆ ವಿಕೆಟ್ ಒಪ್ಪಿಸಿದರು.

ಭಾರತದ ಪರ ಜಸ್ಮಿತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರೆ, ಭಾರತದ ಸಂಘಟಿತ ಬೌಲಿಂಗ್ ಗೆ ಅಲ್ಪಮೊತ್ತಕ್ಕೆ ಪಾಕಿಸ್ತಾನ ಆಲೌಟ್ ಆಯಿತು.

Exit mobile version