ದಾವಣಗೆರೆ: ಸೇವಾ ನ್ಯೂನತೆ ಹಿನ್ನೆಲೆಯಲ್ಲಿ ಮಾಲೀಕರಿಗೆ ದಂಡದ ಜೊತೆಗೆ ಪರಿಹಾರ ನೀಡುವಂತೆ ಆದೇಶಿಸಲಾಗಿದೆ.
ಈ ಸುದ್ದಿಯನ್ನೂ ಓದಿ: BIG EXCLUSIVE: ಮಾಜಿ ಪ್ರಧಾನಿ ಮೊಮ್ಮಗ ಪ್ರಜ್ವಲ್ ರೇವಣ್ಣ ಅತ್ಯಾಚಾರ ಕೇಸ್ ನಲ್ಲಿ ದೋಷಿ: ಮಾಜಿ ಸಂಸದನಿಗೆ ಶಾಕ್!
ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಕೆ.ಮನೋಹರ್ ಕುಮಾರ್ ರವರ ಮನೆಯ ಗೃಹೋಪಯೋಗಿ ವಸ್ತುಗಳನ್ನು ಚಿತ್ರದುರ್ಗದಿಂದ ದಾವಣಗೆರೆಯ ನಿವಾಸದ ಮನೆಗೆ 2024 ರ ಅಕ್ಟೋಬರ್ 20 ರಂದು ಸಾಗಾಣಿಕೆ ಮಾಡುವಾಗ ಶ್ರೀರಾಮ್ ಪ್ಯಾಕರ್ಸ್ ಅಂಡ್ ಮೂವರ್ಸ್‍ನ ಮಾಲೀಕ ರಮೇಶ್ ಇವರಿಗೆ ಸಾಗಾಣಿಕೆ ವೆಚ್ಚವೆಂದು ರೂ.14,000 ಮೊತ್ತವನ್ನು ನೀಡಿ, ಗೃಹೋಪಯೋಗಿ ವಸ್ತುಗಳನ್ನು ರಸ್ತೆಯ ಮುಖಾಂತರ ಚಿತ್ರದುರ್ಗದಿಂದ ದಾವಣಗೆರೆಯ ನಿವಾಸದ ಮನೆಗೆ ಸಾಗಾಣಿಕೆ ಮಾಡಲಾಗಿರುತ್ತದೆ.
ಆದರೆ ಶ್ರೀರಾಮ್ ಪ್ಯಾಕರ್ಸ್ ಅಂಡ್ ಮೂವರ್ಸ್, ದಾವಣಗೆರೆ ಇವರು ಮನೆಯ ಗೃಹೋಪಯೋಗಿ ವಸ್ತುಗಳಿಗೆ, ಪೀಠೋಪಕರಣಗಳಿಗೆ ಸರಿಯಾಗಿ ಪ್ಯಾಕಿಂಗ್ ಮಾಡದೆ ಸಾಗಾಣಿಕೆ ಮಾಡಿದ್ದರಿಂದ ‘ಡಬಲ್ ವುಡನ್ ಕಾಟ್, ವುಡನ್ ಟೀಪಾಯ್, ಫ್ರಿಡ್ಜ್, ಹೊಸದಾಗಿ ಖರೀದಿ ಮಾಡಲಾದ ಮರದ ಸೋಫಾ ಸೆಟ್ ಹ್ಯಾಂಡಲ್‍ಗಳಲ್ಲಿ 4-5 ಕಡೆಗಳಲ್ಲಿ ಡ್ಯಾಮೇಜ್, ಕ್ರ್ಯಾಚಸ್ ಆಗಿದ್ದು, ಈ ಬಗ್ಗೆ ದೂರುದಾರರಾದ ಕೆ.ಮನೋಹರ್ ಪ್ಯಾಕರ್ಸ್ ಅಂಡ್ ಮೂವರ್ಸ್ ಅವರಿಗೆ ಮೂರು ತಿಂಗಳಿನಿಂದಲೂ ಹಲವಾರು ಬಾರಿ ದೂರವಾಣಿ ಮೂಲಕ ಕೇಳಿಕೊಂಡರೂ ಪೀಠೋಪಕರಣಗಳನ್ನು ಸರಿಪಡಿಸಿಕೊಡದೆ ಕಾಲ ದೂಡುತ್ತಾ ಬಂದಿರುತ್ತಾರೆ.
ಸೇವಾ ನ್ಯೂನ್ಯತೆ ಬಗ್ಗೆ 2025 ರ ಏಪ್ರಿಲ್ 8 ರಂದು ಚಿತ್ರದುರ್ಗ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಾಖಲಿಸಿದ್ದರು. ಶ್ರೀರಾಮ್ ಪ್ಯಾಕರ್ಸ್ ಅಂಡ್ ಮೂವರ್ಸ್ ಇವರ ಸೇವಾ ನ್ಯೂನ್ಯತೆಗೆ ಪೀಠೋಪಕರಣ ಹಾಗೂ ವಸ್ತುಗಳಿಗೆ ಆಗಿರುವ ಡ್ಯಾಮೇಜ್, ಕ್ರ್ಯಾಚಸ್‍ಗಳನ್ನು ರಿಪೇರಿ ಮಾಡಿಸಿಕೊಡಬೇಕು, ಇಲ್ಲದಿದ್ದಲ್ಲಿ ರೂ.1,00,000 ಪರಿಹಾರವನ್ನು ಶೇಕಡಾ 9% ಬಡ್ಡಿಯೊಂದಿಗೆ ಹಾಗೂ ಸೇವಾ ನ್ಯೂನ್ಯತೆಗೆ, ಮಾನಸಿಕ ಹಾಗೂ ದೈಹಿಕ ಹಿಂಸೆಗೆ ದಂಡದ ರೂಪವಾಗಿ ರೂ.15,000 ಪರಿಹಾರವನ್ನು ಪಾವತಿಸಲು ಚಿತ್ರದುರ್ಗ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಹೆಚ್.ಎನ್. ಮೀನಾ ಮತ್ತು ಮಹಿಳಾ ಸದಸ್ಯರಾದ ಬಿ.ಹೆಚ್.ಯಶೋದ ಆದೇಶ ಹೊರಡಿಸಿದ್ದಾರೆ.