Site icon Kannada News-suddikshana

ಧಗಧಗಿಸಿದ ಲಾರಿ: ಬೋರ್ ಕೊರೆಯಲು ಬಂದಿದ್ದ ಬೋರ್ವೆಲ್ ಲಾರಿ ಹೊತ್ತಿ ಉರಿದಿದ್ಯಾಕೆ…?

SUDDIKSHANA KANNADA NEWS/ DAVANAGERE/ DATE:26-02-2024

ದಾವಣಗೆರೆ: ಬೋರ್ ಕೊರೆಯಲು ಬಂದಿದ್ದ ಲಾರಿ ಸುಟ್ಟು ಭಸ್ಮವಾದ ಘಟನೆ ದಾವಣಗೆರೆ ತಾಲೂಕಿನ ಕುಕ್ಕುವಾಡ ಸಮೀಪದ ಕುಕ್ಕುವಾಡ ಗ್ರಾಮದಲ್ಲಿ ನಡೆದಿದೆ.

ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಲಾರಿಗೆ ಬೆಂಕಿ ಹತ್ತಿಕೊಂಡಿತು. ಲಾರಿಯು ಧಗ ಧಗನೇ ಹೊತ್ತಿ ಉರಿಯಿತು. ಬೆಂಕಿ
ನಂದಿಸಲು ಯತ್ನಿಸಲಾಯಿತಾದರೂ ಅಗ್ನಿಶಾಮ ದಳ ವಾಹನ ಬರುವಷ್ಟರಲ್ಲಿ ಸಂಪೂರ್ಣವಾಗಿ ಬೆಂಕಿಯಿಂದ ಸುಟ್ಟು ಕರಕಲಾಯಿತು.

ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕುಕ್ಕುವಾಡ ಗ್ರಾಮದಲ್ಲಿ ಜಮೀನಿನಲ್ಲಿ ನೀರಿಗಾಗಿ ಬೋರ್ ವೆಲ್ ಕೊರೆಸಲು ಉದ್ದೇಶಿಸಲಾಗಿತ್ತು. ಲಾರಿಯೂ ಬಂದಿತ್ತು. ಜೊತೆಗೆ ಸಹಾಯಕ್ಕೆ ಎಂದು ಮತ್ತೊಂದು ಲಾರಿ ಬಂದಿತ್ತು.ಈ ವೇಳೆ ಬೋರ್ ವೆಲ್ ಕೊರೆಸಲು ಸಹಾಯಕ್ಕೆ ಬಂದಿದ್ದ ಲಾರಿ ಹೊತ್ತಿ ಉರಿದಿದೆ. ಧರ್ಮರಾಯ ಎಂಬುವವರ ಜಮೀನಿನಲ್ಲಿ ಲಾರಿ ಸುಟ್ಟು ಕರಕಲಾಗಿದ್ದು, ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Exit mobile version