Site icon Kannada News-suddikshana

ಆಪರೇಷನ್ ಸಿಂಧೂರ್ ಯಶಸ್ಸು: ನಗರದೇವತೆಗೆ ಸಂಸದರಿಂದ ವಿಶೇಷ ಪೂಜೆ

SUDDIKSHANA KANNADA NEWS/ DAVANAGERE/ DATE-09-05-2025

ದಾವಣಗೆರೆ: ನಗರದೇವತೆ ಶ್ರೀ ದುರ್ಗಾಂಭಿಕಾ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿದ ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ದೇವಿಯ ದರ್ಶನ ಪಡೆದು ನಾಡಿನ ಸುಖ-ಶಾಂತಿ ಹಾಗೂ ಜನರ ಒಳಿತಿಗಾಗಿ ಪ್ರಾರ್ಥಿಸಿದರು.

ಬಳಿಕ ಶಕ್ತಿ ಸ್ವರೂಪಿಣಿಯಾದ ದುರ್ಗಾದೇವಿಯು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ತೊಡಗಿರುವ ನಮ್ಮ ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿಯನ್ನು ದೇವಿ ಅನುಗ್ರಹಿಸಲಿ‌ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Exit mobile version