Home ಕ್ರೈಂ ನ್ಯೂಸ್ ‘ಸುದರ್ಶನ ಚಕ್ರ’ದ ರಹಸ್ಯ ತಿಳಿಯಲು ಪಾಕ್ ಕಂತ್ರಿ ಬುದ್ಧಿ: S-400 ಮುಂದೆ ಮಂಡಿಯೂರಿದ ವೈರಿ ಪಡೆ, ‘ಆಪರೇಷನ್ ಸಿಂಧೂರ್’ನಲ್ಲಿ ಭಾರತದ S-400 ವರ್ಲ್ಡ್ ರೆಕಾರ್ಡ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

‘ಸುದರ್ಶನ ಚಕ್ರ’ದ ರಹಸ್ಯ ತಿಳಿಯಲು ಪಾಕ್ ಕಂತ್ರಿ ಬುದ್ಧಿ: S-400 ಮುಂದೆ ಮಂಡಿಯೂರಿದ ವೈರಿ ಪಡೆ, ‘ಆಪರೇಷನ್ ಸಿಂಧೂರ್’ನಲ್ಲಿ ಭಾರತದ S-400 ವರ್ಲ್ಡ್ ರೆಕಾರ್ಡ್!

Share
ಸುದರ್ಶನ ಚಕ್ರ
Share

ನವದೆಹಲಿ: ಆಪರೇಷನ್ ಸಿಂಧೂರ್ ವೇಳೆಯಲ್ಲಿ ಭಾರತದ ಅತ್ಯಂತ ಶಕ್ತಿಶಾಲಿ ‘S-400’ ವಾಯು ರಕ್ಷಣಾ ವ್ಯವಸ್ಥೆಯು (ಸುದರ್ಶನ ಚಕ್ರ) ಎಲ್ಲಿ ನಿಯೋಜನೆಗೊಂಡಿದೆ ಎಂಬುದನ್ನು ತಿಳಿಯಲು ಪಾಕಿಸ್ತಾನ ತೀವ್ರ ಹೆಣಗಾಡಿತ್ತು.

ಅದಕ್ಕಾಗಿ ಭಾರತದೊಳಗೆ ತನ್ನ ಗೂಢಚಾರರು ಹಾಗೂ ಸ್ಲೀಪರ್ ಸೆಲ್‌ಗಳನ್ನು (Sleeper Cells) ಸಕ್ರಿಯಗೊಳಿಸಿತ್ತು ಎಂದು ಪಶ್ಚಿಮ ವಾಯು ಕಮಾಂಡ್‌ನ ಮಾಜಿ ಮುಖ್ಯಸ್ಥ, ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ  ಸೌತ್ ಏಷ್ಯನ್ ಇಂಟರ್ನ್ಯಾಷನಲ್ ಸುದ್ದಿ ಸಂಸ್ಥೆ (ANI) ನೀಡಿರುವ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

ಪ್ರಮುಖ ಮುಖ್ಯಾಂಶಗಳು:

200 ಕಿ.ಮೀ ಹತ್ತಿರಕ್ಕೂ ಬರಲಿಲ್ಲ: ರಷ್ಯಾದ ನಿರ್ಮಿತ S-400 ಕ್ಷಿಪಣಿ ನಿರೋಧಕ ವ್ಯವಸ್ಥೆಯ ಭೀತಿಯಿಂದಾಗಿ ಪಾಕಿಸ್ತಾನಿ ಯುದ್ಧ ವಿಮಾನಗಳು ಭಾರತೀಯ ಗಡಿಯ 200 ಕಿಲೋಮೀಟರ್ ಸಮೀಪಕ್ಕೂ ಬರಲು ಸಾಧ್ಯವಾಗಲಿಲ್ಲ.

ವಿಶ್ವ ದಾಖಲೆಯ ಶೂಟೌಟ್: ಕಾರ್ಯಾಚರಣೆಯ ವೇಳೆ S-400 ವ್ಯವಸ್ಥೆಯು ಬರೋಬ್ಬರಿ 314 ಕಿ.ಮೀ ದೂರದಲ್ಲಿದ್ದ ಪಾಕಿಸ್ತಾನದ ವಾಯುಗಾಮಿ ರೇಡಾರ್ (AWACS) ಅನ್ನು ಹೊಡೆದುರುಳಿಸಿತು. ಇದು ಸಫೇಸ್-ಟು-ಏರ್ (Surface-to-Air) ಕ್ಷಿಪಣಿ ದಾಳಿಯ ಇತಿಹಾಸದಲ್ಲೇ ಅತ್ಯಂತ ದೀರ್ಘ ವ್ಯಾಪ್ತಿಯ ದಾಖಲೆಯಾಗಿದೆ.

ಚೀನಾದಿಂದ ಉಪಗ್ರಹ ನೆರವು: ಪಾಕಿಸ್ತಾನವು ಭಾರತದ S-400 ಸ್ಥಳ ಹುಡುಕಲು ವಿದೇಶಿ ಶಕ್ತಿಗಳಿಂದ (ಮುಖ್ಯವಾಗಿ ಚೀನಾದಿಂದ) ರಿಯಲ್-ಟೈಮ್ ಸ್ಯಾಟಲೈಟ್ ಮಾಹಿತಿಯನ್ನು ಪಡೆಯುತ್ತಿತ್ತು.

ಸಂಪೂರ್ಣ ಕಾರ್ಯಾಚರಣೆ ಸ್ವಾತಂತ್ರ್ಯ: 25 ಪ್ರವಾಸಿಗರನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ 2025ರ ಮೇ 7-8 ರಂದು ಭಾರತ ‘ಆಪರೇಷನ್ ಸಿಂಧೂರ್’ ಕೈಗೊಂಡಿತ್ತು. ಸರ್ಕಾರದ ಕಡೆಯಿಂದ ಸೇನೆಗೆ ಸಂಪೂರ್ಣ ಕಾರ್ಯಾಚರಣೆ ಸ್ವಾತಂತ್ರ್ಯ ನೀಡಲಾಗಿತ್ತು. ಕೇವಲ ಉಗ್ರರು ಮತ್ತು ಅವರ ಸೂತ್ರಧಾರರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿತ್ತು.

Share

Leave a comment

Leave a Reply

Your email address will not be published. Required fields are marked *